1. ಜೀವನದಲ್ಲಿ ನಾವೆಷ್ಟು ಖುಷಿಯಾಗಿದ್ದೇವೆ
ಎಂಬುದರ ಮೇಲೆ ಜೀವನದ ಸಾರ್ಥಕತೆ
ನಿರ್ಧಾರವಾಗುವುದಿಲ್ಲ. ನಮ್ಮಿಂದ ಎಷ್ಟು ಜನ
ಸಂತೋಷವಾಗಿದ್ದಾರೆ ಎಂಬುದು ಮುಖ್ಯ.
2. ಪರಿಚಿತರು ಅಪರಿಚಿತರಾಗಿ ಬಿಡುವುದು,
ಅಪರಿಚಿತರು ಪರಿಚಿತರಾಗಿ ಉಳಿದು ಬಿಡುವುದ
ಇವೆರಡೂ ಸಾಧನೆಯನ್ನಷ್ಟೇ ಅವಲಂಬಿಸಿವೆ.
3. ಏರಿಕೆ ಮತ್ತು ಇಳಿಕೆ ಎಲ್ಲದರಲ್ಲಿಯೂ
ಸಮಾನವಾಗಿದ್ದರೆ ಮಾತ್ರ ಜೀವನಕ್ಕೆ,
ಜೀವಕ್ಕೆ ಅರ್ಥ. ಬರಿ ಏರಿಕೆಯೇ ಆಗುತ್ತಿದ್ದರೆ
ಒಂದು ಇಳಿಕೆಯೂ ಸಹಿಸಲಸಾದ್ಯ.
4.ವಿಶ್ವಾಸ ಒಂದು ನಮ್ಮ ಜೊತೆಗಿದ್ದರೆ
ಯಾವುದಕ್ಕೂ ಹೆದರಬೇಕಾಗಿಲ್ಲ.
ಆತ್ಮವಿಶ್ವಾಸದಿಂದ ನಿಲ್ಲಲು ಭಯಕ್ಕೂ ಭಯ.
5.ಹೊತ್ತೊಯ್ಯುವ ಮುನ್ನ ಹತ್ತು ಮಂದಿಯ
ಬಾಯಿಗೆ ಸವಿ ಮಾತಾಗುವಂತೆ,
ಬದುಕೆನ್ನುವ ಶಿಖರ ಹತ್ತಬೇಕು.
ಅಷ್ಟೇ ಮಾನ್ಯ, ಶೇಷವೆಲ್ಲವೂ ಶೂನ್ಯ
6. ನೋವು ಹಾಗೂ ಮನದ ಭಾವ ಅಸ್ಥಿರ.
ನಮ್ಮದೆನ್ನುವ ನೋವು ನಾಲ್ಕು ದಿನಕ್ಕೆ,
ಪರರದ್ದಾಗಿದ್ದರೆ ಒಂದೇ ದಿನಕ್ಕೆ
ವಿಸ್ಮೃತಿಯಾಗಿಸುವುದು ಅದರ ಗುಣ.
7.ಕನಸು ಜೀವನಕ್ಕೆ ಸ್ಪೂರ್ತಿ,
ನಂಬಿಕೆ ಕೆಲಸಕ್ಕೆ ಸ್ಪೂರ್ತಿ,
ಪ್ರೀತಿ ಹೃದಯಕ್ಕೆ ಸ್ಪೂರ್ತಿ,
ನಗು ಎಲ್ಲದಕ್ಕೂ ಸ್ಪೂರ್ತಿ.
8. ಸಂಪತ್ತು ಎಷ್ಟೇ ಇದ್ದರೂ
ಸರಳತೆ ಮಾತ್ರ ಮನುಷ್ಯನಿಗೆ
ಒಳ್ಳೆಯ ಗೌರವ ತಂದು ಕೊಡುತ್ತೆ,
ಏಕೆಂದರೆ ಸಂಪತ್ತಿಗೆ ಬೆಲೆ ಕಟ್ಟಬಹುದು,
ಸರಳತೆಗೆ ಬೆಲೆ ಕಟ್ಟಲಾಗದು.
9. ಅವರಿವರಂತೆ ಬದುಕಲು ಹೋಗಿ ನಮ್ಮಂತೆ
ಕಡೆವರೆಗೂ ಬದುಕುವುದೇ ಇಲ್ಲ.
ಅವರಿವರ ಆಂತರ್ಯ ನಮಗೆ ಅಗೋಚರ,
ಆದರೂ ಅವರು ನಮಗೆ ಆದರ್ಶವೆನ್ನಿಸುವುದು
ನಮ್ಮ ಬೌದ್ಧಿಕತೆಯ ದೀವಾಳಿತನ.
10. ಜೀವನದಲ್ಲಿ ಯಾವ ಬದಲಾವಣೆಗಳು ಆಗುತ್ತಿಲ್ಲವೆಂದರೆ
ಅದಕ್ಕೆ ಎಚ್ಚರಿಕೆಯ ನಡೆಯೆನ್ನಬಹುದು
ಅಥವಾ
ಏಕತಾನತೆಯ ಜೀವನಕ್ಕೆ ಒಗ್ಗಿರಬಹುದು.
ಇವೆರಡೂ ವಿಮುಖ ನಡೆಗಳು.
11. ಯಾವ ಆದರ್ಶವನ್ನೂ ಹುಟ್ಟು ಹಾಕುವ
ಅಥವಾ ಯಾರನ್ನೂ ಮೆಚ್ಚಿಸುವ ಗೋಜಿಗೆ
ಹೋಗಬೇಕಾಗಿಲ್ಲ. ನಾವು ಸರಿಯಾಗಿದ್ದೇವೆಯೇ
ಎನ್ನುವ ಆತ್ಮವಿಮರ್ಶೆ ಆಗಾಗ ಆಗುತ್ತಿದ್ದರೆ
ಅದುವೇ ಆದರ್ಶ, ಮೆಚ್ಚುಗೆಗೆ ರಹದಾರಿ.
12. ಮನುಷ್ಯನು ಕಲಿಯಲು ಬಯಸುವುದಾದರೆ
ಅವನ ಪ್ರತಿಯೊಂದು ತಪ್ಪು ಅವನಿಗೆ ಶಿಕ್ಷಣ ಕೊಡುತ್ತದೆ.
ನಮ್ಮೊಳಗಿನ ವಿದ್ಯಾರ್ಥಿ ಕಲಿಯಲು ಒಪ್ಪಿದರೆ
ಎಲ್ಲವೂ ಪಾಠಗಳೇ, ಎಲ್ಲರೂ ಗುರುಗಳೇ.
13.ಕೆಲವೇ ಜನರು ದೊಡ್ಡ ಮನುಷ್ಯರಾಗಿದ್ದಾರೆ ಎಂದರೆ
ಅದಕ್ಕೆ ಬಹು ಸಂಖ್ಯೆಯ ದಡ್ಡರ ಪಾತ್ರ
ಅವರಿಗೇ ಅರಿವಿಲ್ಲದಂತೆ ಇದ್ದೆ ಇರುತ್ತದೆ.
14. ಶಿಸ್ತು ಗೆಲುವಿನ ಅವಿಭಾಜ್ಯ ಅಂಗ,
ಅಶಿಸ್ತು ಒಮ್ಮೆ ಗೆಲ್ಲಿಸಬಹುದು,
ಮತ್ತೆ ಮತ್ತೆ ಗೆಲ್ಲಬೇಕೆಂದರೆ
ಶಿಸ್ತು ಬೇಕೇ ಬೇಕು.
15 ಪ್ರತಿ ಕ್ಷಣ ನಡೆಯುವ ಕಾಲುಗಳೇ ಎಡವುತ್ತವೆ,
ಆಕಾಶದಿ ಮಿನುಗುವ ನಕ್ಷತ್ರಗಳು ಪತನಗೊಳ್ಳುತ್ತವೆ,
ಹೊಳೆಯುವ ಸೂರ್ಯ ಚಂದ್ರರಿಗೂ ಗ್ರಹಣ ಆವರಿಸುತ್ತವೆ
ಹಾಗೆಯೇ ಮನುಜನ ಜೀವನದಲ್ಲೂ ಏಳುಬೀಳುಗಳು ಕಾಣುತ್ತಲೇ ಇರುತ್ತದೆ,
ಕೆಳಗೆ ಬೀಳುವಾಗ ಕುಗ್ಗದೆ, ಮೇಲೇರುವಾಗ ಹಿಗ್ಗದೆ ಸಮಚಿತ್ತದಿ ಬಾಳಿ ಬದುಕುವುದೇ ಜೀವನ.
16. ನಮ್ಮ ಗೌರವ ಬೇರೆಲ್ಲೂ ಇಲ್ಲ,
ನಾವು ಮಾಡುವ ಒಳ್ಳೆಯ ಕೆಲಸದಲ್ಲಿ ಇರುತ್ತದೆ.
ಭಾವನೆ ಒಳ್ಳೆಯದಿದ್ದರೆ ಬಾಗ್ಯ ಬೆನ್ನೇರಿ ಬರುತ್ತದೆ.
17. ಸಮುದ್ರ ಎಂದು ನೀರಿಗಾಗಿ ಯೋಚಿಸುವುದಿಲ್ಲ
ತಾನಾಗೇ ನೀರು ಅಲ್ಲಿಗೆ ಹರಿದುಬರುತ್ತದೆ.
ಯಶಸ್ಸು ಮತ್ತು ಕೀರ್ತಿಗಳು ಹಾಗೆ
ಒಮ್ಮೆ ಅದಕ್ಕೆ ಬೇಕಾದ ಯೋಗ್ಯತೆ ಗಳಿಸಿದ್ದಲ್ಲಿ
ನಮ್ಮನ್ನು ಹಿಂಬಾಲಿಸಿ ಬರುತ್ತದೆ.
18. ನಾವು ದೊಡ್ಡವರಾದಾಗ ನಮಗೆ
ಪೆನ್ಸಿಲ್ ಬದಲಿಗೆ ಪೆನ್ ನೀಡಲಾಗುತ್ತದೆ.
ಏಕೆಂದರೆ
ನಮ್ಮ ತಪ್ಪುಗಳನ್ನು ಅಳಿಸುವುದು ಇನ್ನು ಮುಂದೆ ಸುಲಭವಲ್ಲ
ಎಂಬುದನ್ನು ನಮಗೆ ಅರ್ಥ ಮಾಡಿಸಲು.
19. ಹಡಗು ಎಷ್ಟೇ ಭಾರವಿದ್ದರು
ಕಡಲ ಮೇಲೆ ತೇಲಲೇಬೇಕು.
ಹಾಗೆ ಮನಸ್ಸು ಎಷ್ಟೇ ಭಾರವಾದರೂ
ಬದುಕಿನ ಜೊತೆ ಸಾಗಲೇಬೇಕು.
20. ಪ್ರಕೃತಿ ಮಾನವರಿಗೆ ತಿಳಿಸಿದ
ಅತೀ ಸುಂದರವಾದ ಸಂದೇಶ
ನೀವು ಮಾಲೀಕರಲ್ಲ.
ನೀವು ಈ ಜಗತ್ತಿಗೆ ಬಂದ ಅತಿಥಿಗಳು ಮಾತ್ರ.
21. ಯಾರದ್ದೇ ಖಾಸಗಿ ಬದುಕಿನ ಅರಿವು ನಮಗಿರುವುದಿಲ್ಲ,
ಆದ್ದರಿಂದ ಅವರ ಪೂರ್ಣ ವ್ಯಕ್ತಿತ್ವದ ಕುರಿತಂತೆ ಮಾತನಾಡುವಾಗ
ಇಲ್ಲದ್ದೆ ಹೆಚ್ಚು ಸದ್ಗುಣಗಳು ಇಣುಕುತ್ತವೆ.
22. ಆಹಾರದಲ್ಲಿ ಭಕ್ತಿ ಬೆರೆಸಿದರೆ,
ಪ್ರಸಾದವಾಗುತ್ತದೆ.
ನೀರಿನಲ್ಲಿ ಭಕ್ತಿ ಬೆರೆಸಿದರೆ,
ತೀರ್ಥವಾಗುತ್ತದೆ.
ಮಾಡುವ ಕೆಲಸದಲ್ಲಿ ಶ್ರದ್ಧೆ ಬೆರೆಸಿದರೆ,
ಯಶಸ್ಸು ನಮ್ಮದಾಗುತ್ತದೆ.
23. ಆಸೆಗಳಿಗಾಗಿ ಬದುಕಬೇಡ,
ಆದರ್ಶಕ್ಕಾಗಿ ಬದುಕು.
ದೀರ್ಘವಾದ ಜೀವನ ಮುಖ್ಯವಲ್ಲ,
ದಿವ್ಯವಾದ ಜೀವನವೇ ಮುಖ್ಯ.
24. ಪಾಠವನ್ನು ಕಲಿಸಿ ಪರೀಕ್ಷೆ ಇಡುವುದು ವಿದ್ಯೆ.
ಪರೀಕ್ಷೆಯನ್ನು ಇಟ್ಟು ಪಾಠ ಕಲಿಸುವುದು ಜೀವನ.
25. ಅಡೆ-ತಡೆಗಳ ಪಡೆ ಎಡೆಯಿಲ್ಲದೆ
ಎಡತಾಕುತ್ತಿದ್ದರೆ ಮಾತ್ರ
ಚಲನ-ಶೀಲತೆಯಲ್ಲಿದ್ದು ಕಡೆಗೊಂದು ಕಡೆ ತಲುಪುತ್ತೇವೆ.
No comments:
Post a Comment