ಮರೆಯಾ ದರು ನಮ್ಮವರು
ಮನೆಯಿಂದ ಹೊರನಡೆದು ಸೂರ್ಯನ ಕಿ ರಣಗಳನ್ನು ಹುಡುಕ್ಕುತ್ತಾ
ಸೀರೆಯ ಸೆರಗನು ಸೊಂಟಕ್ಕೆ ಕಟ್ಟಿಕೊಂಡು
ಹಾಲಿನ ಬಿಂದಿಗೆಯನ್ನು ತಲೆಮೇಲೆ ಇಟ್ಟಿಕೊಂಡು
ನೊರೆಹಾಲು ಬೇಕೆನವ್ವಾ.....
ಎಂದು ಕೂಗುತ್ತ ಬರುವ ಹೈನುಗಾರ್ತಿಯರೆಷ್ಟೋ.!
ಕುಂಬಾರ ಓಣಿಯಲ್ಲಿ ಮಡಿಕೆಯ ಮಾಡಿ,
ಸಂತೆಯಲ್ಲಿ ಒಂದರಮೇಲೊಂದು ಮಡಿಕೆಯ ಇಟ್ಟು.
ಅಡಗಿಯ ಮಾಡಲು ಗಡಗಿಯಾ ಬೇಕೆನವ್ವಾ....
ಎನ್ನುತ, ಗಡಗಿಯ ಮಾರುವ ಕುಂಬಾರರೆಷ್ಟೋ,!
ಹೆಗಲ ಮೇಲೊಂದು ಟವೆಲ್ ಹಾಕೊಂಡು
ಕೈಯಲ್ಲೊಂದು ಪುಸ್ತಕ ಹಿಡ್ಕೊಂಡು
ಎತ್ತಿನ ಬಂಡೆಯ ಮೇಲೆ ಕುಳಿತುಕೊಂಡು
ಊರೋರು ಸುತುತ್ತಾ ನಿಮ್ಮನೆಯಾ
ತಲೆ ಮಾರಿನ ಸುದ್ದಿನಾ ಹೊತ್ತು ತಂದೆನಾ
ಬಿಚ್ಚಿ ಹೇಳಲೆನವ್ವಾ.....
ಎನ್ನುತ್ತಾ ಬರುವ ಹೇಳವರೆಷ್ಟೋ !
ತೆಗ್ಗಿಹಳ್ಳಿ.
No comments:
Post a Comment