karunada geleya

dsfdsf

ಸಂಸ್ಥೆಗಳು ಮತ್ತು ಅದರ ಧ್ಯೇಯವಾಕ್ಯಗಳು



ಭಾರತ ಸರಕಾರ – ಸತ್ಯಮೇವ ಜಯತೇ – ಸತ್ಯವೇ ಜಯಿಸುತ್ತದೆ.

ಲೋಕಸಭೆ – ಧರ್ಮಚಕ್ರ ಪ್ರವರ್ತನಾಯ – ಧರ್ಮಚಕ್ರವನ್ನು ಪರಿಪಾಲಿಸಲು

ಸರ್ವೋಚ್ಛ ನ್ಯಾಯಾಲಯ – ಯತೋ ಧರ್ಮಸ್ತತೋ ಜಯಃ – ಎಲ್ಲಿ ಧರ್ಮವಿರುತ್ತದೋ ಅಲ್ಲಿ ಜಯವಿರುತ್ತದೆ.

ಆಲ್ ಇಂಡಿಯಾ ರೇಡಿಯೋ – ಬಹುಜನ ಹಿತಾಯ ಬಹುಜನ ಸುಖಾಯ – ಎಲ್ಲರ ಹಿತಕ್ಕೆ , ಎಲ್ಲರ ಸುಖಕ್ಕೆ.

ದೂರದರ್ಶನ – ಸತ್ಯಂ ಶಿವಂ ಸುಂದರಂ

ಗೋವಾರಾಜ್ಯ – ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖಭಾಗ್ ಭವೇತ್ – ಎಲ್ಲರೂ
ಸುಖವಾಗಿರಲಿ , ಯಾರಿಗೂ ದುಃಖದಲ್ಲಿರುವುದು ಬೇಡ.

ಭಾರತೀಯ ಜೀವ ವಿಮಾ ನಿಗಮ – ಯೋಗಕ್ಷೇಮಂ ವಹಾಮ್ಯಹಮ್ – ನಿಮ್ಮೆಲ್ಲರ ಯೋಗಕ್ಷೇಮವನ್ನು
ನಾನು ನೋಡಿಕೊಳ್ಳುತ್ತೇನೆ.

ಅಂಚೆ ಇಲಾಖೆ – ಅಹರ್ನಿಶಂ ಸೇವಾಮಹೇ – ಹಗಲು ರಾತ್ರಿ ನಿಮ್ಮ ಸೇವೆಗಾಗಿ.

ಕಾರ್ಮಿಕರ ಸಂಸ್ಥೆ – ಶ್ರಮ ಏವ ಜಯತೇ

ಭೂಸೇನೆ – ಸೇವಾ ಅಸ್ಮಾಕಂ ಧರ್ಮಃ – ಸೇವೆಯೇ ನಮ್ಮ ಧರ್ಮ.

ವಾಯು ಸೇನೆ – ನಭಸ್ಪೃಶಂ ದೀಪ್ತಮ್ – ಆಕಾಶವೇ ದೀಪ.

ಜಲಸೇನೆ – ಶಂ ನೋ ವರುಣಃ – ವರುಣನಿಗೆ ನಮಸ್ಕಾರ.

ಮುಂಬಯಿ ಪೋಲಿಸ್ – ಸದ್ರಕ್ಷಣಾಯ ಖಲನಿಗ್ರಹಣಾಯ – ಒಳ್ಳೆಯವರ ರಕ್ಷಣೆ , ದುಷ್ಟರ ನಿಗ್ರಹ.

ಹಿಂದಿ ಅಕಾಡೆಮಿ – ಅಹಮ್ ರಾಷ್ಟ್ರೀ ಸಂಗಮನೀ ವಸೂನಾಮ್ – ನಾನು ರಾಷ್ಟ್ರದಲ್ಲಿ
ಸಂಘಜೀವಿಯಾಗಿ ಬದುಕುತ್ತೇನೆ.

ಭಾರತೀಯ ರಾಷ್ತ್ರೀಯ ವಿಜ್ಞಾನ ಸಂಸ್ಥೆ – ಹವ್ಯಭಿರ್ಭಗಃ ಸವುತುರ್ವರೆಣ್ಯಂ

ಭಾರತೀಯ ಪ್ರಬಂಧಕರ ಸೇವಾ ಸಂಸ್ಥೆ – ಯೋಗಃ ಕರ್ಮಸು ಕೌಶಲಮ್ – ಕರ್ಮಗಳಲ್ಲಿ ಯೋಗವೇ ಶ್ರೇಷ್ಠ.

ವಿಶ್ವವಿದ್ಯಾಲಯ ಅನುದಾನ ಆಯೋಗ – ಜ್ಞಾನವಿಜ್ಞಾನಂ ವಿಮುಕ್ತಯೇ

ಭಾರತೀಯ ಶಿಕ್ಷಕರ ತರಬೇತಿ ಸಂಸ್ಥೆ – ಗುರುಃ ಗುರುತಮೋ ಧಾಮಃ – ಗುರುಗಳಲ್ಲಿ ಗುರುತಮವೇ ಇರಬೇಕು.

ಗುರುಕುಲ ಕಾಂಗಡಿ ವಿಶ್ವವಿದ್ಯಾಲಯ – ಬ್ರಹ್ಮಚರ್ಯೆಣ ತಪಸಾ ದೇವಾ ಮೃತ್ಯುಮುಪಾಘ್ನತ –
ಬ್ರಹ್ಮಚರ್ಯ ಮತ್ತು ತಪಸ್ಸಿನಿಂದ ದೇವರುಗಳು ಮೃತ್ಯುವನ್ನೇ ಗೆದ್ದಿದ್ದಾರೆ.

ಇಂದ್ರಪ್ರಸ್ಥ ವಿಶ್ವವಿದ್ಯಾಲಯ – ಜ್ಯೋತಿರ್ವೃಣೀತ ತಮಸೋ ವಿಜಾನನ – ಜ್ಯೋತಿ ಬೆಳಗಲಿ
, ಕತ್ತಲೆ ದೂರವಾಗಲಿ.

ಕಾಶಿ ಹಿಂದೂ ವಿಶ್ವವಿದ್ಯಾಲಯ – ವಿದ್ಯಯಾ ಅಮೃತಮಶ್ನುತೇ – ವಿದ್ಯೆಯಿಂದ ಅಮೃತ ಸಿಗುತ್ತದೆ.

ಆಂಧ್ರ ವಿಶ್ವವಿದ್ಯಾಲಯ – ತೇಜಸ್ವಿನಾವಧೀತಮಸ್ತು – ನಾವೆಲ್ಲರೂ ತೇಜಸ್ವಿಗಳಾಗೋಣ.

ಬಂಗಾಳ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯ – ಉತ್ತಿಷ್ಠತ ಜಾಗ್ರತ ಪ್ರಾಪ್ಯ
ವರಾನ್ ನಿಬೋಧತ – ಏಳಿ , ಎಚ್ಚರಗೊಳ್ಳಿ , ನಿಮ್ಮ ಗುರಿಸಾಧನೆಯಾಗುವವರೆಗೂ
ನಿಲ್ಲದಿರಿ.

ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ – ಆ ನೋ ಭದ್ರಾಃ ಕೃತವೋ ಯಂತು
ವಿಶ್ವತಃ – ಜಗತ್ತಿನ ಎಲ್ಲಾ ಶ್ರೇಷ್ಠ ವಿಚಾರಗಳೂ ನಮ್ಮತ್ತ ಬರಲಿ.

ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ – ಶ್ರುತಂ ಮೇ ಗೋ

ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ – ಶ್ರುತಂ ಮೇ ಗೋಪಾಯ – ಶ್ರುತಿಗಳು
ನಮ್ಮನ್ನು ರಕ್ಷಿಸಲಿ.

ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ – ಜ್ಞಾನಂ ಸಮ್ಯಗ್ ವೇಕ್ಷಣಮ್ – ಜ್ಞಾನವೇ ಸರಿಯಾದ ಕಣ್ಣು.

ಕಾಲಿಕಟ್ ವಿಶ್ವವಿದ್ಯಾಲಯ – ನಿರ್ಮಯ ಕರ್ಮಣಾ ಶ್ರೀಃ – ಶ್ರಮದಿಂದ ಸಂಪತ್ತು ಸಿಗುತ್ತದೆ.

ದೆಹಲಿ ವಿಶ್ವವಿದ್ಯಾಲಯ – ನಿಷ್ಠಾ ಧೃತಿಃ ಸತ್ಯಮ್ – ನಂಬಿಕೆ , ಬುದ್ಧಿ , ಸತ್ಯ

ಕೇರಳ ವಿಶ್ವವಿದ್ಯಾಲಯ – ಕರ್ಮಣಿ ವ್ಯಜ್ಯತೆ ಪ್ರಜ್ಞಾ – ಕರ್ಮಗಳಿಂದ ಬುದ್ಧಿ ಹೆಚ್ಚುತ್ತದೆ.

ರಾಜಸ್ಥಾನ ವಿಶ್ವವಿದ್ಯಾಲಯ – ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ – ಜಗತ್ತಿನ
ಪ್ರತಿಷ್ಟಾಪನೆಯನ್ನು ಧರ್ಮವೇ ಮಾಡುತ್ತದೆ..

ಪಶ್ಚಿಮಬಂಗಾಳ ರಾಷ್ಟ್ರೀಯ ನ್ಯಾಯ ಹಾಗೂ ವಿಜ್ಞಾನ ವಿಶ್ವವಿದ್ಯಾಲಯ – ಯುಕ್ತಿಹೀನಃ
ವಿಚಾರೇ ತು ಧರ್ಮಹೀನಃ ಪ್ರಜಾಯತೇ – ಮನುಷ್ಯ ಯುಕ್ತಿಹೀನ ವಿಚಾರಗಳಿಂದ
ಧರ್ಮಹೀನನೆನಿಸಿಕೊಳ್ಳುತ್ತಾನೆ

ವನಸ್ಥಲೀ ವಿದ್ಯಾಪೀಠ – ಸಾ ವಿದ್ಯಾ ಯಾ ವಿಮುಕ್ತಯೆ – ಯಾವ ವಿದ್ಯೆ ನಮ್ಮನ್ನು
ಬಂಧನದಿಂದ ವಿಮುಕ್ತಗೊಳಿಸುತ್ತೋ ಅದೇ ನಿಜವಾದ ವಿದ್ಯೆ.

ಎನ್.ಸಿ.ಇ.ಆರ್.ಟಿ – ವಿದ್ಯಯಾ ಅಮೃತಮಶ್ನುತೇ

ಕೇಂದ್ರೀಯ ವಿದ್ಯಾಲಯ – ತತ್ ತ್ವಂ ಪೂಷನ್ ಅಪಾವೃಣು

ಸಿ.ಬಿ,ಎಸ್.ಇ – ಅಸತೋ ಮಾ ಸದ್ಗಮಯ – ಕತ್ತಲಿನಿಂದ ಬೆಳಕಿನೆಡೆಗೆ.

ತಾಂತ್ರಿಕ ಮಹಾವಿದ್ಯಾಲಯ ತ್ರಿವೇಂಡ್ರಮ್ – ಕರ್ಮ ಜ್ಯಾಯೋ ಹಿ ಅಕರ್ಮಣಃ  –
ಕರ್ಮವನ್ನು ಬಿಟ್ಟವನು ಅಕರ್ಮಣನೆನಿಸಿಕೊಳ್ಳುತ್ತಾನೆ.

ದೇವಿ ಅಹಲ್ಯಾ ವಿಶ್ವವಿದ್ಯಾಲಯ ಇಂದೋರ್ – ಧಿಯೋ ಯೋನಃ ಪ್ರಚೋದಯಾತ್ – ಸದ್ಬುದ್ಧಿ
ನಮ್ಮನ್ನು ಪ್ರಚೋದಿಸಲಿ.

ಮದನ್ ಮೋಹನ ಮಾಲವೀಯ ತಾಂತ್ರಿಕ ಮಹಾವಿದ್ಯಾಲಯ – ಯೋಗಃ ಕರ್ಮಸು ಕೌಶಲಮ್

ಭಾರತೀಯ ಪ್ರಬಂಧಕ ಮತ್ತು ಕಾರ್ಮಿಕರ ಮಹಾವಿದ್ಯಾಲಯ ಹೈದರಾಬಾದ್ – ಸಂಗಚ್ಛಧ್ವಂ ಸಂವದಧ್ವಮ್ – ಒಟ್ಟಿಗೇ ನಡೆಯೋಣ , ಒಟ್ಟಿಗೇ ಮಾತಾಡೋಣ.

ರಾಷ್ಟ್ರೀಯ ಕಾನೂನು ವಿದ್ಯಾಲಯ – ಧರ್ಮೋ ರಕ್ಷತಿ ರಕ್ಷಿತಃ – ಧರ್ಮವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ.

No comments: