karunada geleya

dsfdsf

16 Feb 2022

ಕನ್ನಡದ ನುಡಿಮುತ್ತುಗಳು ಹಾಗು ನೀತಿ ಮಾತುಗಳು.

 ೧. ನಮ್ಮನ್ನು ಅರ್ಥ ಮಾಡಿಕೊಳ್ಳಿ ಅಂಥ ಯಾರನ್ನು ಬೇಡಿಕೊಳ್ಳುವ ಅವಶ್ಯಕತೆ ಇಲ್ಲ!! ಅವರಿಗೆ ನಾವು ಬೇಕು ಅಂಥ ಅನಿಸಿದರೆ ಅವರೇ ನಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೆ.

೨. ಜೀವನದಲ್ಲಿ ಅರಿತು ಬಾಳುವುದಕ್ಕಿಂತ ಮರೆತು ಬಾಳುವುದನ್ನು ಕಲಿಯಬೇಕು ಯಾಕೆಂದರೆ ಇಲ್ಲಿ ಯಾರು ಯಾರಿಗೂ ಆಗಲ್ಲ.

೩. ನಮಗಾಗಿ ಮಾಡಿಕೊಂಡ ಕೆಲಸಗಳು ನಮ್ಮೊಂದಿಗೆ ಮುಗಿದು ಹೋಗಿಬಿಡುತ್ತವೆ, ಆದರೆ ಇತರರಿಗಾಗಿ ಮಾಡಿದ ಕೆಲಸಗಳು ನಮ್ಮ ನಂತರವೂ ಉಳಿದಿರುತ್ತವೆ.

೪. ನಗುತ್ತಾ ಮಾಡಿದ ಪಾಪಗಳನ್ನು ಅಳುತ್ತಾ ಅನುಭವಿಸಲೇಬೇಕು.
ಕಾಲ ತಪ್ಪದೇ ಸಮಾಧಾನ ನೀಡುತ್ತದೆ.

೫. ಈ ಜಗತ್ತಿನಲ್ಲಿ ಏನೇನೋ ನಂಬಿ ಮೋಸ ಹೋಗಿರಬಹುದು.... ಆದರೆ ಹೆತ್ತ ತಾಯಿ ಹಾಗೂ ಭೂಮಿ ತಾಯಿನ ನಂಬಿ ಮೋಸ ಹೋದವರು ಈ ಜಗತ್ತಿನಲ್ಲಿ ಯಾರು ಇಲ್ಲ....

೬. ನಾವು ಯಾವುದೇ ಸೇಡು ತೀರಿಸಿಕೊಳ್ಳುವ ಅವಶ್ಯಕತೆಯೇ ಇಲ್ಲ, ಕೇವಲ ಒಂದು ಹೆಜ್ಜೆ ಹಿಂದೆ ಇಟ್ಟು ಕಾದು ನೋಡಿ, ನಮ್ಮನ್ನು ನೋವಿನಿಂದ ನರಳುವಂತೆ ಮಾಡಿದವರು ಕ್ರಮೇಣ ತಮ್ಮನ್ನು ತಾವೇ ನೋವಿನಿಂದ ನರಳಿಸಿಕೊಳ್ಳುತ್ತಾರೆ.

೭. ನಮಗಾಗಿ ಯಾರಿಗೆ ಸಮಯವಿಲ್ಲವೋ ಅವರನ್ನು ತೊಂದರೆಗೊಳಿಸಬಾರದು, ಅವರು ಅವರದೇ ಪ್ರಪಂಚದಲ್ಲಿ ಕಾರ್ಯನಿರತರಾಗಿರುತ್ತಾರೆ ಮತ್ತು ಆ ಪ್ರಪಂಚದಲ್ಲಿ ಅವರಿಗೆ ನಮ್ಮ ಅಗತ್ಯವಿರುವುದಿಲ್ಲ.

೮. ನೀವು ಪಡೆದುಕೊಳ್ಳಲಾಗದ ಎಲ್ಲ ವಸ್ತುಗಳನ್ನು ನೀವು ನಿಮ್ಮ ಮಕ್ಕಳಿಗೆ ಕೊಡಿಸುವ ಬದಲು, ನೀವು ಕಲಿಯಲಾಗದ ಎಲ್ಲ ವಿಷಯಗಳನ್ನು ಅವರಿಗೆ ಕಲಿಸಿ ವಸ್ತುಗಳು ಅಳಿದು ಹೋಗುತ್ತವೆ ಆದರೆ ಜ್ಞಾನ ಶಾಶ್ವತವಾಗಿರುತ್ತದೆ.

೯. ಒಮ್ಮೆ ಕ್ಷಮಿಸಿ ಬಿಡು, ಮತ್ತೊಮ್ಮೆ ಕ್ಷಮಿಸಿ ನೋಡು, ಮತ್ತೆ ಮರುಕಳಿಸಿದರೆ, ಅದು ನಿನಗೆ ಆಗುತ್ತಿರುವ ಮೊಸವೆಂದು ತಿಳಿದು ದೂರ ಸರಿದು ಬಿಡು.

೧೦. ಬೇರೆಯವರ ಸಂತೋಷದಲ್ಲಿ ಭಾಗಿಯಾಗುವುದಕ್ಕಿಂತ ಅದಕ್ಕೆ ಕಾರಣವೇ ನಾವಾಗಬೇಕು. ಬೇರೆಯವರ ದುಃಖಕ್ಕೆ ಕಾರಣವಾಗುವುದಕ್ಕಿಂತ ಅದರಲ್ಲಿ ಭಾಗಿಯಾಗಬೇಕು, ಇವೆರಡರಲ್ಲಿ ಸಿಗುವ ಸಂತಸ, ಸಮಾಧಾನ ಅಷ್ಟಿಷ್ಟಲ್ಲ.

೧೧. ಇದುವರೆಗಿನ ಜೀವನವನ್ನೊಮ್ಮೆ ಹಿಂದಕ್ಕೆ ತಿರುಗಿ ನೋಡಿದರೆ ಅನುಭವ ಸಿಗುತ್ತೆ, ಮುಂದಕ್ಕೆ ನೋಡಿದರೆ ಭವಿಷ್ಯ ಸಿಗುತ್ತೆ, ಸುತ್ತಲೂ ನೋಡಿದರೆ ಸತ್ಯ ಅರಿವಿಗೆ ಬರುತ್ತದೆ, ನಮ್ಮೊಳಗೆ ನಾವೇ ನೋಡಿಕೊಂಡರೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹೆಜ್ಜೆಗಳು ದಾರಿ ತೋರಿಸಿದರೆ ಕಷ್ಟಗಳು ಗುರಿ ತಲುಪಿಸುತ್ತವೆ.

೧೨. ಸೋಲಿಗೆ ಚಿಂತಿಸಬೇಕಾಗಿಲ್ಲ ನಿಜವಾಗಿಯೂ ನಾವು ಯೋಚಿಸಬೇಕಾದ್ದು ನಾವು ಪ್ರಯತ್ನಿಸದೆ ಕಳೆದುಕೊಂಡ ಅವಕಾಶಗಳ ಬಗ್ಗೆ. ಸತತ ಪ್ರಯತ್ನ ಜಾರಿಯಲ್ಲಿರಲಿ.

೧೩. ಸಮಸ್ಯೆ ಹಿಂದೆ ಉತ್ತರ.
ದುಃಖದ ಹಿಂದೆ ಸುಖ.
ಪ್ರತಿ ಕಷ್ಟದ ಹಿಂದೆ ಒಂದು ಅವಕಾಶ ಯಾವಾಗಲೂ ಇರುತ್ತದೆ. ಕಷ್ಟಗಳನ್ನು ಮೌನವಾಗಿ ದಾಟಬೇಕು. ಪರಿಶ್ರಮ ಸದ್ದಿಲ್ಲದೆ ಸಾಗುತ್ತಿರಬೇಕು. ಆಗ ಸಿಗುವ ಯಶಸ್ಸಿನ ಫಲ ಜಗತ್ತಿಗೆ ಕೇಳಿಸುವಷ್ಟು ಜೋರಾಗಿರುತ್ತದೆ.

೧೩. ಕನಸುಗಳಿಗೆ ಸ್ವತಃ ನನಸಾಗುವ ಶಕ್ತಿ ಇರುವುದಿಲ್ಲ, ಅವುಗಳನ್ನು ನನಸಾಗಿ ಪರಿವರ್ತಿಸಲು ಸಾಧ್ಯವಾಗುವುದು ನಾವು ಕೆಲಸದಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಂಡು ಬೆನ್ನತ್ತಿದಾಗಲೇ ಸಾಕಾರಗೊಳ್ಳುತ್ತವೆ.

೧೪. ಕೋಟಿ ಇದ್ದರೇನು? ಮೌಲ್ಯವಿಲ್ಲದ ಜೀವನ ನಿರರ್ಥಕ, ಜೀವನವೆಂಬುದು ಕೇವಲ ಹಣದಿಂದ ಸಾಗುವ ದೋಣಿಯಲ್ಲ ಅದಕ್ಕೆ ಮಾನವೀಯತೆ ಎಂಬ ನಾವಿಕ ಮತ್ತು ದಾನ-ಧರ್ಮ ಎಂಬ ಹುಟ್ಟು ಅವಶ್ಯಕ.

೧೫. ಎಲ್ಲವೂ ಹಣೆಬರಹದಲ್ಲಿ ಇದ್ರೆ ಸಿಗುತ್ತೆ ಅಂಥ ಸುಮ್ಮನೆ ಕುಳಿತುಕೊಳ್ಳಬಾರದು, ಹಣೆಬರಹದಲ್ಲಿ ಸಿಗೋದು ಕೇವಲ ೧% ಆದರೆ ನಮ್ಮ ಪರಿಶ್ರಮದಲ್ಲಿ ಸಿಗೋದು ೯೯% ಆದ್ದರಿಂದ ಸದಾ ಪರಿಶ್ರಮದಿಂದ ಕ್ರಿಯಾಶೀಲರಾಗಬೇಕು.

No comments: