ಹೇಳಲಿಲ್ಲ, ಹೇಳಲಾಗಲಿಲ್ಲ
ಹೇಳು ಹೇಳೆಂದು ಮನಸ್ಸು
ಒತ್ತಾಯಿಸಿದರೂ ಆಗಲಿಲ್ಲ
ಜೀವಿಸುವೆ ನಿನೊಂದಿಗೆ ಹೇಳಲು
ನಾಲಿಗೆಯೇಕೋ ಸಹಕರಿಸಲಿಲ್ಲ.
ಗೆಳೆಯ
ಬರಲಿಲ್ಲ, ಬರಲಾಗಲಿಲ್ಲ
ಮೋಡ ಕಟ್ಟಿದರೂ ಸಹ
ಒಂದು ಹನಿಯೂ ಮಳೆಯಾಗಲಿಲ್ಲ
ಧರಣಿಗೇಕೆ ತಂಪೆರೆಯಲಿಲ್ಲ
ಸ್ನೇಹದ ಸಿಂಚನವಾಗಲಿಲ್ಲ
ಗೆಳೆಯ
ಪಡಿಯಲಿಲ್ಲ, ಪಡಿಯಲಾಗಲಿಲ್ಲ,
ಆ ಸ್ನೇಹ ನನಗೋಸ್ಕರ
ಹಂಬಲಿಸಿದರು ನನ್ನದಾಗಿಸಿಕೊಳಲಿಲ್ಲ
ನೆಲದಲ್ಲಿ ಬಿದ್ದು ಹೋಯಿತಲ್ಲ
ನಂಬಿಕೆ ಮಣ್ಣು ಪಾಲಾಯಿತಲ್ಲ
ಗೆಳೆಯ
ಹಾರಲಿಲ್ಲ, ಹಾರಲಾಗಲಿಲ್ಲ
ಚಿಲಿಪಿಲಿ ಸದ್ದು ಮಾಡುವ
ಮರಿಗುಬ್ಬಿ ರೆಕ್ಕೆ ಬಡಿಯಲಿಲ್ಲ
ಗೂಡನ್ನು ಬಿಟ್ಟು ಹೊರಬರಲಾಗಲಿಲ್ಲ
ಭವಿಷ್ಯವೆಲ್ಲ ಬರೇ ಕನಸಾಯಿತಲ್ಲ
ಗೆಳೆಯ
ಅರ್ಥವಿಲ್ಲ, ಅರ್ಥವಾಗಲಿಲ್ಲ
ಮನಸ್ಸಿನ ಭಾವನೆಯು
ಮನಸ್ಸಿಗೆ ತಿಲಿಯುವುದೆಂದೆನಲ್ಲ
ಭಾವನೆಗಳಿಲ್ಲದ ಮನುಷ್ಯನೆನಲ್ಲ
ಗೆಳೆಯ ನಿನ್ನ ಅನುಭವಕೇಕ್ಕೆ ಬರಲಿಲ್ಲ
ಮರೆತನಲ್ಲ, ಮರೆಯಲಾಗುತ್ತಿಲ್ಲ
ಮರು ಜನ್ಮಾ ಒಂದಿದರು
ಮರೆಯದೆ ಒಂದಗುವೆ ಓ ನನ್ನ
ಮಲೆನಾಡಿನ ಗೆಳೆಯನೆ...........
ಪರಶುರಾಮ. ಎಂ ಎಸ್
ತೆಗ್ಗಿಹಳ್ಳಿ
No comments:
Post a Comment