karunada geleya

dsfdsf

18 Feb 2022

ತುಸು ನಗು

ಗಂಡ:ನಾನು ಎಷ್ಟು ಸಲ ಹೇಳಿದ್ದೀನಿ.ಅಡುಗೆ ಮಾಡುವಾಗ ಮೊಬೈಲ್ ನೋಡ್ಬೇಡ ಅಂತಾ.ರಸಂ ಗೆ ಉಪ್ಪು ಇಲ್ಲ ಹುಳಿ ಇಲ್ಲ.

☺ಹೆಂಡತಿ:ನಾನೂ..ಎಷ್ಟು ಸಲ ಹೇಳಿದ್ದೀನಿ ಊಟ ಮಾಡುವಾಗ ಮೊಬೈಲ್ ನೋಡ್ಬೇಡಿ ಅಂತಾ...ಅನ್ನಕ್ಕೆ ನೀರ್ ಹಾಕ್ಕೊಂಡಿದ್ದೀರಿ.😆😆😆😆😆

ಅನುಮಾನ ಸುಳ್ಳಾಗಬಹುದು ಅದರೆ ಅನುಭವ ಸುಳ್ಳಾಗಲಾರದು, ಏಕೆಂದರೆ ಅನುಮಾನ ಕೇವಲ ನಮ್ಮ ಮನಸ್ಸಿನ ಕಲ್ಪನೆಯಾಗಿರುತ್ತದೆ, ಅನುಭವ ಜೀವನದಲ್ಲಿ ನಿಜವಾಗಿ ಪಡೆದುಕೊಂಡಿರುತ್ತೆವೆ..

ಕನ್ನಡದ ನುಡಿಮುತ್ತುಗಳು ಹಾಗು ನೀತಿ ಮಾತುಗಳು.

 ೧. ನಾವು ಎಷ್ಟೇ ಒಳ್ಳೆಯವರಾದರು ಚುಚ್ಚಿ 

ಮಾತನಾಡುವ ಜನರು ಇದ್ದೆ ಇರುತ್ತಾರೆ 

ಎಂದೂ ಬೇಸರ ಪಟ್ಟು ಕೊಳ್ಳುವುದುಬೇಡ...!!

ಸೂಜಿ ಇಂದ ಹೂವನ್ನು ಪೋಣಿಸುವಾಗ 

ಹೂವು ನೋವು ಪಟ್ಟುಕೊಳ್ಳುವುದಿಲ್ಲ 

ಅದು ಹೂವಿನ ಹಾರವಾಗಿ ದೇವರ ಮಾಲೆಯಾಗುತ್ತದೆ...!!


೨. "ಪ್ರತಿ ಬಾರಿ ಓದಿದ ಸಾಲು 

ಹೊಸ ಅರ್ಥವನ್ನೇ ನೀಡುತ್ತವೆ. 

ಪ್ರತಿ ದಿನದ ಬದುಕು ಹೊಸ 

ಜೀವನವನ್ನೇ ಕಲಿಸುತ್ತದೆ."


೩. "ಕನಸಿಗೂ ಗುರಿಗೂ ಇರುವ ವ್ಯತ್ಯಾಸವೆಂದರೆ, 

ಕನಸಿಗೆ ನಿದ್ದೆ ಬೇಕು. ಗುರಿಗೆ ಹಾಗಲ್ಲ, 

ನಿದ್ದೆಗೆ ಅವಕಾಶವಿಲ್ಲದ ಶ್ರಮ ಬೇಕು. 

ಶ್ರಮಿಸಿ ಗುರಿ ತಲುಪೋಣ."


೪. "ಎತ್ತರಕ್ಕೆ ಬೇಳಿಬೇಕು ನಿಜಾ..! 
ಅದಕ್ಕಾಗಿ ಮೆಟ್ಟಿಲುಗಳನ್ನು ತುಳಿಬೇಕೆ ಹೊರತು,
ಇನ್ನೊಬ್ಬರನ್ನು ತುಳಿದು ಅಲ್ಲಾ"

೫. "ನಿನ್ನೆಯ ಪುಟಗಳನ್ನು ಪರಿಷ್ಕರಿಸಲು ಸಾಧ್ಯವಿಲ್ಲ, 

ಆದರೆ ನಾಳೆಯ ಪುಟಗಳು ಖಾಲಿಯಾಗಿವೆ ಮತ್ತು ನೀವು ಪೆನ್ನು ಹಿಡಿದಿದ್ದೀರಿ.  

ಅದನ್ನು ಸ್ಪೂರ್ತಿದಾಯಕ ಕಥೆಯನ್ನಾಗಿ ಮಾಡಿ."


೬. "ನಿಮ್ಮ ಇಡೀ ಜೀವನದಲ್ಲಿ ಒಂದು ದಿನ,

ಒಂದು ಗಂಟೆ ಮತ್ತು ಒಂದು ನಿಮಿಷ ಮತ್ತೆ ಬರುವುದಿಲ್ಲ. 

ಆದ್ದರಿಂದ ಜಗಳ, ಕೋಪವನ್ನು ತಪ್ಪಿಸಿ ಮತ್ತು ಪ್ರತಿಯೊಬ್ಬ 

ವ್ಯಕ್ತಿಯೊಂದಿಗೆ ಸುಂದರವಾಗಿ ಮಾತನಾಡಿ."


೭. "ಸೂರ್ಯನ ತಾಪ ತಂದೆಯ ಕೋಪ ಇವೆರಡನ್ನು 

ಸಹಿಸಿಕೊಳ್ಳಿ, ಏಕೆಂದರೆ 

ಸೂರ್ಯ ಮುಳುಗಿದರೆ ಜಗತ್ತು ಕತ್ತಲು. 

ತಂದೆ ಇಲ್ಲದಿದ್ದರೆ ಜೀವನವೇ ಕತ್ತಲು....."


೮. "ಕಲ್ಲಿಗೆ ಸುಂದರ

ಆಕಾರ ಬರಬೇಕಾದರೆ ಉಳಿಪೆಟ್ಟು ಬೀಳಲೇಬೇಕು,,,,

ಬದುಕು ಸುಂದರ ಆಗಲು

ಕಷ್ಟ ಸುಖಗಳು

ಅನುಭವಿಸಲೇಬೇಕು,,,


೯. "ದುಡ್ಡು ಕೊಟ್ಟು ಕಲಿಯುವುದು ಶಾಲೆಯಲ್ಲಿ 

ಕಣ್ಣೀರಿಟ್ಟು ಕಲಿಯುವುದು ಜೀವನದಲ್ಲಿ." 


೧೦. "ಹೊಟ್ಟೆಯಲ್ಲಿ ಹೋದ ವಿಷ 

ಒಬ್ಬರನ್ನು ಸಾಯಿಸುತ್ತೇ ಕಿವಿಗೆ ಹೋದ ಮಾತು

 ಸಂಬಂಧಗಳನ್ನು ಹಾಳು ಮಾಡುತ್ತೆ. ಯೋಚನೆ ಮಾಡಿ."


೧೧. "ಅಳಸಿದ ಅನ್ನ ತಿನ್ನೋ ನಾಯಿಗಿರೋ ನಿಯತ್ತು🐕  ಮನುಷ್ಯರಿಗಿಲ್ಲ.🚶‍♂️" 


೧೨. ನಿದ್ರೆ ಎಷ್ಟು ಅದ್ಭುತವೆಂದರೆ, 

ಬಂದರೆ ಎಲ್ಲವನ್ನೂ ಮರೆಸುತ್ತದೆ. 

ಬರದಿದ್ದರೆ ಎಲ್ಲವನ್ನೂ ನೆನಪಿಸುತ್ತದೆ."


೧೩. "ನಂಬಿಕೆಯೊಂದಿಗೆ, ಮೌನವೂ ಸಹ ಅರ್ಥವಾಗುತ್ತದೆ.  ಆದರೆ.

ನಂಬಿಕೆಯಿಲ್ಲದೆ, ಪ್ರತಿ ಪದವನ್ನು ತಪ್ಪಾಗಿ ಅರ್ಥೈಸಲಾಗುತ್ತದೆ.

 "ನಂಬಿಕೆಯು ಸಂಬಂಧದ ಆತ್ಮ" 


೧೪. ಬದಲಿಸಲಾಗದ ಮನುಷ್ಯನ ವ್ಯಕ್ತಿತ್ವವನ್ನು

ಪ್ರಕೃತಿ ಬದಲಿಸುತ್ತದೆ ಇದೇ 

ಮನುಷ್ಯನಿಗೂ ಪ್ರಕೃತಿಗೂ ಇರೋ ವ್ಯತ್ಯಾಸ.. 

"ಕಾಲಾಯ ತಸ್ಮಹೇ ನಮಃ"


೧೫. "ಜೀವನದಲ್ಲಿ ಹಣದ ಕೊರತೆ ಇದ್ದರೂ,

ಗುಣದ ಕೊರತೆ ಇರಬಾರದು.. 

ಹಣ ಬೇರೆಯವರಿಂದ ಕೇಳಿ ಪಡೆಯಬಹುದು, ಗುಣ ಅಲ್ಲಾ"


೧೬. "ಅವಶ್ಯಕತೆ ಮುಗಿದ ಮೇಲೆ ಆತ್ಮವೇ ದೇಹನ ಬಿಟ್ಟು ಹೋಗುತ್ತೆ. 

ಇನ್ನು ಮನುಷ್ಯರು ಯಾವ ಲೆಕ್ಕ."


೧೭. ಬುದ್ದಿ ಇರೋನು ಅವಕಾಶ ಹುಡಕತಾನೇ,🚶‍♂️ 

ಬುದ್ದಿ ಜೊತೆ ಶಕ್ತಿ ಇರೋನು ಅವಕಾಶ ಸೃಷ್ಟಿ ಮಾಡಕೋತಾನೇ,💪

ಇವೇರಡು ಇಲ್ಲದೇ ಇರೋನು ಬಕೇಟ ಹಿಡಿದ ಕಲಿತಾನೇ.🪣"


೧೮. "ಜೀವನದಲ್ಲಿ ಕಷ್ಟಗಳು ಬರಲೇ ಬೇಕು 

ಆಗಲೇ ಗೊತ್ತಾಗೋದು ಯಾರು 

ಕೈ ಹಿಡಿತಾರೆ ಯಾರು ಕೈ ಕೊಡುತ್ತಾರೆ ಅಂತ.!


೧೯. "ನಾಳೆ ಎಂಬುವುದು ಸಾವು,

ಇವತ್ತು ಎಂಬುವುದು ಬದುಕು

ಈಗ ಎನ್ನುವುದೇ ಸಾಧನೆ ಇಷ್ಟೇ ಜೀವನ..!"


೨೦. "ಕಂಡು ಕಾಣದಂತೆ ಹೋದವರ ಮುಂದೆ ಕತ್ತೆತ್ತಿ ನಡೆಯಬೇಕು. 

ಮುಖ ತಿರುಗಿಸಿ ಹೋದವರ ಮುಂದೆ ಮಂದಹಾಸದಿ ಮೆರೆಯಬೇಕು.

ಸ್ವಾಭಿಮಾನ ಯಾರಪ್ಪನ ಸ್ವತ್ತಲ್ಲ."


೨೧. "ನಾನು ನನ್ನದು ಅನ್ನುವುದು ಕೆಲವರ ಗುಣ,

ಎಲ್ಲರೂ ನಮ್ಮವರು ಎನ್ನುವುದು ನನ್ನ ಗುಣ."


೨೨. "ಜೀವನವು ಒಂದು ಪುಸ್ತಕದಂತೆ.

ಕೆಲವು ಅಧ್ಯಾಯಗಳು ದುಃಖ,

ಕೆಲವು ಸಂತೋಷ ಮತ್ತು ಕೆಲವು ರೋಚಕ.

ಆದರೆ ನೀವು ಎಂದಿಗೂ ಪುಟವನ್ನು ತಿರುಗಿಸದಿದ್ದರೆ. 

ಮುಂದಿನ ಅಧ್ಯಾಯವು ಏನೆಂದು ನಿಮಗೆ ತಿಳಿದಿರುವುದಿಲ್ಲ.


೨೩. "ನಿಮ್ಮ ಸಂತೋಷಕ್ಕಾಗಿ ಸಂತೋಷವಾಗಿರುವವರನ್ನು

ನಿಮ್ಮ ದುಃಖಕ್ಕಾಗಿ ದುಃಖಿಸುವ ಜನರನ್ನು ಗಮನಿಸಿ.  

ಅವರು ನಿಮ್ಮ ಹೃದಯದಲ್ಲಿ ವಿಶೇಷ ಸ್ಥಾನಕ್ಕೆ ಅರ್ಹರು."


೨೪. "ನಿಮ್ಮ ಹೃದಯವನ್ನು ಅನುಸರಿಸಿ,

ನಿಮ್ಮ ಆಂತರಿಕ ಧ್ವನಿಯನ್ನು ಆಲಿಸಿ,

ಇತರರು ಏನು ಯೋಚಿಸುತ್ತಾರೆ ಎಂಬುದರ 

ಬಗ್ಗೆ ಕಾಳಜಿ ವಹಿಸುವುದನ್ನು ನಿಲ್ಲಿಸಿ."


೨೫. "ಮನಸ್ಸು ನೀರಿನಂತೆ,ಅದು ಪ್ರಕ್ಷುಬ್ಧವಾಗಿದ್ದಾಗ, 

ಅದನ್ನು ನೋಡಲು ಕಷ್ಟವಾಗುತ್ತದೆ,

ಶಾಂತವಾದಾಗ ಎಲ್ಲವೂ ಸ್ಪಷ್ಟವಾಗುತ್ತದೆ."


೨೬. "ಸಿಹಿ ಪದಗಳು ಯಾವಾಗಲೂ ನಿಜವಲ್ಲ, 

ನಿಜವಾದ ಪದಗಳು ಯಾವಾಗಲೂ ಸಿಹಿಯಾಗಿರುವುದಿಲ್ಲ,

ಪದಗಳು ಏನೇ ಹೇಳಬಹುದು, ಕ್ರಿಯೆಗಳು ಯಾವಾಗಲೂ ಸತ್ಯವನ್ನು ಹೇಳುತ್ತವೆ."


೨೭. "ಮನಸ್ಸಿನ ರಹಸ್ಯ"

 "ಮನಸ್ಸು ದುರ್ಬಲವಾಗಿದ್ದರೆ, ಪರಿಸ್ಥಿತಿಯು ಸಮಸ್ಯೆಯಾಗುತ್ತದೆ,

ಮನಸ್ಸು ಸಮತೋಲನದಲ್ಲಿದ್ದಾಗ,

 ಪರಿಸ್ಥಿತಿ ಸವಾಲಾಗಿದೆ,

ಮನಸ್ಸು ದೃಢವಾದಾಗ ಪರಿಸ್ಥಿತಿಯು ಒಂದು ಅವಕಾಶವಾಗುತ್ತದೆ."


ಕರುನಾಡ ಗೆಳೆಯ


16 Feb 2022

ಕನ್ನಡದ ನುಡಿಮುತ್ತುಗಳು ಹಾಗು ನೀತಿ ಮಾತುಗಳು.

 ೧. ನಮ್ಮನ್ನು ಅರ್ಥ ಮಾಡಿಕೊಳ್ಳಿ ಅಂಥ ಯಾರನ್ನು ಬೇಡಿಕೊಳ್ಳುವ ಅವಶ್ಯಕತೆ ಇಲ್ಲ!! ಅವರಿಗೆ ನಾವು ಬೇಕು ಅಂಥ ಅನಿಸಿದರೆ ಅವರೇ ನಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೆ.

೨. ಜೀವನದಲ್ಲಿ ಅರಿತು ಬಾಳುವುದಕ್ಕಿಂತ ಮರೆತು ಬಾಳುವುದನ್ನು ಕಲಿಯಬೇಕು ಯಾಕೆಂದರೆ ಇಲ್ಲಿ ಯಾರು ಯಾರಿಗೂ ಆಗಲ್ಲ.

೩. ನಮಗಾಗಿ ಮಾಡಿಕೊಂಡ ಕೆಲಸಗಳು ನಮ್ಮೊಂದಿಗೆ ಮುಗಿದು ಹೋಗಿಬಿಡುತ್ತವೆ, ಆದರೆ ಇತರರಿಗಾಗಿ ಮಾಡಿದ ಕೆಲಸಗಳು ನಮ್ಮ ನಂತರವೂ ಉಳಿದಿರುತ್ತವೆ.

೪. ನಗುತ್ತಾ ಮಾಡಿದ ಪಾಪಗಳನ್ನು ಅಳುತ್ತಾ ಅನುಭವಿಸಲೇಬೇಕು.
ಕಾಲ ತಪ್ಪದೇ ಸಮಾಧಾನ ನೀಡುತ್ತದೆ.

೫. ಈ ಜಗತ್ತಿನಲ್ಲಿ ಏನೇನೋ ನಂಬಿ ಮೋಸ ಹೋಗಿರಬಹುದು.... ಆದರೆ ಹೆತ್ತ ತಾಯಿ ಹಾಗೂ ಭೂಮಿ ತಾಯಿನ ನಂಬಿ ಮೋಸ ಹೋದವರು ಈ ಜಗತ್ತಿನಲ್ಲಿ ಯಾರು ಇಲ್ಲ....

೬. ನಾವು ಯಾವುದೇ ಸೇಡು ತೀರಿಸಿಕೊಳ್ಳುವ ಅವಶ್ಯಕತೆಯೇ ಇಲ್ಲ, ಕೇವಲ ಒಂದು ಹೆಜ್ಜೆ ಹಿಂದೆ ಇಟ್ಟು ಕಾದು ನೋಡಿ, ನಮ್ಮನ್ನು ನೋವಿನಿಂದ ನರಳುವಂತೆ ಮಾಡಿದವರು ಕ್ರಮೇಣ ತಮ್ಮನ್ನು ತಾವೇ ನೋವಿನಿಂದ ನರಳಿಸಿಕೊಳ್ಳುತ್ತಾರೆ.

೭. ನಮಗಾಗಿ ಯಾರಿಗೆ ಸಮಯವಿಲ್ಲವೋ ಅವರನ್ನು ತೊಂದರೆಗೊಳಿಸಬಾರದು, ಅವರು ಅವರದೇ ಪ್ರಪಂಚದಲ್ಲಿ ಕಾರ್ಯನಿರತರಾಗಿರುತ್ತಾರೆ ಮತ್ತು ಆ ಪ್ರಪಂಚದಲ್ಲಿ ಅವರಿಗೆ ನಮ್ಮ ಅಗತ್ಯವಿರುವುದಿಲ್ಲ.

೮. ನೀವು ಪಡೆದುಕೊಳ್ಳಲಾಗದ ಎಲ್ಲ ವಸ್ತುಗಳನ್ನು ನೀವು ನಿಮ್ಮ ಮಕ್ಕಳಿಗೆ ಕೊಡಿಸುವ ಬದಲು, ನೀವು ಕಲಿಯಲಾಗದ ಎಲ್ಲ ವಿಷಯಗಳನ್ನು ಅವರಿಗೆ ಕಲಿಸಿ ವಸ್ತುಗಳು ಅಳಿದು ಹೋಗುತ್ತವೆ ಆದರೆ ಜ್ಞಾನ ಶಾಶ್ವತವಾಗಿರುತ್ತದೆ.

೯. ಒಮ್ಮೆ ಕ್ಷಮಿಸಿ ಬಿಡು, ಮತ್ತೊಮ್ಮೆ ಕ್ಷಮಿಸಿ ನೋಡು, ಮತ್ತೆ ಮರುಕಳಿಸಿದರೆ, ಅದು ನಿನಗೆ ಆಗುತ್ತಿರುವ ಮೊಸವೆಂದು ತಿಳಿದು ದೂರ ಸರಿದು ಬಿಡು.

೧೦. ಬೇರೆಯವರ ಸಂತೋಷದಲ್ಲಿ ಭಾಗಿಯಾಗುವುದಕ್ಕಿಂತ ಅದಕ್ಕೆ ಕಾರಣವೇ ನಾವಾಗಬೇಕು. ಬೇರೆಯವರ ದುಃಖಕ್ಕೆ ಕಾರಣವಾಗುವುದಕ್ಕಿಂತ ಅದರಲ್ಲಿ ಭಾಗಿಯಾಗಬೇಕು, ಇವೆರಡರಲ್ಲಿ ಸಿಗುವ ಸಂತಸ, ಸಮಾಧಾನ ಅಷ್ಟಿಷ್ಟಲ್ಲ.

೧೧. ಇದುವರೆಗಿನ ಜೀವನವನ್ನೊಮ್ಮೆ ಹಿಂದಕ್ಕೆ ತಿರುಗಿ ನೋಡಿದರೆ ಅನುಭವ ಸಿಗುತ್ತೆ, ಮುಂದಕ್ಕೆ ನೋಡಿದರೆ ಭವಿಷ್ಯ ಸಿಗುತ್ತೆ, ಸುತ್ತಲೂ ನೋಡಿದರೆ ಸತ್ಯ ಅರಿವಿಗೆ ಬರುತ್ತದೆ, ನಮ್ಮೊಳಗೆ ನಾವೇ ನೋಡಿಕೊಂಡರೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹೆಜ್ಜೆಗಳು ದಾರಿ ತೋರಿಸಿದರೆ ಕಷ್ಟಗಳು ಗುರಿ ತಲುಪಿಸುತ್ತವೆ.

೧೨. ಸೋಲಿಗೆ ಚಿಂತಿಸಬೇಕಾಗಿಲ್ಲ ನಿಜವಾಗಿಯೂ ನಾವು ಯೋಚಿಸಬೇಕಾದ್ದು ನಾವು ಪ್ರಯತ್ನಿಸದೆ ಕಳೆದುಕೊಂಡ ಅವಕಾಶಗಳ ಬಗ್ಗೆ. ಸತತ ಪ್ರಯತ್ನ ಜಾರಿಯಲ್ಲಿರಲಿ.

೧೩. ಸಮಸ್ಯೆ ಹಿಂದೆ ಉತ್ತರ.
ದುಃಖದ ಹಿಂದೆ ಸುಖ.
ಪ್ರತಿ ಕಷ್ಟದ ಹಿಂದೆ ಒಂದು ಅವಕಾಶ ಯಾವಾಗಲೂ ಇರುತ್ತದೆ. ಕಷ್ಟಗಳನ್ನು ಮೌನವಾಗಿ ದಾಟಬೇಕು. ಪರಿಶ್ರಮ ಸದ್ದಿಲ್ಲದೆ ಸಾಗುತ್ತಿರಬೇಕು. ಆಗ ಸಿಗುವ ಯಶಸ್ಸಿನ ಫಲ ಜಗತ್ತಿಗೆ ಕೇಳಿಸುವಷ್ಟು ಜೋರಾಗಿರುತ್ತದೆ.

೧೩. ಕನಸುಗಳಿಗೆ ಸ್ವತಃ ನನಸಾಗುವ ಶಕ್ತಿ ಇರುವುದಿಲ್ಲ, ಅವುಗಳನ್ನು ನನಸಾಗಿ ಪರಿವರ್ತಿಸಲು ಸಾಧ್ಯವಾಗುವುದು ನಾವು ಕೆಲಸದಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಂಡು ಬೆನ್ನತ್ತಿದಾಗಲೇ ಸಾಕಾರಗೊಳ್ಳುತ್ತವೆ.

೧೪. ಕೋಟಿ ಇದ್ದರೇನು? ಮೌಲ್ಯವಿಲ್ಲದ ಜೀವನ ನಿರರ್ಥಕ, ಜೀವನವೆಂಬುದು ಕೇವಲ ಹಣದಿಂದ ಸಾಗುವ ದೋಣಿಯಲ್ಲ ಅದಕ್ಕೆ ಮಾನವೀಯತೆ ಎಂಬ ನಾವಿಕ ಮತ್ತು ದಾನ-ಧರ್ಮ ಎಂಬ ಹುಟ್ಟು ಅವಶ್ಯಕ.

೧೫. ಎಲ್ಲವೂ ಹಣೆಬರಹದಲ್ಲಿ ಇದ್ರೆ ಸಿಗುತ್ತೆ ಅಂಥ ಸುಮ್ಮನೆ ಕುಳಿತುಕೊಳ್ಳಬಾರದು, ಹಣೆಬರಹದಲ್ಲಿ ಸಿಗೋದು ಕೇವಲ ೧% ಆದರೆ ನಮ್ಮ ಪರಿಶ್ರಮದಲ್ಲಿ ಸಿಗೋದು ೯೯% ಆದ್ದರಿಂದ ಸದಾ ಪರಿಶ್ರಮದಿಂದ ಕ್ರಿಯಾಶೀಲರಾಗಬೇಕು.

ಕನ್ನಡದ ನುಡಿಮುತ್ತುಗಳು ಹಾಗು ನೀತಿ ಮಾತುಗಳು

೧. ಮಾತಿನ ಬೆಲೆ ತಿಳಿದವರು

ಮೊದಲು ಹೃದಯದ ತಕ್ಕಡಿಯಲ್ಲಿ ತೂಗಿ

ನಂತರ ಮಾತನಾಡುತ್ತಾರೆ.

ಆದರೆ ಮಾತಿನ ಬೆಲೆ ತಿಳಿಯದವರು

ಮೊದಲು ಮಾತನಾಡಿ ನಂತರ

ಹೃದಯದ ತಕ್ಕಡಿಯಲ್ಲಿ ತೂಗಿ

ತಾವೂ ನೊಂದು ಬೇರೆಯವರನ್ನು ನೋಯಿಸುತ್ತಾರೆ.


೨. ಇರುವುದೆಲ್ಲವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ,

ಕಳಕೊಂಡ ಎಲ್ಲವನ್ನೂ ಪಡೆಯಲೂ ಸಾಧ್ಯವಿಲ್ಲ,

ಪಡೆದುಕೊಂಡ ಎಲ್ಲವನ್ನೂ ಕೊಡಲೂ ಸಾಧ್ಯವಿಲ್ಲ,

ಅಂದುಕೊಂಡದ್ದೆಲ್ಲವನ್ನು ಮಾಡಲೂ ಸಾಧ್ಯವಿಲ್ಲ,

ಸಾಧಿಸಿದ್ದೆಲ್ಲವನ್ನು ತೋರಿಸಲೂ ಸಾಧ್ಯವಿಲ್ಲ,

ಈ ಎಲ್ಲಾ ಸಾಧ್ಯವಿಲ್ಲಗಳ ನಡುವೆ ಸಾಧ್ಯವಿರುವುದು ಕೆಲವು,

ಅದೇ "ಪ್ರೀತಿ, ವಿಶ್ವಾಸ, ಸ್ನೇಹ, ನಂಬಿಕೆ ಮತ್ತು ಸಂಬಂಧ"

ಇದನ್ನು ಉಳಿಸಿಕೊಂಡು ಹೋಗುವುದೇ ಜೀವನ. 


೩. ಸಮಯ, ಅಧಿಕಾರ, ಹಣ ಮತ್ತು ಶರೀರ ನಮಗೆ ಜೀವನದ ಎಲ್ಲಾ ಸಮಯಗಳಲ್ಲೂ ಸಹಕರಿಸುವುದಿಲ್ಲ. ಆದರೆ ಒಳ್ಳೆಯ ನಡತೆ, ಒಳ್ಳೆಯ ತಿಳುವಳಿಕೆ, ಒಳ್ಳೆಯ ಮನಸ್ಸುಗಳು ನಮಗೆ ಯಾವಾಗಲೂ ಸಹಕರಿಸುತ್ತವೆ. 

೪. ಸತ್ಯನಿಷ್ಠೆ, ಪವಿತ್ರತೆ ಮತ್ತು ನಿಸ್ವಾರ್ಥತೆ ಇವು ಯಾರಲ್ಲಿರುತ್ತದೆಯೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಇವುಗಳಿಂದ ಸಂಪನ್ನನಾದವನು ಇಡೀ ಜಗತ್ತಿನ ವಿರೋಧವನ್ನೇ ಎದುರಿಸಬಲ್ಲ.

೫.  ಶಸ್ತ್ರ ಮತ್ತು ಶಾಸ್ತ್ರ ಇವೆರಡಕ್ಕೆ ಇರುವ ವ್ಯತ್ಯಾಸ.... 

ಶಸ್ತ್ರ ಬದುಕನ್ನು ಕೊನೆಗೊಳಿಸುತ್ತದೆ ಶಾಸ್ತ್ರ ಬದುಕನ್ನು ನಿರೂಪಿಸುತ್ತದೆ. 

೬ ಗೆಲ್ಲಲೇಬೇಕೆಂಬ ಹಠವಿರಬಾರದು.

ಪ್ರಯತ್ನಿಸಿ ಸೋತರೂ ಸರಿಯೇ.

ನಾವು ನಡೆವ ಮಾರ್ಗವನ್ನು

ನಮ್ಮ ಅಂತರಾತ್ಮ ಒಪ್ಪಿದರೆ ಸಾಕು.

ಹಿಯಾಳಿಸುವ ಮಾತಿಗೆ ಕಿವಿಕೊಡಬಾರದು ಅಷ್ಟೇ.


೭. ತಿಳಿಯಬೇಕಾದ್ದದು  ಸಮುದ್ರದಷ್ಟು,

ತಿಳಿದಿರುವುದು ಹನಿಯಷ್ಟು.

ಮಾತುಗಳನ್ನು ಎಣಿಸಿ ನೋಡಬಾರದು,

ತೂಕ ಮಾಡಿ ನೋಡಬೇಕು.

ಹಸಿವು ಚೆನ್ನಾಗಿದ್ದರೆ ಊಟ ಚೆನ್ನಾಗಿಯೇ ಇರುತ್ತದೆ.

 

೮. ನದಿಯಿಂದ ಪ್ರತಿಯೊಬ್ಬರೂ ನೀರನ್ನು ತೆಗೆದುಕೊಂಡು ಹೋದರೂ...

ಅದೇನು ಬತ್ತಿ ಹೋಗುವುದಿಲ್ಲ. ಮೊದಲಿಗಿಂತ ರಭಸವಾಗಿ ಹರಿಯುತ್ತದೆ.

ಬೇರೆಯವರಿಗೆ ಸಹಾಯ ಮಾಡುವುದರಿಂದ ನಾವೇನೂ ಖಾಲಿ ಆಗುವುದಿಲ್ಲ.

ಮೊದಲಿಗಿಂತ ಹೆಚ್ಚು ಬಲಿಷ್ಠವಾಗುತ್ತೇವೆ. 


೯. ಜೇಬು ಖಾಲಿಯಾದಾಗ, ಎದುರಾಗುವ ಒಂದೊಂದು ತಿರುವು ಕೂಡಾ

ಒಂದೊಂದು ಪಾಠವನ್ನು ಹೇಳಿಕೊಡುತ್ತದೆ.

ಆದರೆ ಜೇಬು ತುಂಬಿದಾಗ ಎದುರಾಗುವ 

ಪ್ರತಿಯೊಂದು ತಿರುವು ಕೂಡಾ ನಮ್ಮನ್ನು

ದಾರಿ ತಪ್ಪುವಂತೆ ಮಾಡುತ್ತದೆ. 

೧೦. ಕೆಲವೇ ತಪ್ಪುಗಳಿಗಾಗಿ ಒಂದು ಉತ್ತಮ ಸಂಬಂಧ ಮುರಿದುಕೊಳ್ಳಬೇಡಿ.

ಏಕೆಂದರೆ ಪರಿಪೂರ್ಣತ್ವ ಕೇವಲ ತತ್ವ ಮಾತ್ರ.

ಇದರ ಜೊತೆಗೆ ನಾನು ಸರಿಯಾಗಿದ್ದೇನೆ ಎಂಬುದೂ ಭ್ರಮೆ.

ಹೀಗಾಗಿ ತಪ್ಪುಗಳನ್ನು ಮನ್ನಿಸಿ ಸಂಬಂಧ ಉಳಿಸಿಕೊಳ್ಳಿ.

೧೧. ಮನುಷ್ಯ ಮಾಡಿದ ಅತ್ಯಂತ ಕೆಟ್ಟ ಅವಿಷ್ಕಾರ ಅಂದರೆ "ದುಡ್ಡು....."

ಅದು ಸಂಬಂಧ, ಪ್ರೀತಿ, ಸ್ನೇಹ, ವಿಶ್ವಾಸ ಇವನೆಲ್ಲವನ್ನು ಹಾಳು ಮಾಡುತ್ತದೆ.


೧೨.  ಜೀವನದಲ್ಲಿ ಹೇಗಾದರೂ ಸರಿಯೇ,

ಬರೀ ಗೆಲ್ಲಬೇಕು ಎಂಬ ಭ್ರಮೆ ಬೇಡ.

ನಮ್ಮನ್ನು ಅನುಸರಿಸುವವರು ನಮ್ಮ

ಸಾಧನೆಯನ್ನು ಅನುಸರಿಸುವುದಿಲ್ಲ

ಬದಲಾಗಿ ನಾವು ತುಳಿದ ಹಾದಿಯನ್ನು ಅನುಸರಿಸುತ್ತಾರೆ. 


೧೩.  ಸದಾ ಶ್ರೇಷ್ಠ ಚಿಂತನೆಗಳಿಂದ ಮನಸ್ಸನ್ನು ತುಂಬಿ.

ಸೋಲನ್ನು ಲಕ್ಷಿಸಬೇಡಿ.

ಹೋರಾಟ ಮತ್ತು ತಪ್ಪುಗಳ ಲೆಕ್ಕ ಇಡಬೇಡಿ.

ಸಾವಿರ ಸಲ ಸೋತರೂ ಮತ್ತೊಮ್ಮೆ ಪ್ರಯತ್ನಿಸಿರಿ.

೧೪. "ಬೆಳಕಿಗೋಸ್ಕರ ಮೈಸುಟ್ಟುಕೊಂಡ ಬತ್ತಿ ಯಾರಿಗೂ ಕಾಣಿಸಲಿಲ್ಲ".

ಆ ಬೆಳಕಿಗೋಸ್ಕರ ಅಸ್ತಿತ್ವವನ್ನೇ ಕಳೆದುಕೊಂಡ ಎಣ್ಣೆ ಯಾರಿಗೂ ಕಾಣಿಸಲಿಲ್ಲ.

ಆ ಬೆಳಕಿಗೋಸ್ಕರ ಆಶ್ರಯ ಕೊಟ್ಟ ಹಣತೆ ಯಾರಿಗೂ ಕಾಣಿಸಲಿಲ್ಲ.

ಹಾಗೆಯೇ ಜೀವನ, ಕೆಲವು ಸಲ ನಮ್ಮ ಶ್ರಮ ಇನ್ನೊಬ್ಬರ ಖ್ಯಾತಿಗೆ ಕಾರಣವಾಗುತ್ತದೆ. 

೧೫. ಖುಷಿ, ಸಂತೋಷ ಎನ್ನುವುದು ಪ್ರತಿಯೊಬ್ಬ

ವ್ಯಕ್ತಿಯ ಒಳಗಿರುವ ಅಕ್ಷಯ ಪಾತ್ರೆ

ಅದು ಎಂದಿಗೂ ಬರಿದಾಗುವುದಿಲ್ಲ.

ತನ್ನಲ್ಲಿರುವ ಖುಷಿಯನ್ನು ಇತರರೊಂದಿಗೆ

ಹಂಚುವ ಮೂಲಕ ಇನ್ನೊಬ್ಬರ ಮೊಗದಲ್ಲೂ

ಆ ಸಂತಸವನ್ನು ಕಾಣಬಹುದು. 


೧೬. ಜನ ನಡವಳಿಕೆಗಳನ್ನು ಓದಿ ಕಲಿಯುವದಕ್ಕಿಂತ

ನೋಡಿ ಕಲಿಯುವುದೇ ಜಾಸ್ತಿ.

ಆದ್ದರಿಂದ ನಡೆ ಮತ್ತು ನುಡಿ ಸಂಸ್ಕಾರಕ್ಕೆ ಮಾದರಿಯಾಗಿರಲಿ. 


೧೭. ನೊಣಗಳು ನಮ್ಮ ದೇಹವನ್ನು ಬಿಟ್ಟು

ಗಾಯದ ಮೇಲೆಯೇ ಕುಳಿತುಕೊಳ್ಳುವ ಹಾಗೆ,

ಕೆಲವರು ನಮ್ಮಲ್ಲಿರುವ ಸದ್ಗುಣಗಳನ್ನು

ತಳ್ಳಿಹಾಕಿ ಲೋಪದೋಷಗಳನ್ನು ಮಾತ್ರ ಹುಡುಕುತ್ತಾರೆ,

ಚಿಂತಿಸದಿರಿ ಹುಡುಕುವವರು ಹುಡುಕಿಕೊಂಡು ಇರಲಿ

ನಮಗೆ ನಮ್ಮತನದ ಅರಿವಿರಲಿ,

ನಮ್ಮ ಅಂತರಾಳ ಯಾವಾಗಲೂ ಒಳ್ಳೆಯದು ಬಯಸಲಿ.

 

೧೮. ತಪ್ಪುಗಳನ್ನು ಮಾಡಬಾರದೆಂದು ಗೊತ್ತಿದ್ದರೂ

ತಪ್ಪುಗಳನ್ನು ಮಾಡುತ್ತಿರುತ್ತೇವೆ ಆದರೆ

ಒಳ್ಳೆಯ ಕೆಲಸ ಮಾಡುವಾಗ ಅದು ಸರಿ ಎಂದು ಗೊತ್ತಿದ್ದರೂ

ಹಲವು ಬಾರಿ ಆಲೋಚಿಸುತ್ತೇವೆ. 

೧೯. ಬೆಲೆ ಕಟ್ಟಲು ಸಾಧ್ಯವಿಲ್ಲದ್ದನ್ನು ಮಾರಲು ಸಾಧ್ಯವಿಲ್ಲ.....

ಬೆಲೆ ಕಟ್ಟಲಾಗದ್ದು "ಮತ, ಮಾತೃ, ಗೆಳೆತನ ಮತ್ತು ಧರ್ಮ". 

೨೦. "ಹುಟ್ಟಿದಾಗ ಜಾತಕ",

"ಮಧ್ಯದಲ್ಲಿ ನಾಟಕ",

"ಸತ್ತಾಗ ಸೂತಕ"... ಆದರೂ ನಿಲ್ಲಲ್ಲ ಜನರ ಮಾತಿನ ಕೌತುಕ,

ಬರೀ ಕಣ್ಣಿಂದ ನೋಡಿದ್ರೆ ಎಲ್ಲರಲ್ಲೂ ದ್ವೇಷ ಕಾಣುತ್ತೆ,

ಒಂದು ಸಲ ಹೃದಯದಿಂದ ನೋಡಬೇಕು ಜಗತ್ತೇ ಸುಂದರವಾಗಿ ಕಾಣುತ್ತೆ.


 ೨೧. ಬಯಕೆಗಳು ಕಡಿಮೆ ಇದ್ದಾಗ

ಕಲ್ಲು ಬಂಡೆಯ ಮೇಲೆ ಮಲಗಿದರೂ

ಹಿತವಾದ ನಿದ್ರೆ ಬರುತ್ತದೆ, ಬಯಕೆಗಳು

ಹೆಚ್ಚಾದಾಗ ನಯವಾದ ಹಾಸಿಗೆ ಕೂಡ ಚುಚ್ಚುತ್ತದೆ.

೨೨. ನಾವೆಷ್ಟೇ ಎತ್ತರವಿದ್ದರೇನು ನಾಳೆಯನ್ನು ನೋಡಲಾರೆವು,

ಸಂತೃಪ್ತಿಯಿಂದಿರೋಣ. ಜೀವನವನ್ನು ಆರಾಮವಾಗಿ

ತೆಗೆದುಕೊಳ್ಳೋಣ ಏಕೆಂದರೆ ಜೀವನ ಬಲು ಚಿಕ್ಕದು.


೨೩. ಪ್ರಪಂಚದಲ್ಲಿ ನಾವು ನಂಬಿರುವ ದೇವರುಗಳು ಕಲ್ಲಾಗಿರಬಹುದು,

ಆದರೆ ಅವುಗಳನ್ನು ಪೂಜಿಸುವ ನಮ್ಮ ಮನಸ್ಸುಗಳು ಕಲ್ಲಲ್ಲ,

ಬದುಕು ನಂಬಿಕೆಯ ಕೈಗನ್ನಡಿ.


೨೪. ದಂಡಿಸೋ ಅವಕಾಶ ಇದ್ದರೂ ದಂಡಿಸದೇ

ಇರುವುದನ್ನು ಸಹನೆ ಎನ್ನುತ್ತಾರೆ,

ತಪ್ಪು ಮಾಡೋದಕ್ಕೆ ಬೇಕಾದಷ್ಟು ಮಾರ್ಗಗಳಿದ್ದರೂ

ತಪ್ಪು ಮಾಡದೇ ಇರುವುದಕ್ಕೆ ವ್ಯಕ್ತಿತ್ವ ಎನ್ನುತ್ತಾರೆ.


೨೫. ಯಾರ ಮೇಲು ಅಥವಾ ಯಾರನ್ನೋ

ನೆನಸಿ ಕಣ್ಣೀರು ಯಾವತ್ತೂ ಸುಮ್ಮನೆ ಬರಲ್ಲ,

ಅದು ಕೇವಲ ನಮ್ಮ ಆತ್ಮೀಯರಿಗೆ ಅಥವಾ

ನಮ್ಮ ಜೊತೆ ಒಂದು ಅವಿನಭಾವ ಸಂಬಂಧ

ಇರೋರಿಗೆ ಮಾತ್ರ ಸಾಧ್ಯ. ಅಂತಹ ಸಂಬಂಧವನ್ನು

ಯಾವತ್ತು ಕಳೆದುಕೊಳ್ಳಬಾರದು

ಅದು ವ್ಯಕ್ತಿ ಅಥವಾ ವಸ್ತುವೇ ಆಗಿರಲಿ. 


9 Feb 2022

ನುಡಿಮುತ್ತುಗಳು ನೀತಿ ಮಾತುಗಳು




1. ಅಂಥವಿಂಥ ಹುಚ್ಚುಗಳಿಗಿಂತ
ಬಹಿರಾಂತರ್ಯದಿಂದ ಒಳ್ಳೆಯವರಾಗಿರುತ್ತೇವೆನ್ನುವ
ಹುಚ್ಚು ಬೆಳೆಸಿಕೊಂಡರೆ ಜೀವನ ಪೆಚ್ಚಾಗದು.

2.ಜಗತ್ತು ನಮ್ಮನ್ನು ನೋಡಲಿ 
ಎಂಬ ಆಸೆಯಿಂದ ಪರ್ವತ ಏರುವ ಬದಲು
ನಾವು ಜಗತ್ತನ್ನು ನೋಡುವ ಇಚ್ಛೆಯಿಂದ ಹತ್ತಬೇಕು.

3. ಕಾಲದೊಂದಿಗೆ ನಾವೂ ತೆರಳುವುದು ಸಾಮಾನ್ಯ.
ಆದರೆ ಕಾಲವಾಗದ ಕೃತಿಯೊಂದಿಗೆ 
ಹೆಸರು ಬಿಟ್ಟು ತೆರಳುವುದು ಅಸಾಮಾನ್ಯ.

4. ಸಲ್ಲದ್ದು ಒಗೆ,
ಬೇಕಾದ್ದು ಬಗೆ,
ಎಲ್ಲವೆಲ್ಲವಾಗಲಿ ಲಗುಬಗೆ,
ಇಲ್ಲದಿದ್ದರೆ ಮಣ್ಣು-ಹೊಗೆ.

5. ಅಹಂಕಾರ ಮತ್ತು ಅಧಿಕಾರ
ಒಟ್ಟಾದರೆ ಅಭಿವೃದ್ಧಿ ಅಸಾಧ್ಯ, 
ಅಧಿಕಾರದ ಜೊತೆಗೆ ಜವಾಬ್ದಾರಿ
     ಮತ್ತು 
ದೇಶಾಭಿಮಾನ ಬೆಸೆದರೆ
ಅಭಿವೃದ್ಧಿ ಎಂಬುದು ತಾನಾಗಿ ಆಗುತ್ತದೆ.

6. ಸಂದರ್ಭಗಳು ಸಂಭವಿಸಿದಾಗ 
ಗೈವ ಯತುನಗಳು ಫಲಶ್ರುತಿ ನೀಡಾವು. 
ಆತುರದ ಅಮಲಲಿ ಅಡಿಯಿಡುವ ಹೆಜ್ಜೆಗಳು ಇನ್ನಿಲ್ಲದೆ ಸೋತಾವು.

7. ಅನ್ನ ಇದ್ದರೆ ಉಪವಾಸವಿಲ್ಲ,
ಶಿಕ್ಷಣ ಇದ್ದರೆ ವನವಾಸವಿಲ್ಲ, 
ಜ್ಞಾನದಿಂದ ಅಧಿಕಾರ ಸಿಗಬಹುದು, 
            ಆದರೆ 
ಗೌರವ ಸಿಗಬೇಕೆಂದರೆ ವ್ಯಕ್ತಿತ್ವ ಇರಲೆಬೇಕು.

8. ಮನುಷ್ಯನು ಅನುಕೂಲಗಳು ಹೆಚ್ಚಿದಂತೆಲ್ಲಾ ಸೋಮಾರಿಯಾಗುತ್ತಾನೆ,
ಅವಕಾಶಗಳು ಹೆಚ್ಚಿದಂತೆಲ್ಲಾ ಅವಿದೇಯನಾಗುತ್ತಾನೆ,
ಆದಾಯ ಹೆಚ್ಚಿದಂತೆಲ್ಲಾ ಅಹಂಕಾರಿಯಾಗುತ್ತಾನೆ,
ಅಧಿಕಾರ ಹೆಚ್ಚಿದಂತೆಲ್ಲಾ ಅಲ್ಪನಾಗುತ್ತಾನೆ.
ಇವೆಲ್ಲವನ್ನೂ ಮೀರಿ ನಡೆದವರು ಮಾತ್ರ ವಿಶೇಷವಾಗುತ್ತಾರೆ ಮತ್ತು ಶ್ರೇಷ್ಠವೆನಿಸುತ್ತಾರೆ.

9. ಜಗದ ಕಾವಲಿಗೆ ನಮ್ಮ ನೇಮಕವಾಗಿದೆ, 
ಅದನ್ನು ರಕ್ಷಿಸಿ ತೆರಳುವುದಷ್ಟೇ ಕೆಲಸ, 
ಅದು ನೀಡುವ ಸವಲತ್ತುಗಳೇ ಹೇರಳ, 
ಕಿತ್ತುಕೊಂಡರೆ ನಮ್ಮ ಅಸ್ತಿತ್ವಕ್ಕೆ ನಷ್ಟ.

10. ಕೆಟ್ಟ ಕಾರ್ಯಮಾಡುವವನು ಕಣ್ಣಿದ್ದರೂ ಕುರುಡ, 
ಒಳ್ಳೆಯ ಮಾತು ಕೇಳದವನು ಕಿವಿ ಇದ್ದರೂ ಕಿವುಡ,
ಪ್ರೀತಿಯಿಂದ ಮಾತನಾಡಲು ಬರದವನೂ ಬಾಯಿಯಿದ್ದರೂ ಮೂಕ.

10. ಬರೀ ಜ್ಞಾನ ಇದ್ದರೆ ಸಾಲದು, 
ಬುದ್ದಿವಂತಿಕೆಯಿಂದ ಅನುಷ್ಠಾನಕ್ಕೆ ತಂದರೆ
ಮಾತ್ರ ಜ್ಞಾನದ ವೃದ್ಧಿಯಾಗುತ್ತದೆ.

11. ನಿಮ್ಮ ಜೀವನವನ್ನು ಎಂದಿಗೂ
ಇತರರೊಂದಿಗೆ ಹೋಲಿಸಬೇಡಿ.
'ಸೂರ್ಯ' ಮತ್ತು 'ಚಂದ್ರ'ರ
ನಡುವೆ ಯಾವುದೇ ಹೋಲಿಕೆ ಇಲ್ಲ. 
ಅವರ ಸಮಯ ಬಂದಾಗ ಅವರು ಹೊಳೆಯುತ್ತಾರೆ.

12. ವಂಶವಾಹಿಯಾಗಿ ಅಧಿಕಾರ ಸಿಕ್ಕಿದವನಿಗೆ 
ಅಧಿಕಾರದ ದರ್ಪವಿರುತ್ತದೆ. 
ನಾಯಕನಾಗಿ ಅಧಿಕಾರ ಪಡೆದರೆ ಸಿಕ್ಕ ಅಧಿಕಾರಕ್ಕೆ ಗೌರವ ಸಿಗುತ್ತದೆ.

13. ನಿನ್ನ ಮುಂದೆ ಇರುವ ಒಂದು 
ಮೆಟ್ಟಿಲನ್ನ ಮಾತ್ರ ಗಮನಿಸು, 
ಎಲ್ಲಾ ಮೆಟ್ಟಿಲುಗಳನ್ನಲ್ಲ. 
ನಿನ್ನ ಬದುಕಿಗೆ ನೀನೇ ಬ್ರಹ್ಮ, 
ನೀ ಆಡಿಸಿದ ಹಾಗೆ ಆಡುತ್ತೆ ನಿನ್ನ ಬದುಕು.

14. ಮುಂದುವರೆದಂತೆಲ್ಲ ಒಮ್ಮೊಮ್ಮೆ 
ಹಿಂದೆಯೂ ಅವಲೋಕಿಸಬೇಕು 
ಇಲ್ಲದಿದ್ದರೆ ಅಹಂ ನೆತ್ತಿಗೇರಿ, 
ವ್ಯಕ್ತಿತ್ವ ಹನನದ ಬೀಸುಗತ್ತಿಯಾದೀತು.

15. ಇನ್ನೇನು ಮತ್ತೇನು ಗತಿಯೆಂದು ಬೆದರದಿರು. 
ನಿನ್ನ ಕೈಯೊಳಗಿಹುದೆ ವಿಧಿಯ ಲೆಕ್ಕಣಿಕೆ, 
ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು ತಣ್ಣಗಿರಿಸಾತ್ಮವನು.

16. ಮಾತಿಗೆ ಮಾತು ಬೆಳೆಸುತ್ತಲೇ 
ಅದರ ಮಹತ್ವ ಮಸುಕಾಗಿಸಬಾರದು.
ಅದು ಪ್ರಸಾದದಂತಿದ್ದಾಗ ಆಡುವ-ಆಲಿಸುವರಿಬ್ಬರೂ 
ಕಣ್ಣಿಗೊತ್ತಿಕೊಂಡು ಸ್ವೀ ಕರಿಸಬಹುದು.

17.ನಿನ್ನೆಯ ಅನುಭವವನ್ನು 
ಇಂದಿನ ಪ್ರಯೋಗಕ್ಕೊಳಪಡಿಸಿದಾಗ 
ನಾಳಿನ ನಿರೀಕ್ಷೆಯನ್ನು 
ಅದ್ಭುತವಾಗಿಸಿಕೊಳ್ಳಬಹುದು.

18. ಜೀವನದಲ್ಲಿ ಯಶಸ್ವಿ ಸಾಧನೆಯ 
ಪಯಣಕ್ಕೆ ಏಕಾಂಗಿಯಾಗಿಯೇ ಮುನ್ನಗ್ಗಬೇಕು. 
ಆದರೆ ಶ್ರೇಷ್ಟ ಸಂಕಲ್ಪ ಹೊಂದಿರುವವನಿಗೆ 
ಜೀವನವೇ ನೂರಾರು ಒಳ್ಳೆಯ ವ್ಯಕ್ತಿಗಳನ್ನು 
ಜೊತೆ ಮಾಡಿಕೊಡುತ್ತದೆ.

19. ಹೂವಿನಿಂದ ಹೊತ್ತು ತಂದ ಮಕರಂದದಿಂದ ಮಾಡಿದ ಜೇನು
ಜೇನುಹುಳಗಳಿಗೇ ದಕ್ಕುವುದಿಲ್ಲ ಎಂದಾದರೆ,
ಪರರ ಬಳಿ ಕಿತ್ತು ಮಾಡಿದ ಸಂಪತ್ತು ಉಳಿಯುವದೆ?
ಕಿತ್ತು ತಂದದ್ದು ಹೊತ್ತುಮುಳುಗುವವರೆಗೆ.

20. ನೀರಿನಲ್ಲಿ‌ ಮುಳುಗುವುದರಿಂದ‌ ಪ್ರಾಣ ಹೋಗುವುದಿಲ್ಲ.
ಆದರೆ‌ ನೀರಿಗೆ ಬಿದ್ದಾಗ ಈಜಲು‌ ಬಾರದಿದ್ದರೆ ಪ್ರಾಣ ಹೋಗುತ್ತದೆ.
ಪರಿಸ್ಥಿತಿ ಎಂದೂ ಸಮಸ್ಯೆಯಾಗದು.
ಆದರೆ ಪರಿಸ್ಥಿತಿಯನ್ನು ಎದುರಿಸಲಾಗದಿದ್ದರೆ ಅದೇ ಸಮಸ್ಯೆಯಾಗುತ್ತದೆ.

21. ಎಲೆ ಮೇಲೆ ಕುಳಿತ ನೀರಿನ ಹನಿಗೆ ಗೊತ್ತಿರಲಿಲ್ಲ 
'ಸೂರ್ಯ ಬರುವ ತನಕ ಮಾತ್ರ ನನ್ನ ಸೊಗಸು' 
ಅಂತ. ಹನಿಯನ್ನು ಹೊತ್ತ ಎಲೆಗೂ ಗೊತ್ತಿರಲಿಲ್ಲ 
'ನೀರು ಮುಗಿಯುವ ತನಕ ಮಾತ್ರ ನನ್ನ ಬದುಕು ಅಂತ' 
ಜೀವನದಲ್ಲಿ ಯಾವುದೂ ಶಾಶ್ವತವಲ್ಲ.

22. ಪ್ರೀತಿಸುವುದು ನಿಸರ್ಗ ನಿಯಮ
ಪ್ರೀತಿಯೆಂಬ ಭಾವನೆಗಾಗಿ ಪ್ರೀತಿಸುತ್ತೇವೆ, 
ಅದೊಂದು ರೀತಿಯ ವಿಚಿತ್ರ ಪ್ರತಿಕ್ರಿಯೆ ಕೆಲವರು ಸ್ವಾರ್ಥಕ್ಕಾಗಿ ಪ್ರೀತಿಸುತ್ತಾರೆ,
ಮತ್ತೆ ಕೆಲವರು ನಿಸ್ವಾರ್ಥಿಗಳಾಗಿ ಪ್ರೀತಿಸುತ್ತಾರೆ.

23. ಅಮವಾಸ್ಯೆ ರಾತ್ರಿಯಂದು ನೂರು ನಕ್ಷತ್ರಗಳಿದ್ದರೇನು ಪ್ರಯೋಜನ?
ದಾರಿ ಬೆಳಕಿಗೆ ಮನೆ ದೀಪವೇ ಬೇಕು. 
ಎಷ್ಟೇ ಜನ ಉಳ್ಳವರು/ಬಲಿಷ್ಠರು ಜೊತೆಯಿದ್ದರೂ 
ಅವರೆಲ್ಲ ದೈವದಂತೆ ದೂರವಿರುವರು. 
ಕಷ್ಟದಲ್ಲಿ ಬರುವುದು ಮತ್ತೊಬ್ಬ ಕಷ್ಟಜೀವಿ/ಬಡವ.

24. ಶತ್ರುಗಳನ್ನು ನಿಶ್ಯಕ್ತರು ದ್ವೇಷಿಸುತ್ತಾರೆ, 
ಬಲಶಾಲಿಗಳು ಕ್ಷಮಿಸುತ್ತಾರೆ, ಬುದ್ದಿವಂತರು ನಿರ್ಲಕ್ಷಿಸುತ್ತಾರೆ. 
ಬಲಶಾಲಿಗಳಾಗಿ ಇಲ್ಲವೇ ಬುದ್ದಿವಂತರಾಗಿ ವರ್ತಿಸಿ.
ಯಾವಾಗಲೂ ಒಳ್ಳೆಯವರಾಗಿ ಬಾಳಿ. 
ಆದರೆ ಒಳ್ಳೆಯವರೆಂದು ಸಾಬೀತು ಮಾಡಲು ಸಮಯ ವ್ಯರ್ಥ ಮಾಡಬೇಡಿ.

25. ಸೌಂದರ್ಯಕ್ಕೆ ಬಹಳ ಬೇಗ ಮರುಳಾಗಿಬಿಡುತ್ತೇವೆ ಆದರೆ,
ಬಾಳಬೇಕಾಗಿರುವುದು ವ್ಯಕ್ತಿತ್ವದ ಜೊತೆ ಎಂಬ ವಾಸ್ತವ ಗೊತ್ತಿರುವುದಿಲ್ಲ. 
ಮನೆಯ ಬಾಗಿಲು ಎಷ್ಟೇ ಸುಂದರವಾಗಿದ್ದರೂ ಬಾಗಿಲಲ್ಲೇ ಯಾರು ವಾಸಿಸುವುದಿಲ್ಲ.




ನುಡಿಮುತ್ತು

1. ಜೀವನದಲ್ಲಿ ನಾವೆಷ್ಟು ಖುಷಿಯಾಗಿದ್ದೇವೆ 
ಎಂಬುದರ ಮೇಲೆ ಜೀವನದ ಸಾರ್ಥಕತೆ 
ನಿರ್ಧಾರವಾಗುವುದಿಲ್ಲ. ನಮ್ಮಿಂದ ಎಷ್ಟು ಜನ 
ಸಂತೋಷವಾಗಿದ್ದಾರೆ ಎಂಬುದು ಮುಖ್ಯ.

2. ಪರಿಚಿತರು ಅಪರಿಚಿತರಾಗಿ ಬಿಡುವುದು,
ಅಪರಿಚಿತರು ಪರಿಚಿತರಾಗಿ ಉಳಿದು ಬಿಡುವುದ
ಇವೆರಡೂ ಸಾಧನೆಯನ್ನಷ್ಟೇ ಅವಲಂಬಿಸಿವೆ.

3. ಏರಿಕೆ ಮತ್ತು ಇಳಿಕೆ ಎಲ್ಲದರಲ್ಲಿಯೂ 
ಸಮಾನವಾಗಿದ್ದರೆ ಮಾತ್ರ ಜೀವನಕ್ಕೆ,
ಜೀವಕ್ಕೆ ಅರ್ಥ. ಬರಿ ಏರಿಕೆಯೇ ಆಗುತ್ತಿದ್ದರೆ 
ಒಂದು ಇಳಿಕೆಯೂ ಸಹಿಸಲಸಾದ್ಯ.

4.ವಿಶ್ವಾಸ ಒಂದು ನಮ್ಮ ಜೊತೆಗಿದ್ದರೆ
ಯಾವುದಕ್ಕೂ ಹೆದರಬೇಕಾಗಿಲ್ಲ. 
ಆತ್ಮವಿಶ್ವಾಸದಿಂದ ನಿಲ್ಲಲು ಭಯಕ್ಕೂ ಭಯ.

5.ಹೊತ್ತೊಯ್ಯುವ ಮುನ್ನ ಹತ್ತು ಮಂದಿಯ
ಬಾಯಿಗೆ ಸವಿ ಮಾತಾಗುವಂತೆ,
ಬದುಕೆನ್ನುವ ಶಿಖರ ಹತ್ತಬೇಕು.
ಅಷ್ಟೇ ಮಾನ್ಯ, ಶೇಷವೆಲ್ಲವೂ ಶೂನ್ಯ

6. ನೋವು ಹಾಗೂ ಮನದ ಭಾವ ಅಸ್ಥಿರ.
ನಮ್ಮದೆನ್ನುವ ನೋವು ನಾಲ್ಕು ದಿನಕ್ಕೆ,
ಪರರದ್ದಾಗಿದ್ದರೆ ಒಂದೇ ದಿನಕ್ಕೆ 
ವಿಸ್ಮೃತಿಯಾಗಿಸುವುದು ಅದರ ಗುಣ.

7.ಕನಸು ಜೀವನಕ್ಕೆ ಸ್ಪೂರ್ತಿ, 
ನಂಬಿಕೆ ಕೆಲಸಕ್ಕೆ ಸ್ಪೂರ್ತಿ, 
ಪ್ರೀತಿ ಹೃದಯಕ್ಕೆ ಸ್ಪೂರ್ತಿ,
ನಗು ಎಲ್ಲದಕ್ಕೂ ಸ್ಪೂರ್ತಿ.

8. ಸಂಪತ್ತು ಎಷ್ಟೇ ಇದ್ದರೂ
ಸರಳತೆ ಮಾತ್ರ ಮನುಷ್ಯನಿಗೆ
ಒಳ್ಳೆಯ ಗೌರವ ತಂದು ಕೊಡುತ್ತೆ,
ಏಕೆಂದರೆ ಸಂಪತ್ತಿಗೆ ಬೆಲೆ ಕಟ್ಟಬಹುದು,
ಸರಳತೆಗೆ ಬೆಲೆ ಕಟ್ಟಲಾಗದು.

9. ಅವರಿವರಂತೆ ಬದುಕಲು ಹೋಗಿ ನಮ್ಮಂತೆ 
ಕಡೆವರೆಗೂ ಬದುಕುವುದೇ ಇಲ್ಲ. 
ಅವರಿವರ ಆಂತರ್ಯ ನಮಗೆ ಅಗೋಚರ, 
ಆದರೂ ಅವರು ನಮಗೆ ಆದರ್ಶವೆನ್ನಿಸುವುದು 
ನಮ್ಮ ಬೌದ್ಧಿಕತೆಯ ದೀವಾಳಿತನ.

10. ಜೀವನದಲ್ಲಿ ಯಾವ ಬದಲಾವಣೆಗಳು ಆಗುತ್ತಿಲ್ಲವೆಂದರೆ
ಅದಕ್ಕೆ ಎಚ್ಚರಿಕೆಯ ನಡೆಯೆನ್ನಬಹುದು 
ಅಥವಾ 
ಏಕತಾನತೆಯ ಜೀವನಕ್ಕೆ ಒಗ್ಗಿರಬಹುದು. 
ಇವೆರಡೂ ವಿಮುಖ ನಡೆಗಳು.

11. ಯಾವ ಆದರ್ಶವನ್ನೂ ಹುಟ್ಟು ಹಾಕುವ 
ಅಥವಾ ಯಾರನ್ನೂ ಮೆಚ್ಚಿಸುವ ಗೋಜಿಗೆ 
ಹೋಗಬೇಕಾಗಿಲ್ಲ. ನಾವು ಸರಿಯಾಗಿದ್ದೇವೆಯೇ 
ಎನ್ನುವ ಆತ್ಮವಿಮರ್ಶೆ ಆಗಾಗ ಆಗುತ್ತಿದ್ದರೆ 
ಅದುವೇ ಆದರ್ಶ, ಮೆಚ್ಚುಗೆಗೆ ರಹದಾರಿ.

12. ಮನುಷ್ಯನು ಕಲಿಯಲು ಬಯಸುವುದಾದರೆ 
ಅವನ ಪ್ರತಿಯೊಂದು ತಪ್ಪು ಅವನಿಗೆ ಶಿಕ್ಷಣ ಕೊಡುತ್ತದೆ. 
ನಮ್ಮೊಳಗಿನ ವಿದ್ಯಾರ್ಥಿ ಕಲಿಯಲು ಒಪ್ಪಿದರೆ 
ಎಲ್ಲವೂ ಪಾಠಗಳೇ, ಎಲ್ಲರೂ ಗುರುಗಳೇ.

13.ಕೆಲವೇ ಜನರು ದೊಡ್ಡ ಮನುಷ್ಯರಾಗಿದ್ದಾರೆ ಎಂದರೆ 
ಅದಕ್ಕೆ ಬಹು ಸಂಖ್ಯೆಯ ದಡ್ಡರ ಪಾತ್ರ 
ಅವರಿಗೇ ಅರಿವಿಲ್ಲದಂತೆ ಇದ್ದೆ ಇರುತ್ತದೆ.

14. ಶಿಸ್ತು ಗೆಲುವಿನ ಅವಿಭಾಜ್ಯ ಅಂಗ, 
ಅಶಿಸ್ತು ಒಮ್ಮೆ ಗೆಲ್ಲಿಸಬಹುದು, 
ಮತ್ತೆ ಮತ್ತೆ ಗೆಲ್ಲಬೇಕೆಂದರೆ 
ಶಿಸ್ತು ಬೇಕೇ ಬೇಕು.

15 ಪ್ರತಿ ಕ್ಷಣ ನಡೆಯುವ ಕಾಲುಗಳೇ ಎಡವುತ್ತವೆ, 
ಆಕಾಶದಿ ಮಿನುಗುವ ನಕ್ಷತ್ರಗಳು ಪತನಗೊಳ್ಳುತ್ತವೆ,
ಹೊಳೆಯುವ ಸೂರ್ಯ ಚಂದ್ರರಿಗೂ ಗ್ರಹಣ ಆವರಿಸುತ್ತವೆ 
ಹಾಗೆಯೇ ಮನುಜನ ಜೀವನದಲ್ಲೂ ಏಳುಬೀಳುಗಳು ಕಾಣುತ್ತಲೇ ಇರುತ್ತದೆ, 
ಕೆಳಗೆ ಬೀಳುವಾಗ ಕುಗ್ಗದೆ, ಮೇಲೇರುವಾಗ ಹಿಗ್ಗದೆ ಸಮಚಿತ್ತದಿ ಬಾಳಿ ಬದುಕುವುದೇ ಜೀವನ.

16. ನಮ್ಮ ಗೌರವ ಬೇರೆಲ್ಲೂ ಇಲ್ಲ, 
ನಾವು ಮಾಡುವ ಒಳ್ಳೆಯ ಕೆಲಸದಲ್ಲಿ ಇರುತ್ತದೆ. 
ಭಾವನೆ ಒಳ್ಳೆಯದಿದ್ದರೆ ಬಾಗ್ಯ ಬೆನ್ನೇರಿ ಬರುತ್ತದೆ.

17. ಸಮುದ್ರ ಎಂದು ನೀರಿಗಾಗಿ ಯೋಚಿಸುವುದಿಲ್ಲ 
ತಾನಾಗೇ ನೀರು ಅಲ್ಲಿಗೆ ಹರಿದುಬರುತ್ತದೆ. 
ಯಶಸ್ಸು ಮತ್ತು ಕೀರ್ತಿಗಳು ಹಾಗೆ 
ಒಮ್ಮೆ ಅದಕ್ಕೆ ಬೇಕಾದ ಯೋಗ್ಯತೆ ಗಳಿಸಿದ್ದಲ್ಲಿ 
ನಮ್ಮನ್ನು ಹಿಂಬಾಲಿಸಿ ಬರುತ್ತದೆ.

18. ನಾವು ದೊಡ್ಡವರಾದಾಗ ನಮಗೆ 
ಪೆನ್ಸಿಲ್ ಬದಲಿಗೆ ಪೆನ್ ನೀಡಲಾಗುತ್ತದೆ. 
ಏಕೆಂದರೆ 
ನಮ್ಮ ತಪ್ಪುಗಳನ್ನು ಅಳಿಸುವುದು ಇನ್ನು ಮುಂದೆ ಸುಲಭವಲ್ಲ 
ಎಂಬುದನ್ನು ನಮಗೆ ಅರ್ಥ ಮಾಡಿಸಲು.

19. ಹಡಗು ಎಷ್ಟೇ ಭಾರವಿದ್ದರು 
ಕಡಲ ಮೇಲೆ ತೇಲಲೇಬೇಕು. 
ಹಾಗೆ ಮನಸ್ಸು ಎಷ್ಟೇ ಭಾರವಾದರೂ 
ಬದುಕಿನ ಜೊತೆ ಸಾಗಲೇಬೇಕು.

20. ಪ್ರಕೃತಿ ಮಾನವರಿಗೆ ತಿಳಿಸಿದ
ಅತೀ ಸುಂದರವಾದ ಸಂದೇಶ 
ನೀವು ಮಾಲೀಕರಲ್ಲ. 
ನೀವು ಈ ಜಗತ್ತಿಗೆ ಬಂದ ಅತಿಥಿಗಳು ಮಾತ್ರ.

21. ಯಾರದ್ದೇ ಖಾಸಗಿ ಬದುಕಿನ ಅರಿವು ನಮಗಿರುವುದಿಲ್ಲ, 
ಆದ್ದರಿಂದ ಅವರ ಪೂರ್ಣ ವ್ಯಕ್ತಿತ್ವದ ಕುರಿತಂತೆ ಮಾತನಾಡುವಾಗ
ಇಲ್ಲದ್ದೆ ಹೆಚ್ಚು ಸದ್ಗುಣಗಳು ಇಣುಕುತ್ತವೆ.

22. ಆಹಾರದಲ್ಲಿ ಭಕ್ತಿ ಬೆರೆಸಿದರೆ, 
ಪ್ರಸಾದವಾಗುತ್ತದೆ. 
ನೀರಿನಲ್ಲಿ ಭಕ್ತಿ ಬೆರೆಸಿದರೆ, 
ತೀರ್ಥವಾಗುತ್ತದೆ. 
ಮಾಡುವ ಕೆಲಸದಲ್ಲಿ ಶ್ರದ್ಧೆ ಬೆರೆಸಿದರೆ, 
ಯಶಸ್ಸು ನಮ್ಮದಾಗುತ್ತದೆ.

23. ಆಸೆಗಳಿಗಾಗಿ ಬದುಕಬೇಡ, 
ಆದರ್ಶಕ್ಕಾಗಿ ಬದುಕು. 
ದೀರ್ಘವಾದ ಜೀವನ ಮುಖ್ಯವಲ್ಲ, 
ದಿವ್ಯವಾದ ಜೀವನವೇ ಮುಖ್ಯ.

24. ಪಾಠವನ್ನು ಕಲಿಸಿ ಪರೀಕ್ಷೆ ಇಡುವುದು ವಿದ್ಯೆ. 
ಪರೀಕ್ಷೆಯನ್ನು ಇಟ್ಟು ಪಾಠ ಕಲಿಸುವುದು ಜೀವನ.

25. ಅಡೆ-ತಡೆಗಳ ಪಡೆ ಎಡೆಯಿಲ್ಲದೆ
ಎಡತಾಕುತ್ತಿದ್ದರೆ ಮಾತ್ರ 
ಚಲನ-ಶೀಲತೆಯಲ್ಲಿದ್ದು ಕಡೆಗೊಂದು ಕಡೆ ತಲುಪುತ್ತೇವೆ.


6 Nov 2017

ಥಾಮಸ್ ಆಲ್ವಾ ಎಡಿಸನ್

ಒಂದು ದಿನ ಮಗು
ಥಾಮಸ್ ಆಲ್ವಾ ಎಡಿಸನ್ ಮನೆಗೆ ಬಂದು
ತನ್ನ ತಾಯಿಯ ಕೈಗೆ
ಒಂದು ಪತ್ರ ಕೊಡುತ್ತಾನೆ, ಅಮ್ಮಾ,
 ನಮ್ಮ ಟೀಚರ್ ಈ ಪತ್ರವನ್ನು ನಿನಗೆ ಮಾತ್ರ ಕೊಡಲು ಹೇಳಿದ್ದಾರೆ ಎನ್ನುತ್ತಾನೆ

ಅದನ್ನು
 ಮಗನಿಗಾಗಿ ಗಟ್ಟಿಯಾಗಿ  ಓದುತ್ತಾ
ಆ ತಾಯಿಯ ಕಣ್ಣು ಒದ್ದೆಯಾಯಿತು :

"ನಿಮ್ಮ ಮಗ ತುಂಬ ಬುದ್ಧಿವಂತನಿದ್ದಾನೆ.
ನಮ್ಮ ಶಾಲೆ
ಅವನ ಬುದ್ಧಿಮತ್ತೆಗೆ
ತುಂಬಾ ಸಣ್ಣದು
ಹಾಗೂ
 ಅವನಿಗೆ ಕಲಿಸಬಲ್ಲ
 ಅರ್ಹತೆ ನಮ್ಮ
ಯಾವ ಉಪಾಧ್ಯಾಯರಿಗೂ ಇಲ್ಲ.
ಆದುದರಿಂದ
 ಅವನ ವಿದ್ಯಾಭ್ಯಾಸವನ್ನು ನೀವೇ
 ಮನೆಯಲ್ಲಿ ಕಲಿಸುವುದು ಒಳಿತು."

ತುಂಬಾ ವರ್ಷಗಳ ನಂತರ ಎಡಿಸನ್ ರ ತಾಯಿ ಮರಣಿಸುತ್ತಾರೆ,
 ಆಗ ಎಡಿಸನ್
ಪ್ರಪಂಚದ ಅಗ್ರಮಾನ್ಯ ವಿಜ್ಞಾನಿಗಳಲ್ಲಿ ಮೊದಲಿಗರಾಗಿರುತ್ತಾರೆ.
ಆ ಸಂದರ್ಭದಲ್ಲಿ
ತನ್ನ ತಾಯಿಯ ಪೆಟ್ಟಿಗೆಯಲ್ಲಿನ ಹಳೆಯ ವಸ್ತು ವಿಚಾರಗಳನ್ನು ಪರಿಶೀಲಿಸುತ್ತಿರುವಾಗ
ಕಣ್ಣಿಗೆ ಬಿದ್ದ ಮಡುಚಿದ ಕಾಗದವೊಂದನ್ನು
ಬಿಡಿಸಿ ನೋಡಿದರೆ
ಅದರಲ್ಲಿ ಹೀಗೆ ಬರೆದಿರುತ್ತದೆ. :

"ನಿನ್ನ ಮಗ
ಒಬ್ಬ ಬುದ್ಧಿಮಾಂದ್ಯ,
ಅವನನ್ನು ನಾವು
ಇನ್ನು ಮುಂದೆ ಶಾಲೆಗೆ ಬರಗೊಡುವುದಿಲ್ಲ,"

ತನ್ನ ಮಗುವಿನ
 ಮೃದು ಮನಸ್ಸನ್ನು ನೋಯಿಸದಿರಲು
 ಅಂದು ವಿರುದ್ಧವಾಗಿ
ಓದಿದ
 ತಾಯಿಯನ್ನು ನೆನೆದು ಎಡಿಸನ್ ರು ಗದ್ಗದಿತರಾಗುತ್ತಾರೆ,

 ಗಂಟೆಗಟ್ಟಲೆ ಬಿಕ್ಕಿ ಬಿಕ್ಕಿ ಅಳುತ್ತಾರೆ
 ಮತ್ತು
ತಮ್ಮ ದಿನಚರಿಯಲ್ಲಿ
ಹೀಗೆ ಬರೆಯುತ್ತಾರೆ:

" ಥಾಮಸ್ ಅಲ್ವಾ ಎಡಿಸನ್ ಒಬ್ಬ ಬುದ್ಧಿಮಾಂದ್ಯ ಮಗು, ಆದರೆ
 ಅವನ ಶ್ರೇಷ್ಠ ಮಾತೆಯ ದೆಸೆಯಿಂದ
 ಅವನು ಶತಮಾನದ ಬುದ್ಧಿವಂತನಾಗುತ್ತಾನೆ."   

"ಸಂಸ್ಕಾರವಂತ ತಾಯಿಯೇ  ದೇವರು"
"ಆಚಾರವಂತ ಮನೆಯೇ ದೇವಾಲಯ":