karunada geleya

dsfdsf

"ಸಿಗದ ಪ್ರೀತಿಯನ್ನು ಹುಡುಕಬೇಡ"

ಸಿಗದ ಪ್ರೀತಿಯನ್ನು ಹುಡುಕಬೇಡ.,
ಸಿಕ್ಕ ಪ್ರೀತಿಯನ್ನು ಬಿಡಬೇಡ.,
ಬರದ ಪ್ರೀತಿಯನ್ನು ಕಾಯಬೇಡ.,
ಬಂದ ಪ್ರೀತಿಯನ್ನು ಕಾಯಿಸಬೇಡ.,
ಕೊಡದ ಪ್ರೀತಿಯನ್ನು ಕೇಳಬೇಡ.,
ಕೊಟ್ಟ ಪ್ರೀತಿಯನ್ನು ಮರೆಯಬೇಡ

ನಿನ್ನ ದೇಹದಲ್ಲಿ ಉಸಿರಿರುವ ತನಕ ಅಷ್ಟೇ ನಿನಗೊಂದು ಹೆಸರು
ಉಸಿರು ನಿಂತ ಮೇಲೆ
ನಿನ್ನೆಸರ ಹಿಡಿದು ಯಾರು ಕೂಗರು
ಕಷ್ಟದಲಿ ಇರುವಾಗ ಯಾರು ಬರರು ಬಂಧು ಬಳಗದವರು
ಇರುವಾಗ
ಸುಖವಾಗಿ ಊರೆಲ್ಲ ನೆಂಟರು !

ಜೀವನದ ಹಾದಿಯಲಿ ಯಾರು ಯಾರ ಜೊತೆಗೂ ಬರುವವರು
ತಿರುವುಗಳು
ಕಂಡಾಗ ಎಲ್ಲಿ ಮರೆಯಾಗಿ ಹೋಗುವರು
ಒಲವಲಿ ಕಂಡ ಜನ ವಿಷವನೆ ಕಕ್ಕುವರು
ನಂಬಿಸಿ
ನಮ್ಮ ಬೆನ್ನಿಗೆ ಹಿರಿಯುವರು !

ಇಲ್ಲದ ಅನುಮಾನದಿ ಜಗವನೆ ನೋಡುವೆವು
ಪ್ರೀತಿಸುವ
ಜೀವ ಸಿಕ್ಕಿದರೆ ಜಗವನೆ ಮರೆಯುವೆವು
ಜೊತೆಯಲಿ ಇದ್ದರೆ ಪ್ರೀತಿ ನೋವಲ್ಲು ನಗುವೆವು

ದೂರಿ ನಮ್ಮ ದೂರ ಹೋದರೆ ಪ್ರೀತಿ , ಅದರ ನೆನಪಲ್ಲೇ ಬೇಯುವೆವು !

ಯಾರ
ನಂಬಿ ಏನಾಗಬೇಕಿಲ್ಲ
ಹೋಗುವಾಗ ಯಾರು ಕೂಡ ನಮ್ಮ ಜೊತೆ ಬರುವುದಿಲ್ಲ
ನಂಬಿಕೆ
ಇದ್ದರೆ ನಮ್ಮಲ್ಲಿ ಅದಕಿಂತ ಆಯುದ ಬೇಕಿಲ್ಲ
ಹುಚ್ಚು ಮನ ವಿಚಿತ್ರವಾಗಿ ಏನೇನೋ
ಕೇಳುತಿದೆಯಲ್ಲ!



ಬೇಕು ಎಂದಾಗ ಇರಲ್ಲ.......
ಬೇಡ ಎಂದಾಗ ಹೋಗಲ್ಲ......
ಬಯಸುವಾಗ ಸಿಗಲ್ಲ.......
ಸಿಗುವಾಗ ಬಯಸಲ್ಲ.......
ಹತ್ತಿರ ಇದ್ದಾಗ ದೂರ ಮಾಡ್ತೀವಿ....
ದೂರ ಹೋದಮೇಲೆ ಹತ್ತಿರ ಆಗೋಕೆ ನೋಡ್ತೀವಿ......
'That Is LIFE'

                                                                            ಪರಶುರಾಮ ಎಮ್  ಎಸ್ 
                                                                                 ತೆಗ್ಗಿಹಳ್ಳಿ 

No comments: