ಜಿರೋ ಕಂಡುಹಿಡಿದವ
ಧಾರವಾಡದ ಒಂದು ಕನ್ನಡದ ಶಾಲೆಯಲ್ಲಿ.... ತರಗತಿಯ ಮೇಷ್ಟ್ರು ವಿಧ್ಯಾರ್ಥಿಗಳಿಗೆ ಹೇಳಿದರು......
"ಯಾರಾದ್ರು ಪ್ರಶ್ನೆಗಳನ್ನು ಕೇಳುವುದಿದ್ದರೆ ಕೇಳಿರಿ"
ಅವಾಗ ಮುಲಿಮನಿ ಬಸ್ಯಾ ಎದ್ದುನಿಂತ....
"ಸರ್ ನನಗೋಂದು ಡೌಟ್ ಬಂದೈತಿ ..."
ಸರ್ : ಅದೇನ್ ಪ್ರಶ್ನೆ ಕೇಳಲೇ ಮಗನ...
ಬಸ್ಯಾ : "ನೀವು ನಮಗೆಲಾ ಹೇಳಿದ್ರಿ ಜಿರೋ ಕಂಡುಹಿಡಿದವ ಆರ್ಯಭಟ ಅನ್ನೋ ಗಣಿತದ ವಿದ್ವಾಂಸ ಅಂತ ಮತ್ತ ಅವನು ಕಲಿಯುಗದಾಗ ಹುಟ್ಟಿದ್ದಾ ಅಂತ ...."
ಸರ್ : "ಹೌದಲೇ ....ನಾನು ಹೇಳಿದ್ದು ನುರಕ್ಕ ನುರು ಖರೆ ಐತಿ..... ಮಗನ ನಿಂಗ್ಯಾಕ ಈ ಡೌಟ್ ಬಂತು..."
ಬಸ್ಯಾ : " ಸರ ಹಂಗಾದ್ರ ರಾಮಾಯಣದಾಗಿನ ರಾವಣಗ ಹತ್ತ ತೆಲಿ ಇತ್ತು......ಮತ್ತ ಮಹಾಭಾರತದ್ಯಾಗ ಕೌರವರು ನುರು ಜನ ಇದ್ದರು ಅಂತ ಯ್ಯಾವ ಮಂಗ್ಯಾನ ಮಗ ಹೇಂಗ ಈ ಜಿರೋ ಇಲ್ಲದ ಹೇಳಿದಾ, ಹೇಂಗ ಬರದಾ ????
No comments:
Post a Comment