೧. ವಿಶ್ವದ ಅತಿಸಣ್ಣ ಸರ್ಜಿಕಲ್ ರೋಬೋವನ್ನು ಯಾವ ರಾಷ್ಟ್ರದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ ?
೧. ಅಮೇರಿಕ
೨. ಇಂಗ್ಲೆಂಡ್
೩. ಭಾರತ
೪. ಫ್ರಾನ್ಸ್
ಸರಿಯಾದ ಉತ್ತರ :೨. ಇಂಗ್ಲೆಂಡ್
ವಿವರಣೆ : ಬ್ರಿಟಿಷ್ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಈ ರೋಬೋ ದಿನವೊಂದಕ್ಕೆ ಸಾವಿರಾರು ರೋಗಿಗಳಿಗೆ ಶಸ್ತ್ರಚಿಕೆತ್ಸೆ ನಡೆಸಬಲ್ಲದು. ಇದರ ನಿರ್ಮಾಣ ವೆಚ್ಚ ₹೧೬ ಕೋಟಿ. ಸರ್ಜರಿ ವೆಚ್ಚ ₹ ೨.೪೩ ಲಕ್ಷ. ' ಏರ್ಸಿಯಸ್' ಎಂಬ ಹೆಸರಿನ ಈ ರೋಬೋ ಮನುಷ್ಯನ ಕಿವಿಯನ್ನು ಹೋಲುತ್ತಿದ್ದು ಹರ್ನಿಯಾ, ಕಿವಿ, ಮೂಗು, ಗಂಟಲಿನ ಲ್ಯಾಪ್ರೋಸ್ಕೋಪಿಕ್ ಸರ್ಜರಿಯಲ್ಲಿ ಬಳಸಬಹುದಾಗಿದೆ.
೨. ೨೦೧೭ರ ಆಗಷ್ಟ್ ೨೧ ರಂದು ಸಂಭವಿಸಿದ ಸಂಪೂರ್ಣ ಸೂರ್ಯಗ್ರಹಣ ಯಾವ ದೇಶದ ಮೇಲೆ ಅತಿ ಹೆಚ್ಚು ಕಾಲ ಕಂಡುಬಂದಿತ್ತು ?
೧. ಭಾರತ
೨. ರಷ್ಯಾ
೩. ಚೀನಾ
೪. ಅಮೇರಿಕಾ
ಸರಿಯಾದ ಉತ್ತರ : ಅಮೇರಿಕಾ
ವಿವರಣೆ : ಸುಮಾರು ಒಂದು ಶತಮಾನದ ನಂತರ ಅಮೇರಿಕಾದಲ್ಲಿ ಅತಿ ಹೆಚ್ಚು ಕಾಲ ಗ್ರಹಣ ಸಂಭವಿಸಿತು. ಸೂರ್ಯ ಮತ್ತು ಭೋಮಿಯ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಭಾರತದಲ್ಲಿ ಈ ಹಿಂದೆ ೨೦೦೯ರ ಜುಲೈ ೨೨ರಂದು ಖಗ್ರಾಸ ಸೂರ್ಯಗ್ರಹಣ ಸಂಭವಿಸಿತ್ತು. ೧೯೮೦ರ ಫೆಬ್ರುವರಿ ೧೬ರಂದು ಕರ್ನಾಟಕದಲ್ಲಿ ಸಂಪೂರ್ಣ ಸೂರ್ಯಗ್ರಹಣ ಕಂಡುಬಂದಿತ್ತು. ಭಾರತದಲ್ಲಿ ಮುಂದಿನ ಖಗ್ರಾಸ ಗ್ರಹಣ ೨೦೩೪ ರಲ್ಲಿ ಗೋಚರಿಸಲಿದೆ.
೩. ಖ್ಯಾತ ಹಿಂದೂಸ್ಥಾನಿ ಗಾಯಕಿ ಪ್ರಭಾ ಅತ್ರೆ ಅವರಿಗೆ ರಾಷ್ಟ್ರಮಟ್ಟದ ಯಾವ ಪ್ರಶಸ್ತಿ ಲಭಿಸಿತು ?
೧. ಬಸವರಾಜ್ ರಾಜಗುರು ರಾಷ್ಟ್ರೀಯ ಪುರಸ್ಕಾರ
೨. ತಾನ್ ಸೇನ್ ಪುರಸ್ಕಾರ
೩. ಭೀಮಸೇನ ಜೋಶಿ ಪುರಸ್ಕಾರ
೪. ಪದ್ಮಶ್ರೀ ಪುರಸ್ಕಾರ
ಸರಿಯಾದ ಉತ್ತರ :ಬಸವರಾಜ್ ರಾಜಗುರು ರಾಷ್ಟ್ರೀಯ ಪುರಸ್ಕಾರ
ವಿವರಣೆ : ಪ್ರಭಾ ಅತ್ರೆ ಅವರಿಗೆ ೨೦೧೭ ರ ಸ್ವರಸಾಮ್ರಾಟ್ ಪಂಡಿತ್ ಬಸವರಾಜ್ ರಾಜಗುರು ರಾಷ್ಟ್ರೀಯ ಪುರಸ್ಕಾರ ಲಭಿಸಿದೆ. ಹಿಂದೂಸ್ಥಾನಿ ಸಂಗೀತದಲ್ಲಿ ಡಾಕ್ಟರೇಟ್ ಮಾಡಿರುವ ಪ್ರಭಾ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಜನಪ್ರಯಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಹತ್ತಾರು ರಾಷ್ಟ್ರಮಟ್ಟದ ಪ್ರಶಸ್ತಿ ಗಳಿಸಿರುವ ಪ್ರಭಾ ಅತ್ರೆ ಹಿಂದೂಸ್ಥಾನಿ ಸಂಗೀತದ ಘರಾಣಾ ಶೈಲಿಯಲ್ಲಿ ಪರಿಣತಿ ಹೊಂದಿದ್ದಾರೆ.
೪. ೨೦೧೭ನೇ ಸಾಲಿನ ರಾಮೋನ್ ಮ್ಯಾಗ್ಸಸೆ ಪ್ರಶಸ್ತಿ ಯಾವ ದೇಶದ ಸಾಧಕರಿಗೆ ಲಭಿಸಿದೆ ?
೧. ವಿಯೆಟ್ನಾಮ್
೨. ನೇಪಾಳ
೩. ಜಪಾನ್
೪. ಚೀನಾ
ಸರಿಯಾದ ಉತ್ತರ : ಜಪಾನ್
ವಿವರಣೆ : ಆಗ್ನೇಯ ಏಷ್ಯಾ ಇತಿಹಾಸ ತಜ್ಞ ಜಪಾನ್ ದೇಶದ ಯೋಷಿಯಾಕಿ ಇಷಿಜಾವಾ ಅವರು ಈ ಪ್ರಶಸ್ತಗೆ ಕೊರಳೊಡ್ಡಿದ್ದು, ತಮ್ಮ ಜೀವನದ ೫೦ ವರ್ಷಗಳನ್ನು ಕಾಂಬೋಡಿಯಾದ ಆಂಗ್ ಕೋರ್ ವಾಟ್ ದೇವಾಲಯದ ರಕ್ಷಣೆಗೆ ಮುಡಿಪಾಗಿರಿಸಿದ್ದಾರೆ. ಇವರು ಜಪಾನಿನ ಸೋಫಿಯಾ ವಿವಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
೫. ಅಮೇರಿಕಾದ ಮಾರ್ಕೋನಿ ಸೊಸೈಟಿಯ ಜೀವಮಾನ ಸಾಧನೆ ಪ್ರಶಸ್ತಿ ಪಡೆದ ಭಾರತೀಯ ಮೂಲದ ವಿಜ್ಞಾನಿ ಯಾರು ?
೧. ಥಾಮಸ್ ಮುಲ್ಲರ್
೨. ಥಾಮಸ್ ಕೈಲಾತ್
೩. ಥಾಮಸ್ ಹರ್ಷ್
೪. ರವೀಂದ್ರ ವರ್ಮಾ
ಸರಿಯಾದ ಉತ್ತರ : ಥಾಮಸ್ ಕೈಲಾತ್
ವಿವರಣೆ : ಜೀವಮಾನ ಸಾಧನೆ ಪ್ರಶಸ್ತಿ ಪಡೆದಿರುವ ಥಾಮಸ್ ಕೈಲಾತ್ ಅಮೇರಿಕಾದ ಸ್ಟ್ಯಾನ್‌ಫೋರ್ಡ್ ವಿವಿ ಪ್ರೊಫೆಸರ್. ಕಮ್ಯೂನಿಕೇಶನ್ ಮತ್ತು ಇಂಟರ್ನೆಟ್ ನಲ್ಲಿ ಸಾಧನೆ ಮಾಡಿದ ವಿಶೇಷ ವ್ಯಕ್ತಿಗಳನ್ನು ಗುರುತಿಸಿ ಈ ಗೌರವ ನೀಡಲಾಗುತ್ತದೆ. ಕೈಲಾತ್ ಇಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ಡಾಕ್ಟರೇಟ್ ಪಡೆದ ಮೊದಲ ಭಾರತೀಯ. ಭಾರತ ಸರ್ಕಾರ ಇವರಿಗೆ ಪದ್ಮಭೂಷಣ(೨೦೦೯) ಪ್ರಶಸ್ತಿ ನೀಡಿ ಗೌರವಿಸಿದೆ. ೮೧ ವರ್ಷದ ಕೈಲಾತ್ ಹಲವು ಪುಸ್ತಕಗಳನ್ನು ಬರೆದಿದ್ದಾರೆ.
೬. ಅಂತರರಾಷ್ಟ್ರೀಯ ಯುವದಿನ ಎಂದು ಯಾವ ದಿನವನ್ನು ಆಚರಿಸಲಾಗುತ್ತದೆ ?
೧. ಆಗಸ್ಟ್ ೧೮
೨. ಆಗಸ್ಟ್ ೧೬
೩. ಆಗಸ್ಟ್ ೧೪
೪. ಆಗಸ್ಟ್ ೧೨
ಸರಿಯಾದ ಉತ್ತರ : ಆಗಸ್ಟ್ ೧೨
ವಿವರಣೆ : ಪ್ರತಿ ದೇಶದ ಭವಿತವ್ಯದ ಕನಸುಗಳಾಗಿರುವ ಯುವ ಸಮೂಹಕ್ಕೆ ಅಭಿವೃದ್ಧಿಯ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆ ೨೦೦೦ನೇ ಸಾಲಿನಿಂದ ಪ್ರತಿವರ್ಷ ಆಗಷ್ಟ್ ೧೨ ನ್ನು International Youth Day ಆಚರಿಸಲಾಗುತ್ತಿದೆ. ಈ ವರ್ಷದ ಧ್ಯೇಯವಾಕ್ಯ "ಯುವಜನರಿಂದ ಶಾಂತಿ ನಿರ್ಮಾಣ". ವಿಶ್ವಸಂಸ್ಥೆಯು ೧೫ ರಿಂದ ೨೪ ವರ್ಷ ವಯೋಮಾನದವರನ್ನು ಯುವ ಜನರು ಎಂದು ಪರಿಗಣಿಸಿದೆ.
೭. " ವೀನಸ್" ಹೆಸರಿನ ಉಪಗ್ರಹ ಉಡಾವಣೆ ಮಾಡಿದ ದೇಶ ಯಾವುದು ?
೧. ಇರಾನ್
೨. ಇರಾಕ್
೩. ಇಸ್ರೇಲ್
೪. ಸಿರಿಯಾ
ಸರಿಯಾದ ಉತ್ತರ : ಇಸ್ರೇಲ್
ವಿವರಣೆ : ಇಸ್ರೇಲ್ ದೇಶವು ವೀನಸ್ ಹೆಸರಿನ ತನ್ನ ಮೊದಲ ಪರಿಸರ ಸಂಶೋಧನಾ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ಇದು ಭೂಮಿಯಿಂದ ೭೨೦ ಕಿ.ಮೀ. ಎತ್ತರದಲ್ಲಿ ಸ್ಥಾಪಿತವಾಗಿದೆ. ಇದು ಚಿಕ್ಕ ಭೂ-ವೀಕ್ಷಣಾ ಉಪಗ್ರಹವಾಗಿದ್ದು ೨೬೫ ಕೆ.ಜಿ. ತೂಕ ಹೊಂದಿದೆ. ಬರಿಗಣ್ಣಿನಿಂದ ನೋಡಲು ಸಾಧ್ಯವಾಗದ ದೃಶ್ಯಗಳನ್ನು ಸೆರೆಹಿಡಿಯಬಲ್ಲ ಕ್ಯಾಮೆರಾವನ್ನು ಈ ಉಪಗ್ರಹಕ್ಕೆ ಅಳವಡಿಸಲಾಗಿದೆ.
೮. ವಿಶ್ವ ಹೆಪಟೈಟಿಸ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
೧. ಜುಲೈ ೨೫
೨. ಜುಲೈ ೨೬
೩. ಜುಲೈ ೨೭
೪. ಜುಲೈ ೨೮
ಸರಿಯಾದ ಉತ್ತರ : ಜುಲೈ ೨೮
ವಿವರಣೆ : ೨೦೧೦ ರಿಂದ ಪ್ರತಿವರ್ಷ ಜುಲೈ ೨೮ ರಂದು ವಿಶ್ವ ಹೆಪಟೈಟಿಸ್ ದಿನವನ್ನು ಆಚರಿಸಲಾಗುತ್ತದೆ. ಹೆಚ್ಚುತ್ತಿರುವ ಹೆಪಟೈಟಿಸ್ ರೋಗದ ಬಗ್ಗೆ ವಿಶೇಷ ಜಾಗೃತಿ ಮತ್ತು ಅರಿವು ಮೂಡಿಸುವದು ಈ ಆಚರಣೆಯ ಉದ್ದೇಶ. ಯಕೃತ್ತಿ(Liver)ನಲ್ಲಿ ಉರಿಯೂತವನ್ನುಂಟು ಮಾಡುವದು ಈ ರೋಗದ ಮುಖ್ಯ ಲಕ್ಷಣವಾಗಿದೆ.
೯. ೨೦೧೭ ರ ಏಷ್ಯನ್ ಗೇಮ್ಸ್ ಚೇಂಜರ್ ಪ್ರಶಸ್ತಿಗೆ ಆಯ್ಕೆಯಾದ ಭಾರತೀಯ ಮೂಲದ ಬ್ರಿಟನ್ ನಟ ಯಾರು ?
೧. ಅಹ್ಮದ್ ಪಟೇಲ್
೨. ದೇವ್ ಪಟೇಲ್
೩. ರಾಮ್ ಕುಮಾರ್
೪. ಅನುಪಮ ಶರ್ಮಾ
ಸರಿಯಾದ ಉತ್ತರ : ದೇವ್ ಪಟೇಲ್
ವಿವರಣೆ : ಪ್ರಶಸ್ತಿ ಪಡೆದ ದೇವ್ ಪಟೇಲ್ ಅವರು ಏಷ್ಯಾ ಮತ್ತು ಪ್ರಪಂಚದಲ್ಲಿನ ಮಕ್ಕಳ ಬಡತನದ ಬಗ್ಗೆ ಅರಿವು ಮೂಡಿಸುವಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಬ್ರಿಟೀಷ್ ಟೀನ್ ಡ್ರಾಮಾ ಸಿರೀಸ್ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಇವರು ಡೆನ್ನಿ ಬೋಯಿಲ್ಸ್ ನ ಸ್ಲಮ್ ಡಾಗ್ ಮಿಲೇನಿಯರ್ ಮೂಲಕ ಖ್ಯಾತಿ ಗಳಿಸಿದ್ದರು. ಇಂಗ್ಲೀಷ್ ಸಿನಿಮಾಗಳಲ್ಲಿ ನಟಿಸಿ ಪ್ರಸಿದ್ಧರಾಗಿರುವ ಇವರಿಗೆ ಹಲವಾರು ಪ್ರಶಸ್ತಿಗಳು ಒಲಿದು ಬಂದಿವೆ.
೧೦. ಬ್ರಿಟನ್ ನ್ಯಾಯಾಂಗ ವ್ಯವಸ್ಥೆಯಲ್ಲಿನ ಅತ್ಯನ್ನತ ಹುದ್ದೆಯಾದ ಮೇಲ್ಮನವಿ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡ ಭಾರತೀಯ ಮೂಲದ ಗಣ್ಯ ವ್ಯಕ್ತಿ ಯಾರು ?
೧. ಬಲಬೀರ್ ಸಿಂಗ್
೨. ಸಂತೋಷ್ ಹೆಗ್ಡೆ
೩. ಸರ್ ರಬೀಂದ್ರ ಸಿಂಗ್
೪. ರಾಕೇಶ್ ಮೆಹ್ತಾ
ಸರಿಯಾದ ಉತ್ತರ : ಸರ್ ರಬೀಂದ್ರ ಸಿಂಗ್
ವಿವರಣೆ : ಸರ್ ರಬೀಂದ್ರ ಸಿಂಗ್ ಅವರು ಏಳು ನ್ಯಾಯಾಧೀಶರ ಮೇಲ್ಮನವಿ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ನೇಮಕಗೊಂಡರು. ಇವರು ಮ್ಯಾಟ್ರಿಕ್ ಚೇಂಬರ್ಸ್ ಎಂಬ ಕಾನೂನು ಸಂಸ್ಥೆಯ ಸಂಸ್ಥಾಪಕ ಸದಸ್ಯರು. ಇವರಿಗೆ ಮಾಧ್ಯಮ ಕಾನೂನು, ವಾಣಿಜ್ಯ ಕಾನೂನು, ಮಾನವ ಹಕ್ಕು, ಯೂರೋಪಿಯನ್ ಸಮುದಾಯದ ಕಾನೂನು, ಉದ್ಯೋಗ, ಸಾರ್ವಜನಿಕ ಮತ್ತು ಆಡಳಿತಾತ್ಮಕ ಕಾನೂನು ಸೇವೆಯಲ್ಲಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ ಅನುಭವವಿದೆ.
೧೧. ಇತ್ತೀಚೆಗೆ ನಿಧನ ಹೊಂದಿದ ಖ್ಯಾತ ವಿಜ್ಞಾನಿ ಯಶ್ ಪಾಲ್ ಯಾವ ವಿಷಯದಲ್ಲಿ ಸಂಶೋಧನೆ ನಡೆಸಿ ಖ್ಯಾತರಾಗಿದ್ದರು ?
೧. ಕಾಸ್ಮಿಕ್ ಕಿರಣ
೨. ಬೆಳೆಗಳ ಕಸಿ
೩. ಹೃದಯ ಚಿಕಿತ್ಸೆ
೪. ಲಿವರ್ ಕ್ಯಾನ್ಸರ್
ಸರಿಯಾದ ಉತ್ತರ : ಕಾಸ್ಮಿಕ್ ಕಿರಣ
ವಿವರಣೆ : ಅಂತರರಾಷ್ಟ್ರೀಯ ಖ್ಯಾತ ವಿಜ್ಞಾನಿ ಯಶ್ ಪಾಲ್ ಅವರು ಕಾಸ್ಮಿಕ್ ಕಿರಣದ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿ ಪ್ರಸಿದ್ಧರಾಗಿದ್ದರು. ಇವರು ಭೌತಶಾಸ್ತ್ರ, ಖಗೋಳಶಾಸ್ತ್ರದ ಮೂಲಕ ವಿಜ್ಞಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಯಶ್ ಪಾಲ್ ಅಹಮದಾಬಾದ್ ನ ಬಾಹ್ಯಾಕಾಶ ಕೇಂದ್ರದ ಮೊದಲ ನಿರ್ದೇಶಕರು. ಇಂದಿರಾಗಾಂಧಿ ಪ್ರಶಸ್ತಿ ಪಡೆದಿರುವ ಇವರು ಪದ್ಮಭೂಷಣ, ಪದ್ಮವಿಭೂಷಣ ಗೌರವಗಳಿಗೂ ಪಾತ್ರರಾಗಿದ್ದರು.
೧೨. ಜಮ್ಮು-ಕಾಶ್ಮೀರದ ಕಿಶನ್ ಗಂಗಾ ಜಲವಿದ್ಯುತ್ ಘಟಕ ನಿರ್ಮಿಸಲು ಯಾವ ಅಂತರರಾಷ್ಟ್ರೀಯ ಬ್ಯಾಂಕ್ ಭಾರತಕ್ಕೆ ಒಪ್ಪಿಗೆ ನೀಡಿತು ?
೧. ವಿಶ್ವಬ್ಯಾಂಕ್
೨. ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್
೩. ಬ್ರಿಕ್ಸ್ ಬ್ಯಾಂಕ್
೪. ಸಿಟಿ ಬ್ಯಾಂಕ್
ಸರಿಯಾದ ಉತ್ತರ : ವಿಶ್ವಬ್ಯಾಂಕ್
ವಿವರಣೆ : ಝೀಲಂ ಮತ್ತು ಚೀನಾಬ್ ನದಿ ವ್ಯಾಪ್ತಿಯ ಕಿಶನ್ ಗಂಗಾ ದಲ್ಲಿ ೩೩೦ ಮೆಗಾವ್ಯಾಟ್ ಮತ್ತು ರಾಟ್ಲೆಯಲ್ಲಿ ೮೫೦ ಮೆಗಾವ್ಯಾಟ್ ಸಾಮರ್ಥ್ಯದ ಜಲವಿದ್ಯುತ್ ಘಟಕಗಳನ್ನು ನಿರ್ಮಿಸಲು ಕೆಲವು ಷರತ್ತುಗಳೊಂದಿಗೆ ವಿಶ್ವಬ್ಯಾಂಕ್ ಭಾರತಕ್ಕೆ ಒಪ್ಪಿಗೆ ನೀಡಿದೆ. ಆದರೆ ಪಾಕಿಸ್ತಾನವು ಇದು ೧೯೬೦ ರ ಸಿಂಧೂ ನದಿ ನೀರು ಒಪ್ಪಂದದ ಆಶಯಗಳಿಗೆ ವಿರುದ್ಧವಾಗಿದೆ ಎಂದು ವಿರೋಧ ವ್ಯಕ್ತಪಡಿಸಿದೆ.
೧೩. ಸದಸ್ಯ ರಾಷ್ಟ್ರಗಳಲ್ಲಿ ಆಹಾರ ಭದ್ರತೆ ಒದಗಿಸಲು ಬ್ರಕ್ಸ್ ಯಾವ ವೇದಿಕೆಯನ್ನು ಸ್ಥಾಪಿಸಲು ನಿರ್ಧರಿಸಿತು ?
೧. ಫುಡ್ ಸೆಕ್ಯೂರಿಟಿ ಬೋರ್ಡ್
೨. ಫುಡ್ ಸೆಕ್ಯೂರಿಟಿ ಫರ್ಮ್
೩. ಕೃಷಿ ಸಂಶೋಧನಾ ವೇದಿಕೆ
೪. ಕೃಷಿ ಸಂಗ್ರಹಾಲಯ ಮಂಡಳಿ
ಸರಿಯಾದ ಉತ್ತರ : ಕೃಷಿ ಸಂಶೋಧನಾ ವೇದಿಕೆ
ವಿವರಣೆ : ಕೃಷಿ ಸಂಶೋಧನಾ ವೇದಿಕೆ ಸ್ಥಾಪಿಸಲು ಬ್ರಿಕ್ಸ್ (Brazil, Russia, India, China, South Africa) ರಾಷ್ಟ್ರಗಳು ನಿರ್ಧರಿಸಿದವು. ಈ ವೇದಿಕೆಯು ಸದಸ್ಯ ರಾಷ್ಟ್ರಗಳಲ್ಲಿ ಆಹಾರ ಭದ್ರತೆ ಒದಗಿಸಲು ಕೃಷಿ ಕಾರ್ಯತಂತ್ರ ಒದಗಿಸುತ್ತದೆ. ಜೊತೆಗೆ ಕೃಷಿ ಅಭಿವೃದ್ಧಿ ಹಾಗೂ ಬಡತನ ನಿವಾರಣೆಯನ್ನು ಉತ್ತೇಜಿಸುತ್ತದೆ. ಬ್ರಿಕ್ಸ್ ದೇಶಗಳ ನಡುವೆ ಕೃಷಿ ಸಂಶೋಧನಾ ನೀತಿ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರ ಬಲಪಡಿಸಲು ಈ ಒಪ್ಪಂದ ಏರ್ಪಟ್ಟಿದೆ.
೧೪. ಇತ್ತೀಚೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಯಾವ ದೇಶದ ರಫ್ತು ವಹಿವಾಟಿನ ಮೇಲೆ ನಿರ್ಬಂಧಗಳನ್ನು ವಿಧಿಸಿತು ?
೧. ಇರಾಕ್
೨. ಪಾಕಿಸ್ತಾನ
೩. ಉತ್ತರ ಕೊರಿಯಾ
೪. ದಕ್ಷಿಣ ಕೊರಿಯಾ
ಸರಿಯಾದ ಉತ್ತರ : ಉತ್ತರ ಕೊರಿಯಾ
ವಿವರಣೆ : ಉತ್ತರ ಕೊರಿಯಾದ ಕೆಲವು ರಫ್ತು ವಹಿವಾಟಿನ ಮೇಲೆ ವಿಶ್ವಸಂಸ್ಥೆ ನಿರ್ಬಂಧ ವಿಧಿಸಿರುವುದರಿಂದ ಆ ದೇಶದ ವಾರ್ಷಿಕ ೬೪೦ ಕೋಟಿ ರೂಪಾಯಿ ಆದಾಯ ಕಡಿತವಾಗಲಿದೆ. ಕಲ್ಲಿದ್ದಲು, ಕಬ್ಬಿಣದ ಅದಿರು ಮತ್ತು ಮೀನು ಸೇರಿದಂತೆ ಸಮುದ್ರ ಖಾದ್ಯಗಳನ್ನು ರಫ್ತು ಮಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ೨೦೦೬ ರಲ್ಲಿ ಉತ್ತರ ಕೊರಿಯಾ ಪರಮಾಣು ಪರೀಕ್ಷೆ ನಡೆಸಿದ ಬಳಿಕ ವಿಶ್ವಸಂಸ್ಥೆ ಇಲ್ಲಿಯವರೆಗೆ ೭ ಬಾರಿ ನಿರಬಂಧ ಹೇರಿದೆ.
೧೫. AUSINUX 17 ಏನಿದು ?
೧. ಆಟಂ ಬಾಂಬ್
೨. ರಾಕೆಟ್
೩. ಉಪಗ್ರಹ
೪. ನೌಕಾ ಸಮರಾಭ್ಯಾಸ
ಸರಿಯಾದ ಉತ್ತರ : ನೌಕಾ ಸಮರಾಭ್ಯಾಸ
ವಿವರಣೆ : AUSINUX 17 ಭಾರತ - ಆಸ್ಟ್ರೇಲಿಯಾ ಜಂಟಿ ನೌಕಾ ಸಮರಾಭ್ಯಾಸ ಕಾರ್ಯಾಚರಣೆ. ಆಸ್ಟ್ರೇಲಿಯಾದ ಫ್ರೆಮಂಟ್ಲದಲ್ಲಿ ೨೦೧೭ ರ ಜೂನ್ ತಿಂಗೈದು ದಿನಗಳ ಕಾಲ ನಡೆಯಿತು. ಇದರಲ್ಲಿ ಭಾರತದ ನೌಕಾಪಡೆ ಮತ್ತು ಆಸ್ಟ್ರೇಲಿಯಾದ ಸಮರ ನೌಕೆಗಳು ಭಾಗವಹಿಸಿದ್ದವು.
೧೬. ವಿಶ್ವದ ಅತಿ ಚಿಕ್ಕ ಮತ್ತು ಅಗ್ಗದ ಖಾಸಗಿ ಜೆಟ್ ವಿಷನ್ ತಯಾರಿಸಿದ ದೇಶ ಯಾವುದು ?
೧. ಅಮೇರಿಕಾ
೨. ಭಾರತ
೩. ಫ್ರಾನ್ಸ್
೪. ರಷ್ಯಾ
ಸರಿಯಾದ ಉತ್ತರ : ಅಮೇರಿಕಾ
ವಿವರಣೆ : ಅಮೇರಿಕಾದ ಖಾಸಗಿ ಸಂಸ್ಥೆಯೊಂದು ಅಗ್ಗದ ಜೆಟ್ ವಿಷನ್ ತಯಾರಿಸಿ ಇತ್ತೀಚೆಗೆ ಬಿಡುಗಡೆ ಮಾಡಿತು.ಇದರ ಬೆಲೆ ಕೇವಲ ₹೧೨.೬. ಇದರಲ್ಲಿ ೫ಜನ ಕುಳಿತುಕೊಳ್ಳಬಹುದಾಗಿದ್ದು, ಒಂದು ಎಂಜಿನ್ ಮತ್ತು ಓರ್ವ ಪೈಲೆಟ್ ಹೊಂದಿರುವ ಜೆಟ್ ಆಗಿದೆ. ಇದರ ವೇಗ ಗಂಟೆಗೆ ೩೪೫ಮೈಲು. ೨೮೦೦೦ ಅಡಿ ಎತ್ತರದಲ್ಲಿ ಹಾರಬಲ್ಲದು.
೧೭. ಭಾರತದ ಪ್ರಪ್ರಥಮ ಹರಿಯುವ ನದಿ ಕೆಳಗಿನ ಮೆಟ್ರೋ ಸುರಂಗಮಾರ್ಗ ಯಾವ ನಗರದಲ್ಲಿ ನಿರ್ಮಾಣವಾಗಲಿದೆ ?
೧. ಚೆನ್ನೈ
೨. ಕೋಲ್ಕತ್ತಾ
೩. ದೆಹಲಿ
೪. ವಾರಣಾಸಿ
ಸರಿಯಾದ ಉತ್ತರ : ಕೋಲ್ಕತ್ತಾ
ವಿವರಣೆ : ಕೋಲ್ಕತ್ತಾದ ಹೂಗ್ಲಿ ನದಿಯಲ್ಲಿ ಪ್ರಸಿದ್ಧ ಹೌರಾ ಸೇತುವೆಯಿಂದ ಕೆಲವೇ ಮೀಟರ್ ದೂರದಲ್ಲಿ ಹೂಗ್ಲಿ ನದಿಯ ತಳದಿಂದ ೩೦ಮೀಟರ್ ಕೆಳಗೆ ನಿರ್ಮಾಣಗೊಳ್ಳಲಿದೆ. ಈ ಸುರಂಗ ಹೌರಾ ಮತ್ತು ಸಿಲಾಹ ನಗರಗಳನ್ನು ಜೋಡಿಸುತ್ತದೆ. ನಿರ್ಮಾಣಕಾರ್ಯ ೨೦೧೯ರ ಡಿಸೆಂಬರ್ ವೇಳೆಗೆ ಮುಗಿಯಲಿದೆ. ನಿರ್ಮಾಣದ ವೆಚ್ಚ ₹೬೦ ಕೋಟಿ.
೧೮. ಗ್ರಾಮೀಣ ಜನರಿಗಾಗಿ ಕೇಂದ್ರ ಸರ್ಕಾರ ಯಾವ ವಿಡಿಯೋ ಕಾನ್ಫರೆನ್ಸಿಂಗ್ ಕಾನೂನು ಸೇವೆಯನ್ನು ಆರಂಭಿಸಿದೆ ?
೧. ಟೆಲಿಟಾಕ್
೨. ಟೆಲಿ ವಾಯ್ಸ್
೩. ಟೆಲಿ ಲಾಯರ್
೪. ಟೆಲಿ ಲಾ
ಸರಿಯಾದ ಉತ್ತರ : ಟೆಲಿ ಲಾ
ವಿವರಣೆ : ಕೇಂದ್ರ ಸರ್ಕಾರವು ಇತ್ತೀಚೆಗೆ ಗ್ರಾಮೀಣ ಪ್ರದೇಶದವರಿಗೆ ಅದರಲ್ಲೂ ವಿಶೇಷವಾಗಿ ಬಡವರಿಗೆ ಕಾನೂನು ಸೇವೆ ಒದಗಿಸಲು "ಟೆಲಿ ಲಾ" ಎಂಬ ವಿಡಿಯೋ ಕಾನ್ಫರೆನ್ಸಿಂಗ್ ಪೋರ್ಟಲ್ ಅನ್ನು ಆರಂಭಿಸಿತು. ಈ ಪೋರ್ಟಲ್ ಮೂಲಕ ಜನರಿಗೆ ಒದಗಿಸುವುದು ಸರ್ಕಾರದ ಮುಖ್ಯ ಉದ್ದೇಶ.
೧೯. ಭಾರತ ಸರ್ಕಾರದ ನೀತಿ ಆಯೋಗದ ನೂತನ ಉಪಾಧ್ಯಕ್ಷರು ಯಾರು ?
೧. ಅರವಿಂದ್ ಪರಗರಿಯಾ
೨. ಆನಂದಕುಮಾರ್
೩. ರಾಜೀವ್‍ಕುಮಾರ್
೪. ರಾಮ್ ಕುಮಾರ್
ಸರಿಯಾದ ಉತ್ತರ : ರಾಜೀವ್‍ಕುಮಾರ್
ವಿವರಣೆ : ಹಿರಿಯ ಅರ್ಥಶಾಸ್ತ್ರಜ್ಞ ರಾಜೀವ್‍ಕುಮಾರ್ ನೀತಿ ಆಯೋಗದ ನೂತನ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಪ್ರಧಾನಮಂತ್ರಿಗಳು ಇದರ ಅಧ್ಯಕ್ಷರಾಗಿರುತ್ತಾರೆ. ನೀತಿ ಮತ್ತು ಸಂಶೋಧನಾ ಕೇಂದ್ರದ ಹಿರಿಯ ಸದಸ್ಯರಾಗಿರುವ ರಾಜೀವ್‍ಕುಮಾರ್ ಭಾರತದ ಆರ್ಥಿಕತೆ ಹಾಗೂ ರಾಷ್ಟ್ರೀಯ ಸುರಕ್ಷತೆಗೆ ಸಂಬಂಧಿಸಿದ ಹಳವು ಕೃತಿಗಳನ್ನು ರಚಿಸಿದ್ದಾರೆ. ಅರ್ಥಶಾಸ್ತ್ರದಲ್ಲಿ ಡಿಫಿಲ್ (ಆಕ್ಸ್‌ಫರ್ಡ್ ವಿವಿ) ಮತ್ತು ಲಖನೌ ವಿವಿಯಿಂದ ಪಿಎಚ್ಡಿ ಪಡೆದಿದ್ದಾರೆ.
೨೦. ಬಹಾಮಾಸ್ ನಲ್ಲಿ ನಡೆದ ಕಾಮನ್‌ವೆಲ್ತ್ ಯುವ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಏಕೈಕ ಬಾಕ್ಸರ್ ಯಾರು ?
೧. ಸಚಿನ್ ಸಿವಾಚ್
೨. ರಮೇಶ್ ಶ್ರೀವಾಸ್ತವ್
೩. ಸಿಕಂದರ್ ಕೌರ್
೪. ಮಿಲಿಂದರ್ ಸಿಂಗ್
ಸರಿಯಾದ ಉತ್ತರ : ಸಚಿನ್ ಸಿವಾಚ್
ವಿವರಣೆ : ಬಹಾಮಾಸ್ ನಲ್ಲಿ ನಡೆದ ಕಾಮನ್‌ವೆಲ್ತ್ ಯುವ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಏಕೈಕ ಬಾಕ್ಸರ್ ಎಂಬ ಖ್ಯಾತಿಗೆ ಸಚಿನ್ ಶಿವಾಚ್ ಪಾತ್ರರಾದರು. ಹಲವಾರು ರಾಷ್ಟ್ರೀಯ ಕೂಟಗಳಲ್ಲಿ ಭಾಗವಹಿಸಿರುವ ಇವರು, ೨೦೧೬ರಲ್ಲಿ ನಡೆದ ಯೂತ್ ಬಾಕ್ಸಿಂಗ್ ವರ್ಲ್ಡ್ ಚಾಂಪಿಯನ್ಷಿಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ೨೦೧೭ರಲ್ಲಿ ನಡೆದ ಏಷ್ಯನ್ ಯೂತ್ ಬಾಕ್ಸಿಂಗ್ ಚಾಂಪಿಯನ್ಷಿಪ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
No comments:
Post a Comment