karunada geleya

dsfdsf

ಬಾಸ್

 ಕಂಪನಿಗಳಲ್ಲಿ ಬಾಸ್ ಚೆನ್ನಾಗಿದ್ದರೆ ಅಲ್ಲಿಯ ವಾತಾವವರಣ ಚೆನ್ನಾಗಿರತ್ತದೆ. ಬಾಸ್ ಆದವನು/ ಆದವಳು ತನ್ನ ಕೈಕೆಳಗೆ ಕೆಲಸ ಮಾಡುತ್ತಿರುವವರನ್ನು ಹೇಗೆ ದುಡಿಸಿಕೊಳ್ಳಬೇಕೆಂಬ ಕಲೆ ಗೊತ್ತಿಲ್ಲದಿದ್ದರೆ ಆ ಬಾಸ್ ಗೆ ತನ್ನ ಕೈ ಕೆಳಗಿನ ವ್ಯಕ್ತಿಗಳ ಸಾಮರ್ಥ್ಯವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಲು ಸಾಧ್ಯವಿಲ್ಲ.

       ಬಾಸ್ ಸ್ಥಾನದಲ್ಲಿದ್ದವರಲ್ಲಿ ಕೆಲವರಿಗೆ ಒಂದು ಆಲೋಚನೆ ಇರುತ್ತದೆ, ನಾನು ಹೇಳಿದಂತೆ ನನ್ನ ಕೆಳಗಿನವರು ಕೇಳಬೇಕು. ಆದ್ದರಿಂದ ಚೆನ್ನಾಗಿ ಆರ್ಡರ್ ಕೊಡಲು ಕಲಿತಿರುತ್ತಾರೆ, ಆ ಆರ್ಡರ್ ನಲ್ಲಿ ದರ್ಪ ಇರುತ್ತದೆ. ಈ ರೀತಿ ದರ್ಪದಿಂದ ಹೇಳಿದರೆ ಈ ಬಾಸ್ ಏಕೆ ಹೀಗಾಡುತ್ತಿದ್ದಾನೆ/ಳೆ ಎಂದು ಅನಿಸಿ ಬಿಡುತ್ತದೆ. ಬಾಸ್ ಹೇಳಿದ್ದಾರೆ ಅನ್ನುವ ಕಾರಣಕ್ಕೆ ಕೆಲಸ ಮಾಡುತಾರೆ.  ಆದರೆ ಆ ಕೆಲಸ ತುಂಬಾ ಚೆನ್ನಾಗಿ ಬರಬೇಕೆಂದು ಯಾವುದೇ ಆಸಕ್ತಿಯಿಂದ ಮಾಡುವುದಿಲ್ಲ. ಅದೇ ಬಾಸ್ ನಲ್ಲಿ ನಾಯಕತ್ವದ ಗುಣ ಇದ್ದರೆ ಅಂತಹ ಬಾಸ್ ಜೊತೆ ಕೆಲಸ ಮಾಡಲು ಅವನ/ಳ ಕೈ ಕೆಳಗಿನವರಿಗೆ ಇಷ್ಟವಾಗುತ್ತದೆ.  ಇದರಿಂದಾಗಿ ತಾವು ಮಾಡುವ ಕೆಲಸವನ್ನು ದಿ ಬೆಸ್ಟ್ ರೀತಿಯಲ್ಲಿ ಮಾಡಲು ಪ್ರಯತ್ನಿಸುತ್ತಾರೆ 


ಒಳ್ಳೆಯ ಬಾಸ್ ಅನಿಸಿಕೊಳ್ಳಲು ಈ ಕೆಳಗಿನ ಗುಣಗಳು ಅವರಲ್ಲಿದ್ದರೆ ಮಾತ್ರ ಸಾಧ್ಯ:

ನಾಯಕತ್ವ: ಒಬ್ಬ ಒಳ್ಳೆಯ ಬಾಸ್ ನಲ್ಲಿ ನಾಯಕತ್ವದ ಗುಣವಿರುತ್ತೆ. ತಮ್ಮ ಗುರಿಯನ್ನು ಮುಟ್ಟಲು ಏನು ಮಾಡಬೇಕೆಂದು ತನ್ನ ಕೈ ಕೆಳಗಿನವರಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಾರೆ.

ಭಯ: ಬಾಸ್ ನೋಡಿದ ತಕ್ಷಣ ಉದ್ಯೋಗಿ ಭಯ ಪಡುವಂತೆ ಇರಬಾರದು, ಅವನನ್ನು ನೋಡಿ ಗೌರವ ಕೊಡುವಂತೆ ಇರಬೇಕು, ಉದ್ಯೋಗಿಗಳು ಮತ್ತು ಬಾಸ್ ನ ಒಡನಾಟ ಚೆನ್ನಾಗಿದ್ದರೆ ಮಾತ್ರ ಆ ಬಾಸ್ ಗೆ ತನ್ನ ಕಂಪನಿಯನ್ನು ಪ್ರಗತಿಯ ಕಡೆಗೆ ನಡೆಸಿಕೊಂಡು ಹೋಗಲು ಸಾಧ್ಯ.

ಜ್ಞಾನ: ಬಾಸ್ ತನ್ನ ಕೆಳಗಿನವರಿಗೆ ಹಾಗೇ ಮಾಡಿ, ಹೀಗೆ ಮಾಡಿ ಎಂದು ಅದರ ಪ್ರತಿಫಲ ಬಗ್ಗೆ ಸರಿಯಾಗಿ ಯೋಚಿಸದೆ ಹೇಳಬಾರದು. ತಮ್ಮ ಗುರಿ ಮುಟ್ಟಲು ಏನು ಮಾಡಬೇಕೆಂಬ ಮುಂದಾಲೋಚನೆ ಇರಬೇಕು. ಸಾಕಷ್ಟು ಜ್ಞಾನ ಇರಬೇಕು.
ನಾನು ಅಥವಾ ನಾವು: ಬಾಸ್ ಆದವನು ಯಾವತ್ತು ನಾನು, ನನ್ನದು ಅಂತ ಆಲೋಚನೆ ಮಾಡದೆ ನಮ್ಮದು ಎಂದು ಮಾತನಾಡಬೇಕು. ಇದರಿಂದ ಉದ್ಯೋಗಿಗಳಲ್ಲಿ ನಮ್ಮದೇ ಕಂಪನಿಯೆಂಬ ಭಾವನೆ ಇರುತ್ತದೆ.

                                                                                          ಪರಶುರಾಮ

No comments: