ನೆನಪೇ ನಿನಗೊಂದು ನಮಸ್ಕಾರ
ಬಾರದಿರು ಮರಳಿ ಮತ್ತೆ ಮತ್ತೆ
ತಾವಿಲ್ಲದ ಜಾಗಕ್ಕೆ ಜೀವಿಲ್ಲದ ಹೃದಯಕ್ಕೇ
ಕೈ ಹಿಡಿದು ತಿರುಗಿದ ಬಿದಿಗಳನು
ಸಂಜೆಗತ್ತಲಿಗೆ ಸಾಕ್ಷಿಯಾದ ಪಾರ್ಕುಗಳನು
ಕತ್ತಲಲ್ಲಿ ಕದ್ದು ನೋಡಿದ ಸಿನಿಮಾಗಳನ್ನು
ಕಾಫಿ ಕ್ಯಾಂಟಿನು, ಐಸು ಪಾರ್ಲರಗಳನು
ಮರೆತು ಬಿಡಬೇಕು ಎಂದಿದೆ.......
ಹತ್ತಿದ ಬೆಟ್ಟಗಳನು
ಜಾರಿದ ಕಣಿವಿಗಳನು
ಹರಕೆ ಹೋತ್ತ ಗುಡಿಗಳನು
ಮರೆತು ಬಿಡಬೇಕು ಎಂದಿದೆ .......
ಪುಟಗಟ್ಟಲೆ ಕವನವನ್ನು
ಮನಸಿನಲ್ಲಿ ಗೀಚಿದ ಚಿತ್ರಗಳನು
ನಿನಗಾಗಿ ಕೇಳಿದ ಹಾಡುಗಳನು
ಮರೆತು ಬಿಡಬೇಕು ಎಂದಿದೆ .......
ಕಣ್ತುಂಬಿ ಕಟ್ಟಿದ ಸ್ನೇಹದ ಕನಸುಗಳನ್ನು ಎಲ್ಲಾ ಮರೆತು ಬಿಡಬೇಕು ಎಂದಿದೆ .......
ಆದರೆ
ಉಳಿದುಬಿಟ್ಟೆ ಎದೆಯಂಗಳದಲ್ಲಿ
ಬೆಟ್ಟದಂತೆ ,ಕಡಲಿನಂತೆ, ಗಾಳಿಯಂತೆ, ಬೆಂಕಿಯಂತೆ, ಬೂದಿಯಂತೆ,
ನಿಂತುಬಿಟ್ಟೆ ನಾ...
ಒಂಟಿಯಾಗಿ ಗಾಳಿಗಾಂದ ದೀಪ್ಪದಂತೆ ,
ನೆನಪೇ, ನಿನಗೊಂದು ನಮಸ್ಕಾರ
ಬಾರದಿರು ಮರಳಿ ಮತ್ತೆ ಮತ್ತೆ....
ಹೆಣವಾದ ಬಾಳಿಗೆ ಋಣವಾಗಿ
ಪರಶುರಾಮ ಎಮ್ ಎಸ್
ತೆಗ್ಗಿಹಳ್ಳಿ
No comments:
Post a Comment