karunada geleya

dsfdsf

ಸ್ನೇಹ ಸುಂದರ,ಸುಮಧುರ, ಅಮರ


ಸ್ನೇಹದಿಂದ ನೆಲೆಸುವುದು ವಿಶ್ವಶಾಂತಿ.
ತೊಲಗುವುದು ಲೋಕದಲ್ಲಿ ಅಶಾಂತಿ,
ಸಕಲ ಚರಾಚರಗಳಲ್ಲೂ ನೆಲೆಸುವುದು ಪ್ರೀತಿ

ಸ್ನೇಹ ಸಮಸ್ತ ಲೋಕಕ್ಕೋ ಪಸರಿಸಲಿ,
ಈ ಜಗತ್ತಿನ ಎಲ್ಲಾ ಜನ ಒಂದಾಗಲಿ,
ಸ್ನೇಹ ಎಲ್ಲರಲ್ಲೂ ಸದಾಕಾಲ ಉಳಿಯಲಿ.

ಸ್ನೇಹದಲ್ಲಿ ಸ್ವಾರ್ಥವಿಲ್ಲ,
ಜಾತಿ ಮತಗಳ ಭೇದವಿಲ್ಲ,
ಯಾವುದೇ ರೀತಿಯ ಮೇಲು ಕೀಳುಗಲಿಲ್ಲ.

ಸ್ನೇಹಕ್ಕೆ ಯಾವುದೇ ಬಂಧನವಿಲ್ಲ,
ಅದಕ್ಕೆ ಯವುದೇ ಮಿತಿಯಿಲ್ಲ,
ಅಪಾರ್ಥದ ಭಯವಿಲ್ಲ, ಇಲ್ಲಿ ನಂಬಿಕೆಯೇ ಎಲ್ಲಾ.

ಆಪತ್ತಿಗೆ ಆದವನೆ ನಿಜವಾದ ಸ್ನೇಹಿತನು,
ಸದಾಬಯಸುವನು ನಮ್ಮ ಹಿತವನು,
ಕಷ್ಟದಲ್ಲಿ ಕೊಡುವನು ತನ್ನ ಹೆಗಲನು.

ಸ್ನೇಹದಿಂದ ಮುಗಿಯಲಿ ಎಲ್ಲಾಸಮರ,
ಈ ಲೋಕದಲ್ಲಿ ಎಲ್ಲಾ ನಶ್ವರ,
ಸ್ನೇಹ ಸುಂದರ,ಸುಮಧುರ, ಅಮರ,
ಸ್ನೇಹ ಶಾಸ್ವಾಥ,

ಸ್ನೇಹ ಎಂದು ಮುಗಿಯದಿರದ ಪಯಣ

ಪರಶುರಾಮ. ಎಂ.ಎಸ್.
ತೆಗ್ಗಿಹಳ್ಳಿ

No comments: