ನಮ್ಮ ಹೊಸ ವರ್ಷ ಯಾವಾಗಗೊತ್ತೇ? - ಹಿಂದೂಗಳ ಹೊಸ ವರ್ಷ ಯುಗಾದಿ . ಯುಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ
ಹಿಂದೂಗಳೇ, ಒಂದು ದಿನದ ಮತಾಂತರವು ನಿಮಗೆ ಒಪ್ಪಿಗೆಯಿದೆಯೇ?
ಜನವರಿ ೧ ಅಲ್ಲ, ಯುಗಾದಿಯೇ ಹಿಂದೂಗಳಿಗೆ ಹೊಸವರ್ಷ!
ಹಿಂದೂಗಳಿಗೆ ಡಿಸೆಂಬರ್ ೩೧ರ ರಾತ್ರಿ ಎಂದರೆ ಪಾಶ್ಚಾತ್ಯ ಸಂಸ್ಕೃತಿಯ ಅತಿರೇಕದ ಮತ್ತು ಭೋಗವಾದದ ಪರಾಕಾಷ್ಠೆಯ ದಿನವಾಗಿದೆ. ಹಾಗಾಗಿ ಈ ರಾತ್ರಿಯಂದು ಮದ್ಯಪಾನ, ಮಾಂಸಾಹಾರ ಮತ್ತು ನೃತ್ಯ ಗಾಯನಗಳಂತಹ ನೈತಿಕತೆಗೆ ಮಸಿಬಳಿಯುವಂತಹ ಭೋಗವಾದಿ ಘಟನೆಗಳು ಸಾರಾಸಗಟಾಗಿ ನಡೆಯುತ್ತವೆ.
ಯಾರಾದರೊಬ್ಬ ವ್ಯಕ್ತಿಯು ಮತಾಂತರಗೊಂಡ ನಂತರ ಹೊಸ ಧರ್ಮದಲ್ಲಿನ ರೂಢಿ-ಪರಂಪರೆಗಳನ್ನು ಮತ್ತು ಉತ್ಸವಗಳನ್ನು ಆಚರಿಸುತ್ತಾನೆ. ಅದೇ ರೀತಿ ವಿಶ್ವದಲ್ಲಿನ ಶಕ್ತಿಗಳಿಗೆ (ಗ್ರಹ ಹಾಗೂ ನಿಸರ್ಗ) ಹಾಗೂ ಈ ಮಣ್ಣಿನೊಂದಿಗೆ ಯಾವುದೇ ಸಂಬಂಧವಿಲ್ಲದ ಜನವರಿ ೧ನ್ನು ಹಿಂದೂ ಧರ್ಮೀಯರಾದ ನಾವು ಪಾಶ್ಚಾತ್ಯರಂತೆ ಆಚರಿಸುತ್ತೇವೆ ಎಂದರೆ ಇದು ಒಂದು ದಿನದ ಮತಾಂತರವೇ ಆಗಿದೆ.
ಡಿಸೆಂಬರ್ ೩೧ರಂದು ರಾತ್ರಿ ಎಲ್ಲೆಡೆಗಳಲ್ಲಿ ಹಾಡುಕುಣಿತ ಮತ್ತು ಪಟಾಕಿಗಳ ಅಬ್ಬರ ಮತ್ತು ಜನವರಿ ೧ರಂದು ಒಡೆದ ಶರಾಬು ಬಾಟಲಿಗಳು ಮತ್ತು ಪಟಾಕಿಗಳ ಚೂರಾದ ಕಾಗದಗಳಿಂದ ಇಡೀ ವಾತಾವರಣವು ಭಯಾನಕವಾಗಿ ಕಾಣಿಸುತ್ತದೆ. ಪ್ರತಿಯೊಂದು ಹಬ್ಬ ಮತ್ತು ಉತ್ಸವಗಳ ಸಮಯದಲ್ಲಿ ಭಗವಂತನ ಅಧಿಷ್ಠಾನವನ್ನಿಟ್ಟುಕೊಂಡು ತ್ಯಾಗದ ಮತ್ತು ಸಂಯಮೀ ಜೀವನವನ್ನು ಸಾಗಿಸುವ ಹಿಂದೂಗಳಿಗೆ ಇಂತಹ ಬೀಭತ್ಸ ಮತ್ತು ಅಸುರೀ ಭೋಗವಾದವು ಶೋಭಿಸಲಾರದು. ಹಾಗಾಗಿ ಎಲ್ಲ ಕ್ಷೇತ್ರಗಳಿಂದಾಗುವ ಪಾಶ್ಚಾತ್ಯರ ಅಂಧಾನುಕರಣೆಯನ್ನು ನಾವು ತಡೆಗಟ್ಟಬೇಕಾಗಿದೆ. ಹಿಂದೂಗಳ ಭಾವೀ ಪೀಳಿಗೆಯು ಪಾಶ್ಚಾತ್ಯರಂತೆ ಭೋಗವಾದಿ ಮತ್ತು ಅನಾಗರಿಕವಾಗಬಾರದೆಂದು ಅನೇಕ ಹಿಂದೂಗಳಿಗೆ ಅನಿಸುತ್ತದೆ. ಹಾಗಾಗಿ ಜನವರಿ ೧ರಂದು ನಡೆಯುವ ಸಂಸ್ಕೃತಿಯ ನಾಶವನ್ನು ತಡೆಗಟ್ಟಲು ಹಿಂದೂಗಳು ಪ್ರಯತ್ನಿಸಲೇಬೇಕು. ಇದನ್ನು ಮುಂದಿನ ಕೃತಿಗಳಿಂದ ಪ್ರಾರಂಭಿಸೋಣ.
ಹಿಂದೂಗಳೇ, ಹೊಸವರ್ಷವನ್ನು ಯುಗಾದಿಯಂದೇ ಆಚರಿಸಿ!
ಚೈತ್ರ ಶುಕ್ಲ ಪಾಡ್ಯ (ಯುಗಾದಿ)ವು ಸೃಷ್ಟಿಯ ನಿರ್ಮಿತಿಯ ದಿನವಾಗಿದೆ. ಹಾಗಾಗಿ ಈ ದಿನ ನಿಜವಾದ ವರ್ಷಾರಂಭದ ದಿನವಾಗಿದೆ. ಆದರೆ ಪಾಶ್ಚಾತ್ಯರ ಅಂಧಾನುಕರಣೆಯಂತೆ ಯಾವುದೇ ಆಧ್ಯಾತ್ಮಿಕ ಅಡಿಪಾಯವಿಲ್ಲದ ಜನವರಿ ೧ ರಂದು ಹೊಸವರ್ಷವನ್ನು ಆಚರಿಸುವುದೆಂದರೆ ಹಿಂದೂಗಳ ಒಂದು ದಿನದ ಮತಾಂತರವೇ ಆಗಿದೆ.
ಮೂಲ : ಸನಾತನ ಸ೦ಸ್ಥೆ

ತೆಗ್ಗಿಹಳ್ಳಿ
No comments:
Post a Comment