karunada geleya

dsfdsf
Showing posts with label ನನ್ನ ವಾಟ್ಸಾಪ್ ಗೆ ಬಂದ ಕಥೆಗಳು. Show all posts
Showing posts with label ನನ್ನ ವಾಟ್ಸಾಪ್ ಗೆ ಬಂದ ಕಥೆಗಳು. Show all posts

5 Nov 2017

"ನಾನು ಎಂದೂ ಮರೆಯಲಾರೆ." ಎಂದು ಹೇಳಿ ಪಕ್ಷಿ ಹಾರಿ ಹೋಯಿತು

ಒಂದು ಜಾಲಿಯ ಮರ.
ಅದರ ಮೈತುಂಬ ಮುಳ್ಳು. ಯಾರೂ ಅದರ ಬಳಿ ಸುಳಿಯುತ್ತಿರಲಿಲ್ಲ.
ಒಂಟಿ ಜೀವನ ಮರಕ್ಕೆ ಬೇಸರವಾಯಿತು.

ಯಾರಾದರೂ ಅತಿಥಿಗಳು ಬರಬಹುದು ಎಂದು ದಾರಿ ಕಾಯುತ್ತಿತ್ತು.
ಒಂದು ದಿನ ರಾತ್ರಿ ಒಂದು ಪಕ್ಷಿಯು ಆ ಮರದ ಮೇಲೆ ಬಂದು ಕುಳಿತಿತು.
ಮರಕ್ಕೆ ಹಿಡಿಸಲಾರದಷ್ಟು ಸಂತಸವಾಯಿತು 'ಅತಿಥಿ ದೇವೋಭವ' ಎಂದು ಈ ಪಕ್ಷಿಯನ್ನು ಗೌರವಾದರಗಳಿಂದ ಉಪಚರಿಸಿ ಆಶ್ರಯವನ್ನಿತ್ತಿತು. ಪಕ್ಷಿಯು ಸಂತಸದಿಂದ ರಾತ್ರಿಯನ್ನು ಕಳೆದು ಬೆಳಗಾಗುತ್ತಲೇ ಹೊರಟು ನಿಂತಿತು.
ಮಿತ್ರನೇ, ನೀನು ನನ್ನ ಕೂಡ ಇಲ್ಲಿಯೇ ಇದ್ದು ಬಿಡು ಎಂದು ಮರವು ಪಕ್ಷಿಗೆ ವಿನಂತಿಸಿತು.

ಪಕ್ಷಿ ಹೇಳಿತು - "ದೇವರು ನನಗೆ ಹಾರಲು ಪಕ್ಕಗಳನ್ನು ಕೊಟ್ಟಿದ್ದಾನೆ.
ನಿನಗೆ ಸ್ಥಿರವಾಗಿರಲು ಬೇರನ್ನು ಕೊಟ್ಟಿದ್ದಾನೆ.
ನಾನು ಹಾರುತ್ತಿರಲೇಬೇಕು. ನೀನು ಒಂದು ಕಡೆ ಸ್ಥಿರವಾಗಿರಲೇಬೇಕು.
ಅದುವೇ ಜೀವನದ ರೀತಿ. ಮತ್ತೆ ಎಂದಾದರೂ ಸಮಯ ಸಿಕ್ಕಾಗ ನಾನು ಬರುತ್ತೇನೆ.
ನಿನ್ನ ಉಪಕಾರವನ್ನು ನಾನು ಎಂದೂ ಮರೆಯಲಾರೆ." ಎಂದು ಹೇಳಿ ಪಕ್ಷಿ ಹಾರಿ ಹೋಯಿತು.

ಮರವು ಇನ್ನೂ ಮಿತ್ರನ ದಾರಿ ಕಾಯುತ್ತಲಿದೆ.
ನಾವು ಕೂಡಿದಾಗ ಸುಖಿಸಬೇಕು.
ಅಗಲಿದಾಗ ಕೂಡಿದ ಸುಖವನ್ನು ಸ್ಮರಿಸುತ್ತ ಸಂತಸದಿಂದಿರಬೇಕು.

ಶ್ರೀ ಸಿದ್ಧೇಶ್ವರ ಸ್ವಾಮೀಜಿ

ಕೊಂಚ ಆಲೋಚಿಸಿ ನೋಡಿ

💚ಕೊಂಚ ಆಲೋಚಿಸಿ ನೋಡಿ💚

"ಕೆಲವರು ಜಗಳವಾದ ತಕ್ಷಣ ಕ್ಷಮೆಯನ್ನು ಕೇಳುತ್ತಾರೆ
ಇದರರ್ಥ
ಅವರಿಗೆ ಬೇರೆಯಾರೂ ಸಿಗಲ್ಲ, ಅಥವಾ ತಪ್ಪು ಅವರದ್ದೇ
ಅಂತರ್ಥವಲ್ಲ ಬದಲಾಗಿ ಅವರು ಸಂಭಂದಕ್ಕೆ ಹೆಚ್ಚು ಬೆಲೆ
ಕೊಡುತ್ತಾರೆ ಅಂತರ್ಥ"

💚ಕೊಂಚ ಆಲೋಚಿಸಿ ನೋಡಿ💚

"ಕೆಲವರು ನಿಮಗೆ ಸಹಾಯಮಾಡಲು ಕರೆಯದೆ ಓಡಿಬಂದು
ಸಹಾಯ ಮಾಡುತ್ತಾರೆಂದರೆ ಇದರರ್ಥ ಅವರಿಗೆ ಬೇರೆ
ಕೆಲಸವಿಲ್ಲ ಅಂತರ್ಥವಲ್ಲ.
ಅವರಿಗೆ ನೋವಿನ ಬೆಲೆ, ಮಾನವೀಯತೆಯ ಬೆಲೆ ತಿಳಿದಿರುತ್ತೆ
ಅಂತರ್ಥ"

 💚 ಕೊಂಚ ಆಲೋಚಿಸಿ ನೋಡಿ💚

"ನಿಮ್ಮಲ್ಲಿ ಕೆಲವರು ಪಾರ್ಟಿ ಕೊಟ್ಟು ಬಿಲ್ ಅನ್ನು ಅವರೇ
ಯಾವಾಗಲೂ ಕೊಡುತ್ತಾರೆ ಅಂದರೆ ಅವರಲ್ಲಿ
ಬೇಕಾದಷ್ಟು ಹಣ ಇದೆ ಅಂತ ಅರ್ಥವಲ್ಲ ಬದಲಾಗಿ
ಸ್ನೇಹಕಿಂತ / ಸಂಭಂಧಕ್ಕಿಂತ
ಹಣ ದೊಡ್ಡದಲ್ಲ ಅಂತ ಅವರ ಮನಸಲ್ಲಿರುತ್ತೆ"

💚ಕೊಂಚ ಆಲೋಚಿಸಿ ನೋಡಿ💚

"ಕೆಲವರು ಯಾವಾಗಲು ನಿಮಗೆ ಮೆಸೇಜ್
ಮಾಡುತ್ತಾರೆಂದರೆ
ಕಾಲ್ ಮಾಡುತ್ತಿರುತ್ತಾರೆ ಅಂದರೆ ಅವರು
ಯಾವಾಗಲು ಫ್ರೀ ಇರುತ್ತಾರೆ ಅಂತರ್ಥವಲ್ಲ ಬದಲಾಗಿ
ಅವರು ಎಷ್ಟೇ ಬ್ಯುಸಿ ಇದ್ದರು ತಮ್ಮ ಹೃದಯದಲ್ಲಿದ್ದವರಿ
ಗೆ ಸಮಯವನ್ನು ನೀಡಲು ಬಯಸುತ್ತಾರೆ ಅಂತರ್ಥ"

💚 ಕೊಂಚ ಆಲೋಚಿಸಿ ನೋಡಿ💚

"*ಯಾರೋ ನಿಮಗಾಗಿ ಎಷ್ಟು ಹೊತ್ತಾದರೂ ಕಾಯಲು
ಸಿದ್ದರಿದ್ದಾರೆ ಎಂತಾದರೆ
ಅವರಿಗೆ ಮಾಡಲು ಬೇರೆ ಏನೂ ಕೆಲಸವಿಲ್ಲ ಎಂದರ್ಥವಲ್ಲ.
ಅವರ ದೃಷ್ಟಿಯಲ್ಲಿ ನಿಮಗಿಂತ
ಮಹತ್ವದ್ದು ಬೇರೇನೂ ಇಲ್ಲ ಎಂದರ್ಥ"

ಕರುನಾಡ ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ರಜಾದಿನವೆಂದು ಪಟ್ಟಿ ಮಾಡಲಾಗಿದೆ ಮತ್ತು ವಿಶ್ವದಾದ್ಯಂತ ಕನ್ನಡಿಗರು ಇದನ್ನು ಆಚರಿಸುತ್ತಾರೆ. ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.

✍ ಇತಿಹಾಸ
ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾವ್, ಕರ್ನಾಟಕ ಏಕೀಕರಣ ಚಳುವಳಿಯನ್ನು ೧೯೦೫ ರಲ್ಲಿ ಪ್ರಾರಂಭಿಸಿದರು. ೧೯೫೦ರಲ್ಲಿ, ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪು ಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು.೧೯೫೬ ರ ನವೆಂಬರ್ ೧ ರಂದು, ಮದ್ರಾಸ, ಮುಂಬಯಿ, ಹೈದರಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು ಹಾಗೂ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರುಎಂಬುದಾಗಿ ಹೊಸದಾಗಿ ರೂಪು ಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.ಹೊಸದಾಗಿ ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ ಹೊಸ ಘಟಕದ ಕೋರ್ ರೂಪುಗೊಂಡು ಮುಂಚಿನ ರಾಜ್ಯದ ಹೆಸರು ಇರಲೆಂದು "ಮೈಸೂರು" ಹೆಸರನ್ನು ಉಳಿಸಿಕೊಂಡರು. ಆದರೆ ಉತ್ತರ ಕರ್ನಾಟಕದ ಜನರ ತರ್ಕ ಮಾನ್ಯತೆಗಾಗಿ, ರಾಜ್ಯದ ಹೆಸರು ನವೆಂಬರ್ ೧, ೧೯೭೩ ರಂದು "ಕರ್ನಾಟಕ" ಎಂದು ಬದಲಾಯಿತು.ಈ ಸಂದರ್ಭದಲ್ಲಿ ದೇವರಾಜ ಅರಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕ ಏಕೀಕರಣದ ಮನ್ನಣೆ ಇತರ ವ್ಯಕ್ತಿಗಳಿಗೂ ಸೇರುತ್ತದೆ. ಅವರೆಂದರೆ ಅನಕೃ, ಕೆ. ಶಿವರಾಮ್ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಎ.ಎನ್. ಕೃಷ್ಣರಾವ್ ಮತ್ತು ಬಿ.ಎಂ. ಶ್ರೀಕಂಟಯ್ಯ

✍ ಕರ್ನಾಟಕ ಒಂದುಗೂಡಿದರ ಸವಿ ನೆನಪಿಗಾಗಿ ಪ್ರತಿ ವರುಷ ನವೆಂಬರ್-೧ ರಂದು ಆಚರಿಸುವ ಹಬ್ಬವೇ ರಾಜ್ಯೋತ್ಸವ. ೧೯೫೬ ರಲ್ಲಿ ಕನ್ನಡ ಪ್ರದೇಶಗಳು, "ಮೈಸೂರ ರಾಜ್ಯ" ಎನ್ನುವ ಹೆಸರಿನಲ್ಲಿ ಒಂದುಗೂಡಿದವು. ೧೯೭೩ ರಲ್ಲಿ "ಕರ್ನಾಟಕ ರಾಜ್ಯ" ಅಂತಾ ಮರು ಹೆಸರಿಸಲಾಯಿತು.ಹಾಗಾಗಿ ಭಾಷಾ ಆಧಾರದ ಮೇಲೆ ನವೆಂಬರ್ ೧,೧೯೭೩ ರಂದು ಕನ್ನಡ ನಾಡಿನ ಸವಿ ನೆನಪಿಗಾಗಿ ನಾಡ ಹಬ್ಬವಾಗಿ ಆಚರಿಸುತ್ತಾ ಬರುತಿದ್ದಾರೆ.

🌹 ಆಚರಣೆಗಳು

ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯಾದ್ಯ೦ತ ಮಹದಾನ೦ದ ಮತ್ತು ಚಟುವಟಿಕೆಯಿಂದ ಆಚರಿಸಲಾಗುತ್ತದೆ. ಕೆಂಪು ಮತ್ತು ಹಳದಿ ಕನ್ನಡ ಧ್ವಜಗಳು ರಾಜ್ಯದ ಎಲ್ಲೆಡೆ ಹಾರಿಸಲ್ಪಡುತ್ತವೆ. ಕನ್ನಡ ನಾಡಗೀತೆ ("ಜಯ ಭಾರತ ಜನನಿಯ ತನುಜಾತೆ")ಯನ್ನು ಹಾಡಲಾಗು ತ್ತದೆ. ಸರ್ಕಾರಿ ಕಚೇರಿ ಮತ್ತು ಹಲವಾರು ಪ್ರಮುಖ ಪ್ರದೇಶಗಳಲ್ಲಿ ವಾಹನಗಳ ಮೇಲೆ ಭುವನೇಶ್ವರಿ ಚಿತ್ರವನ್ನಿಟ್ಟು ಮೆರವಣಿಗೆ ನಡೆಸಲಾಗುತ್ತದೆ.ರಾಜ್ಯೋತ್ಸವವನ್ನು ಕರ್ನಾಟಕದಲ್ಲಿರುವ ಬಹುತೇಕ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಧರ್ಮಬೇಧವಿಲ್ಲದೆ ಆಚರಿಸುತ್ತಾರೆ ಹಾಗೂ ಸರ್ಕಾರ ಮೆರವಣಿಗೆ ಆಟೋ ರಿಕ್ಷಾಗಳು ಮತ್ತು ಇತರೆ ವಾಹನಗಳು ಕನ್ನಡ ಧ್ವಜದ ಬಣ್ಣಗಳಾದ ಕೆಂಪು ಮತ್ತು ಹಳದಿ ವರ್ಣಗಳ ಬಾವುಟ ದೊಂದಿಗೆ ಅಲಂಕರಿಸಲಾಗಿರುತ್ತವೆ. ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವದ ದಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ಪ್ರಕಟ ಪಡಿಸಲಾಗುತ್ತದೆ.ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಸರ್ಕಾರದವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ ಹಮ್ಮಿಕೊಳ್ಳಲಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಸಾಧಕರಿಗೆ ಈ ಪ್ರಶಸ್ತಿಯನ್ನು ವಿತರಿಸುತ್ತಾರೆ.ಕರ್ನಾಟಕದಲ್ಲಿನ ಇನ್ನಿತರ ಪ್ರದೇಶಗಳಾದ ಮುಂಬಯಿ, ದೆಹಲಿ ಮುಂತಾದ ಕಡೆಯು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತದೆ. ಇದಲ್ಲದೆ ಗುರಗಾಂವ್ ಮತ್ತು ಚೆನೈ, ಸಾಗರೋತ್ತರದಲ್ಲಿ ಕನ್ನಡ ಸಂಸ್ಥೆ, ಅಮೇರಿಕಾದ, ಸಿಂಗಾಪುರ್, ದುಬೈ , ಮಸ್ಕಟ್, ದಕ್ಷಿಣ ಕೊರಿಯಾ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಮೊದಲಾದ ಕಡೆಗಳಲ್ಲಿ ನೆಲೆಸಿರುವ ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಾರೆ.

✍🙏 ಆಚರಣೆಯ ತಿಂಗಳು

ನವೆಂಬರ್ ೧ ರಂದು ಅಧಿಕೃತವಾಗಿ ಕನ್ನಡ ರಾಜ್ಯೋತ್ಸವವು ಆಚರಣೆಯಾದರೂ, ನವೆಂಬರ್ ತಿಂಗಳ ಮೊದಲ ದಿನ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ನವೆಂಬರ್ ೧ ಸಾರ್ವಜನಿಕ ರಜೆ ಇರುತ್ತದೆ. ಈ ದಿನಗಳಲ್ಲಿ ಕನ್ನಡ ಬಾವುಟಸರ್ಕಾರದ ಪ್ರಮುಖ ಕಛೇರಿಯ ಮೇಲೆ ಎಲ್ಲೆಲ್ಲಿಯೂ ಹಾರಾಡುತ್ತಿರುತ್ತದೆ.

ಅಂದಿನಿಂದ ಇಂದಿನವರೆಗೂ ಕನ್ನಡಿಗರು ಕನ್ನಡನಾಡಿನ ಸಂಸ್ಕೃತಿ ಸಂಪ್ರದಾಯಗಳ ಉಳಿವಿಗಾಗಿ ಶ್ರಮಿಸುತ್ತಾ ಬರುತಿದ್ದಾರೆ ಹಾಗೆಯೆ ನಾವು ಕನ್ನಡ ನಾಡುನುಡಿಗಾಗಿ ತ್ಯಾಗ,ತಾಳ್ಮೆ ,ಪ್ರೀತಿ ,ಸಹನೆಯ ಮನೋಭಾವಗಳನ್ನೂ ಬೆಳೆಸಿ ಉಳಿಸಿಕೊಂಡೂ ಮುಂದಿನ ಪ್ರಜೆಗಳಿಗೆ ಮಾದರಿಯಾಗಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ. ಬ್ರಿಟೀಷ ಆಡಳಿತದಲ್ಲಿ ೧೯ ಜಿಲ್ಲೆಗಳನ್ನು ಹೊಂದಿದ್ದ ಕರ್ನಾಟಕ,ನಂತರ ಸುಲಭ ಆಡಳಿತಕ್ಕಾಗಿ ಕರ್ನಾಟಕ ಹೊಸ ಜಿಲ್ಲೆಗಳನ್ನು ರಚಿಸಿಕೊಂಡಿತು. ಬೆಂಗಳೂರು ನಗರ ಬೆಳೆದಂತೆ ೧೯೮೩ ರಲ್ಲಿ ನಗರ ಮತ್ತು ಗ್ರಾಮಾಂತರ ಜಿಲ್ಲೆ ಎಂದು ಪ್ರತ್ಯೆಕಿಸಲಾಯಿತು ಕರ್ನಾಟಕದ ಜನತೆಯ ಬೇಡಿಕೆಯಿಂದಾಗಿ ೧೯೯೭ ರಲ್ಲಿ ಜೆ.ಎಚ್ .ಪಟೇಲರು ೭ ಹೊಸ ಜಿಲ್ಲೆಗಳನ್ನೂ ರಚಿಸಿದರು ದಾವಣಗೆರೆ,ಚಾಮರಾಜನಗರ ,ಬಾಗಲಕೋಟೆ ,ಹಾವೇರಿ ಉಡುಪಿ ,ಕೊಪ್ಪಳ ,ಗದಗ ಇವು ಆಗ ಅಸ್ತಿತ್ವಕ್ಕೆ ಬಂದ ಜಿಲ್ಲೆಗಳು ೨೦೦೭ರಲ್ಲಿ ಎಚ್ .ಡಿ.ಕುಮಾರಸ್ವಾಮಿಯವರು ರಾಮನಗರವನ್ನು ಬೆಂಗಳುರ ಗ್ರಾಮಾಂತರ ಜಿಲ್ಲೆಯಿಂದ ,ಚಿಕ್ಕ ಬಳ್ಳಾಪುರವನ್ನು ಕೋಲಾರದಿಂದ ಬೇರ್ಪಡಿಸಿ ಎರಡು ಹೊಸ ಜಿಲ್ಲೆಗಳನ್ನು ರಚಿಸಿದರು ಈಗ ಕರ್ನಾಟಕದಲ್ಲಿ ೩೦ ಜಿಲ್ಲೆಗಳು .ಅಷ್ಟೇ ಅಲ್ಲ ಕನ್ನಡ ನಾಡಿನ ಕಲೆ,ಸಂಸ್ಕೃತಿ ಉಡುಗೆ ತೊಡುಗೆಗೆ ವಿದೇಶಿಗರು ಮಾರು ಹೋಗಿದ್ದಾರೆ ಇಂತಹ ನಾಡಿನಲ್ಲಿ ಬಾಳುತ್ತಿರುವ ನಾವುಗಳೇ ದನ್ಯರು ಅಲ್ಲದೇ ಕರ್ನಾಟಕದಲ್ಲಿ ಅಪಾರವಾದ ಬೆಲೆಬಾಳುವ ಖನಿಜ ಸಂಪತ್ತು ಇದ್ದು ರಾಜಕೀಯದ ಪ್ರಭಾವಿ ಜನ ಹಾಳು ಮಾಡದಂತೆ ಕಾಪಾಡಬೇಕಿದೆ ಉಳಿಸಲು ಕರ್ನಾಟಕದ ಜನತೆ ಕೈ ಕಟ್ಟಿ ನಿಲ್ಲಬೇಕಿದೆ .ಹಾಗೆಯೆ ನಾವೆಲ್ಲ ಕನ್ನಡ ಮಾತೆಯ ಮಡಿಲಲ್ಲಿ ಕನ್ನಡಿಗರಾಗಿ ಬಾಳೋಣ.

*ಉಸಿರಾಗಲಿ ಕನ್ನಡ, ಹಸಿರಾಗಲಿ ಕನ್ನಡ.*

ಸತ್ಯವೇ ಭಗವಂತನೆಂಬ ಪುಟ್ಟಗೌರಿಯ ಕ

ಸತ್ಯವೇ ಭಗವಂತನೆಂಬ ಪುಟ್ಟಗೌರಿಯ ಕಥೆಯಿದು-

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊಳಿರುವ
ಸೀರ್ಯಲ್ ನೋಡೋ ಮಹಿಳೆಯ
ಪರಿಯನೆಂತು ಪೇಳ್ವೆನು

ಮಳೆಯ ಊರಿನ ಮನೆಯ ಒಳಗೆ
ಕೆಲಸ ಮುಗಿಸಿ ಕುಳಿತ ಮಹಿಳೆಯು
ಧಾರಾವಾಹಿಗಳೆಲ್ಲವನ್ನೂ
ಬಳಿಗೆ ಕರೆದಳು ಹರುಷದಿ

ಲಕ್ಷ್ಮಿ ಬಾರೆ ರಾಧ ಬಾರೆ
ಅಶ್ವಿನೀ ನಕ್ಷತ್ರ ಬಾರೆ
ಪುಟ್ಟ ಗೌರೀ ನೀನು ಬಾರೆ
ಎಂದು ಮಹಿಳೆಯು ಕರೆದಳು

ಆಂಟಿ ಕರೆದಾ ದನಿಯ ಕೇಳಿ
ಎಲ್ಲರೂ ಅಲ್ ಬಂದು ನಿಂತು
ಚೆಲ್ಲಿ ಸೂಸಿ ಕಣ್ಣೀರ್ಗರೆಯಲು
ಅಲ್ಲಿ ತುಂಬಿತು ಬಿಂದಿಗೆ

IIಸತ್ಯವೇ ಭಗವಂತನೆಂಬ ಪುಟ್ಟಗೌರಿಯ ಕಥೆಯಿದುII

ಹಬ್ಬಿದಾ ಮಲೆ ಮಧ್ಯದೊಳಗೆ
ಗ್ರಾಫಿಕ್ಸೈತಾನೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು

ಸಿಡಿದು ರೋಷದಿ ಮೊರೆಯುತಾ ಹುಲಿ
ಗುಡುಗುಡಿಸಿ ಭೋರಿಡುತ ಚಂಗನೆ
ದುಡುಕಲೆಗರಿದ ರಭಸಕಂಜಿ
ಓಡಿ ಹೋದವು ಉಳಿದವು

ಪುಟ್ಟಗೌರಿ ಎಂಬ ಹುಡುಗಿ
ತನ್ನ ಗಂಡನ ನೆನೆದುಕೊಂಡು
ಮತ್ತೆ ಸುಖವಾಗಿರುವೆನೆನುತಾ
ಚೆಂದದಿ ತಾ ಬರುತಿರೆ

ಇಂದು ಎನಗಾಹಾರ ಸಿಕ್ಕಿತು
ಎಂದು ಬೇಗನೆ ಗ್ರಾಫಿಕ್ಸ್ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು

ಮೇಲೆ ಬಿದ್ದು ನಿನ್ನನೀಗಲೇ
ಬಿಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಗ್ರಾಫಿಕ್ಸ್ ವ್ಯಾಘ್ರನು ಕೂಗಲು

ಒಂದು ಬಿನ್ನಹ ಹುಲಿಯೇ ಕೇಳು
ಮಹೆಶನಿರುವನು ಮನೆಯ ಒಳಗೆ
ಒಂದು ನಿಮಿಷದಿ ಮುಖವ ತೋರಿಸಿ
ಬಂದು ಸೇರುವೆನಿಲ್ಲಿಗೆ

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೇ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯ ನುಡಿಯುವೆಯೆಂದಿತು

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚಳಾ ಅಜ್ಯಮ್ಮನು

IIಸತ್ಯವೇ ಭಗವಂತನೆಂಬ ಪುಟ್ಟಗೌರಿಯ ಕತೆಯಿದುII

ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆ ಕೊಟ್ಟು
ಮಹೆಶ ನಿನ್ನನು ನೋಡಿ ಪೋಗುವೆನೆಂದು
ಬಂದೆನು ದೊಡ್ಡಿಗೆ

ಗೌರಿ ನೀನು ಸಾಯಲೇಕೆ
ನನ್ನ ತಬ್ಬಲಿ ಮಾಡಲೇಕೆ
ಸುಮ್ಮನಿಲ್ಲಿಯೆ ನಿಲ್ಲೆನುತ್ತ
ಮಹೆಶ ಗೌರಿಗೆ ಹೇಳಲು

ಕೊಟ್ಟ ಭಾಷೆಗೆ ತಪ್ಪಲಾರೆನು
ಕೆಟ್ಟ ಯೋಚನೆ ಮಾಡಲಾರೆನು
ನಿಷ್ಠೆಯಿಂದಲಿ ಪೋಪೆನಲ್ಲಿಗೆ
ಕಟ್ಟಕಡೆಗಿದು ಖಂಡಿತ

ಅಮ್ಮಗಳಿರ ಅಕ್ಕಗಳಿರ
ಎನ್ನ ತಾಯೊಡಹುಟ್ಟಗಳಿರ
ಮಹೆಶ ನಿಮ್ಮವನೆಂದು ಕಾಣಿರಿ
ಮುಂದೆ ಹಿಮನಿಗೆ ಗಂಡನು

ಕುಡಿದು ಬಂದರೆ ಬಯ್ಯಬೇಡಿ.
ಹೊರಗೆ ಹೋದರೆ ಹೊಡೆಯಬೇಡಿ.
ಮಹೆಶ ನಿಮ್ಮವನೆಂದು ಕಾಣಿರಿ
ಮುಂದೆ ಹಿಮನಿಗೆ ಗಂಡನು

ತಬ್ಬಲಿಯು ನೀನಾದೆ ಮಹೆಶಾ
ಹೆಬ್ಬುಲಿಯ ಬಾಯನ್ನು ಹೋಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಳು ಗಂಡನಾ

IIಸತ್ಯವೇ ಭಗವಂತನೆಂಬ ಪುಟ್ಟಗೌರಿಯ ಕತೆಯಿದುII

ಗೌರಿ ಗಂಡನ ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿನಿಂತು
ತವಕದಲಿ ಹುಲಿಗೆಂದಳು

ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಬಿಸಿರಕ್ತವಿದೆಕೋ
ಗ್ರಾಫಿಕ್ಸ್ ವ್ಯಾಗ್ರನೆ ನಿನಿದೆಲ್ಲವನುಂಡು
ಸಂತಸದಿಂದಿರು

ಪುಟ್ಟ ಗೌರಿಯ ಮಾತ ಕೇಳಿ
ಕಣ್ಣ ನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಧಾರವಾಹಿಯೆ ಮುಗಿವುದು.

ನಿರ್ಮಾಪಕನಿಗೆ ದೇವ್ರು ನೀನು 
ನಿನ್ನ ಕೊಂದರೆ ಅವ ಏನ ಪಡೆವನು
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು

ಯಾವಾಗಲೂ ಕೆಳಗಿನ ಬ್ರಾಂಡ್ ವಸ್ತುಗಳನ್ನೇ ಬಳಸಿ

ಯಾರೋ ಚಾಣಕ್ಯನನ್ನು ಕೇಳಿದರಂತೆ.

1. ವಿಷ ಎಂದರೇನು?
ಆತ ಬಹು ಸುಂದರ ಉತ್ತರ ನೀಡಿದ - ನಮ್ಮ ಅವಶ್ಯಕತೆಗಿಂತ ಏನು ಹೆಚ್ಚಾದರೂ ಅದು ವಿಷ. ಅದು ಅಧಿಕಾರವಿರಬಹುದು, ಐಶ್ವರ್ಯ, ಹಸಿವು, ದುರಾಸೆ, ಸೋಮಾರಿತನವಿರಬಹುದು, ಪ್ರೇಮ, ಆಕಾಂಕ್ಷೆ, ದ್ವೇಷ ಅಥವಾ ಯಾವುದಾದರೂ ಇರಬಹುದು
 2. ಭಯ ಎಂದರೇನು?
ಅನಿಶ್ಚಿತತೆಯನ್ನು ಒಪ್ಪದಿರುವುದು. ಆ ಅನಿಶ್ಚಿತತೆಯನ್ನು ನಾವು ಒಪ್ಪಿಕೊಂಡರೆ ಅದು ಸಾಹಸ ಆಗುತ್ತದೆ..!

3. ಅಸೂಯೆ ಎಂದರೇನು?
ಇನ್ನೊಬ್ಬರಲ್ಲಿನ ಒಳ್ಳೆಯತನವನ್ನು ಒಪ್ಪದಿರುವುದು. ಆ ಒಳ್ಳೆಯತನವನ್ನು ಒಪ್ಪಿಕೊಂಡರೆ ಅದು ಪ್ರೇರಣೆ ಆಗುತ್ತದೆ.

4. ಕೋಪ ಎಂದರೇನು?
ನಮ್ಮ ನಿಯಂತ್ರಣದಾಚೆಯ ವಿಷಯಗಳನ್ನು ಒಪ್ಪದಿರುವುದು. ಅವನ್ನು ಒಪ್ಪಿಕೊಂಡರೆ ಅದು ಸಹಿಷ್ಣುತೆ ಆಗುತ್ತದೆ.

5. ದ್ವೇಷ ಎಂದರೇನು?
ಒಬ್ಬ ಮನುಷ್ಯನನ್ನು ಅವನಿರುವಂತೆಯೇ ಒಪ್ಪದಿರುವುದು . ಆ ಮನುಷ್ಯನನ್ನು ಬೇಷರತ್ತಾಗಿ ಒಪ್ಪಿಕೊಂಡರೆ ಅದು ಪ್ರೀತಿ ಆಗುತ್ತದೆ.

ಎಲ್ಲವೂ ಒಪ್ಪಿಕೊಳ್ಳುವಿಕೆಗೆ ಸಂಬಂಧಿಸಿದ್ದು. ವಿರೋಧಿಸುವಿಕೆಯು ಒತ್ತಡವನ್ನು ಸೃಷ್ಟಿಸುತ್ತದೆ. ಒಪ್ಪಿಕೊಳ್ಳುವಿಕೆಯು ಒತ್ತಡವನ್ನು ದೂರ ಮಾಡುತ್ತದೆ.
ಶಾಂತವಾಗಿ ಆಲೋಚಿಸಿ ನೋಡಿ.

*ಯಾವಾಗಲೂ  ಕೆಳಗಿನ  ಬ್ರಾಂಡ್ ವಸ್ತುಗಳನ್ನೇ ಬಳಸಿ *

1. ತುಟಿಗಳಿಗೆ "ಸತ್ಯ "
2. ಶಬ್ದಗಳಿಗೆ "ಪ್ರಾರ್ಥನೆ "
3. ಕಣ್ಣಿಗಳಿಗೆ "ದಯೆ"
4. ಕೈಗಳಿಗೆ "ದಾನ"
5. ಹೃದಯಕ್ಕಾಗಿ "ಪ್ರೇಮ"
6. ಮುಖಕ್ಕೆ "ನಗೆ"
7. ದೊಡ್ಡವನಾಗಲು "ಕ್ಷಮೆ"

5 Jun 2017

ಇದು ನನ್ನ ನಿದ್ರೆಯನ್ನು ಹಾಳು ಮಾಡಿತು

ರಾತ್ರಿ ಸಮಯ ಅಂಗಡಿಯ
ಮಾಲೀಕ ಅಂಗಡಿಯನ್ನು , ಮುಚ್ಚುವ ತವಕದಲ್ಲಿ ಇದ್ದನು..
ಅಷ್ಟರಲ್ಲಿ ಒಂದು ನಾಯಿ ಅಲ್ಲಿಗೆ ಬಂದಿತು.

ಅದರ ಬಾಯಿಯಲ್ಲಿ ಒಂದು
ಪ್ಲಾಸ್ಟಿಕ್ ಚೀಲ ಇತ್ತು .. ಆ ಚೀಲದಲ್ಲಿ ಸಾಮಾನುಗಳ ಚಿಟಿ ಮತ್ತು ಹಣ ಇತ್ತು..

ಅಂಗಡಿಯವನು ಹಣವನ್ನು ತೆಗದುಕೊಂಡು ಸಾಮಾನುಗಳನ್ನು ಆ ಚೀಲದಲ್ಲಿ ತುಂಬಿದನು ನಾಯಿಯ ಬಾಯಿಯಿಂದ ಆ ಚೀಲವನ್ನು ತೆಗದುಕೊಂಡು ಹೊರಟಿತು..

ಅಂಗಡಿಯವ ಅಶ್ಚರ್ಯಚಕಿತನಾಗಿ ನಾಯಿ ಹಿಂದೆ ಹಿಂದೆ ತೆರಳಿದನು ... ಯಾಕೆಂದರೆ ನಾಯಿಗೆ ಎಷ್ಟು ತಿಳುವಳಿಕೆ ಇದೆ ಮತ್ತು ಇದರ ಮಾಲೀಕರು ಯಾರು ಎಂದು ಪರಿಶೀಲನೆ ಮಾಡಲು.!

ನಾಯಿ ಬಸ್ ಸ್ಟಾಪ್ ನಲ್ಲಿ ನಿಂತಿತ್ತು.. ಸ್ವಲ್ಪ ಸಮಯದ ನಂತರ ಬಸ್ ಬಂದಿತು.. ನಾಯಿ ಬಸ್ ಅನ್ನು ಹತ್ತಿತು.

ಕಂಡಕ್ಟರ್ ಬಂದಾಗ ತಲೆ ಮುಂದೆ ಚಾಚಿತು.ಕಂಡಕ್ಟರ್ ನಾಯಿಯ ಕೊರಳುನಲ್ಲಿ ಇರುವ ಪಟ್ಟಿಯಲ್ಲಿ ಇರುವ ವಿಳಾಸವನ್ನು ನೋಡಿ ಹಣ ತೆಗದುಕೊಂಡು ನಾಯಿಯ ಕೊರಳಲ್ಲಿ ಟಿಕೆಟ್ ಇಟ್ಟನು.

ನಾಯಿ ಇಳಿಯುವ ಜಾಗ ಬಂದಾಗ ಮುಂದಿನ ಬಾಗಿಲಿನಲ್ಲಿ ಬಂದು ಬಾಲ ಅಲ್ಲಾಡಿಸುತ್ತ ಬಸ್ ನಿಲ್ಲಿಸುವಂತೆ ಸನ್ನೆ ಮಾಡಿತು‌.

ಬಸ್ ನಿಂತ ಮೇಲೆ ಬಾಲ ಅಲ್ಲಾಡಿಸುತ್ತ  ಇಳಿದು ಹೋಗುತ್ತಿತ್ತು.

ಅಂಗಡಿಯವನಿಗೆ ಇನ್ನು ಉತ್ಸಾಹ ಹೆಚ್ಚಾಗಿತ್ತು.. ನಾಯಿ ಹಿಂದೆ , ಹಿಂದೆ ಬರುತ್ತಿದ್ದನು.‌

ನಾಯಿ ಒಂದು ಮನೆಯ ಹತ್ತಿರ
ಬಂದು ನಿಂತು ಚೀಲವನ್ನು ಕೆಳಗೆ ಇಟ್ಟು ಕಾಲಿನಿಂದ ಮೂರು ಸಲ ಬಾಗಿಲು ಬಡಿಯಿತು.

ಒಳಗಡೆಯಿಂದ ನಾಯಿಯ ಮಾಲಿಕ ಬಂದು ಕಟ್ಟಿಗೆಯಿಂದ ನಾಯಿಯನ್ನು ಹೊಡೆದನು.

ಅಂಗಡಿಯವವನು ನಾಯಿಯ ಮಾಲಿಕನಗೆ ಕೇಳಿದನು.
ನಾಯಿಯನ್ನು ಯಾಕೇ ಹೊಡೆದೆ ಎಂದು.?

ನಾಯಿಯ ಮಾಲಿಕ ಹೇಳಿದನು..

ಇದು ನನ್ನ ನಿದ್ರೆಯನ್ನು ಹಾಳು ಮಾಡಿತು..

ಹಣ , ಚೀಟಿ ಮತ್ತು ಚೀಲ ತೆಗದುಕೊಂಡ ಹೋದ ಇದು
ಕೀಲಿಯನ್ನು ಯಾಕೇ ಮರೆತು ಹೋಗಬೇಕಾಗಿತ್ತು  ಎಂದು ಬೈದನು.

#ಜೀವನದಸತ್ಯವುಇಷ್ಟೇ

ಬಂಧು ಬಳಗಕ್ಕೆ ಮತ್ತು ಸ್ನೇಹಿತರಿಗೆ ನಾವು ಸಹಾಯ ಮಾಡುವ ದಿನಗಳಷ್ಟು ಮಾತ್ರ
ಒಳ್ಳೆಯವರು ಅಗಿ ಕಾಣುತ್ತೇವೆ.

ನಮ್ಮಿಂದ ಒಂದು ಚಿಕ್ಕ ತಪ್ಪು ಅದರು ಸಹ ಹಿಂದೆ ಮಾಡಿದ ಎಲ್ಲಾ ಸಹಾಯಗಳನ್ನು ಮರೆತು ನಮ್ಮ ಬಗ್ಗೆ ಕೆಟ್ಟದಾಗಿ ಮಾತಾನಾಡಲು ಶುರು ಮಾಡುತ್ತಾರೆ.

ಅದ್ದರಿಂದ ನಾವು ಮಾಡುವ ಕೆಲಸ ಒಳ್ಳೆಯದು ಅಗಿದ್ದರೆ
ಅದೆ ದಾರಿಯಲ್ಲಿ ಮುಂದುವರಿಯುವುದು ಉತ್ತಮ.

ನಾವು ಮಾಡುವ ಕೆಲಸಗಳು
ಜನರನ್ನು ಎಂದೆಂದಿಗೂ ಸಂತೃಪ್ತಿ ಗೊಳಿಸಲು ಸಾಧ್ಯವಿಲ್ಲ.

ಪೂಜಾರಿಗೆ ತನ್ನ ತಪ್ಪಿನ ಅರಿವಾಗಿ ತನ್ನ ಹೆಂಡತಿಗೆ ಕ್ಷಮೆ ಕೇಳಿದ

ಒಂದು ದಿನ ಪೂಜಾರಿಯು ದೇವಸ್ಥಾನದಿಂದ ಮನೆಗೆ ಬರುವಾಗ ತುಂಬಾ ನೀರಡಿಕೆಯಾಗಿತ್ತು ಸೀದಾ ಮನೆಗೆ ಬಂದ ಪೂಜಾರಿ ತನ್ನ ಹೆಂಡತಿಗೆ ಹೇಳಿದ

ಪೂಜಾರಿ: ನೀರೂ ತಗೊಂಡ ಬಾ

ಹೆಂಡತಿ : ಹಾ ತಂದೆ

ಪೂಜಾರಿ: ಆಹಾ!! ನೀರೂ ತುಂಬಾ ರುಚಿಯಾಗಿವೆ ಯಾವ ಬಾವಿಯಿಂದ ತಂದಿದಿಯಾ??

ಹೆಂಡತಿ: ಮನೆಯಲ್ಲಿ ನೀರೂ ಇರಲಿಲ್ಲ ಪಕ್ಕದ ಮನೆಯಿಂದ ತಂದೆ

ಪೂಜಾರಿ: ಅರೆ ಶೂದ್ರರ ಮನೆಯ ನೀರೂ ಕುಡಿಸಿದಿಯಾ
(ಪೂಜಾರಿ ಬಾಯಲ್ಲಿ ಕೈ ಹಾಕಿ ನೀರೂ ಹೋರಹಾಕಲು ಕಾರಲು ಪ್ರಯತ್ನಿಸಿದ ನಂತರ ಹೆಂಡತಿಗೆ ಮನ ಬಂದಂತೆ ಬೈದ)

ಹೆಂಡತಿ: ತಪ್ಪಾಯಿತು ಇನ್ನೊಂದು ಸಲ ಹೀಗ್ ಯಾವತ್ತು ಮಾಡಲ್ಲ ಅಂತ ಮಾತು ಕೊಟ್ಲು
(ಮತ್ತೆ ಒಂದು ದಿನ ಹೊರಗಿಂದ ಹಸಿದು ಬಂದ ಪೂಜಾರಿ)

ಪೂಜಾರಿ: ಎ ಊಟ ಬಡಿಸು

ಹೆಂಡತಿ : ಊಟ ಏನೂ ಮಾಡಿಲ್ಲ ಹೊಲದಲ್ಲಿ ಬೆಳೆ ಬೆಳೆಯುವ ರೈತ ಶೂದ್ರರು ಅದ್ಕೆ ನೀವು ಬೈತಿರಂತ ಎಲ್ಲ ಹಿಟ್ಟು ಅಕ್ಕಿ ಬೆಳೆ ಹೊರಗೆ ನಾಯಿಗೆ ಹಾಕಿದ್ದೆನೆ ಮತ್ತು ಕಬ್ಬಿಣ ಕಡಾಯಿ ಕೂಡ ಶೂದ್ರ ಜಾತಿಗೆ ಸೇರಿದವನು ಮಾಡಿದ್ದಾನೆ ಅದು ಹೊರಗೆ ಬಿಸಾಕಿದಿನಿ

ಪೂಜಾರಿ: ಎಂತಹ ಮುಟ್ಟಾಳ ನಿ? ಹೋಗ್ಲಿ ಕುಡಿಯಲು ಹಾಲಾದ್ರು ತಂದು ಕೊಡು

ಹೆಂಡತಿ: ಹಾಲು ಕರೆದಿಲ್ಲ ದನ ಕಾಯುವವನು ಶೂದ್ರ ಜಾತಿಯವನೆ ಅವನು ಆಕಳನ್ನ ಮೈ ತೋಳೆದಿದ್ದಾನೆ ಅದ್ಕೆ ಆಕಳನ್ನ ಹೊರ ಹಾಕಿದಿನಿ
(ಸಿಟ್ಟಿಗೆದ್ದ ಪೂಜಾರಿ )

ಪೂಜಾರಿ: ಅರೆ ಎಲ್ಲವು ಮನೆಯಿಂದ ಹೊರಹಾಕಿದಿ ಆದ್ರು ಆಕಳ ಹಾಲು ಅಪವಿತ್ರ ಹೆಗ್ ಆಗುತ್ತೆ ಅದು ಆಕಳ ದೇಹದಿಂದ ಬರುತಲ್ವೆ??

ಹೆಂಡತಿ: ಹಾಗಾದ್ರೆ ನೀರು ಅಪವಿತ್ರ ಹೇಗ್ ಆಗುತ್ತೆ ಅದು ಭೂಮಿಯಿಂದ ಬರುತಲ್ವೆ??

(ಮತ್ತೆ ಸಿಟ್ಟಿಗೆದ್ದು ಹೆಂಡತಿಯ ಮಾತು ಕೇಳಿ ತನ್ನ ಹಣೆಯನ್ನ ಗೊಡೆಗೆ ಹೊಡುಕೊಂಡು ಹೇಳಿದ)
ಪೂಜಾರಿ: ಮನೆ ಹೊರಗೆ ಮಂಚಾ ಹಾಕು ಅಲ್ಲಿ ನಾ ಮಲಗುವೆ

ಹೆಂಡತಿ: ಮಂಚಾನು ಮುರಿದು ಹೊರ ಬಿಸಾಕಿದಿನಿ ಅದು ಒಬ್ಬ ಶೂದ್ರ ಮಂಚ ಮಾಡುವವನಿಂದ ಬಂದಿತ್ತು ಅದ್ಕೆ

ಪೂಜಾರಿ: ಎಲ್ಲನು ಸರ್ವನಾಶ ಮಾಡಿ ಬಿಟ್ಟೆ ಮನೆ ಕೂಡ ಸುಡಬೇಕಾಗಿತ್ತು??

ಹೆಂಡತಿ: ಅರೆ ಹೌದು ಮನೆ ಒಂದೆ ಬಾಕಿ ಉಳಿದಿದೆ ಮನೆ ಕೂಡ ಒಬ್ಬ ಮನೆ ಕಟ್ಟುವವ ಶೂದ್ರ ಜಾತಿಗೆ ಸೇರಿದವ ನಿ ಹೊರಗೆ ಬಾ ಮನೆ ನು ಬೆಂಕಿ ಹಚ್ಚುವೆ ಇಲ್ಲಾ ಮನೆ ಜೋತೆ ನಿನಗು ಬೆಂಕಿ ಹಚ್ಚಲೆ??

(ಪೂಜಾರಿಗೆ ತನ್ನ ತಪ್ಪಿನ ಅರಿವಾಗಿ ತನ್ನ ಹೆಂಡತಿಗೆ ಕ್ಷಮೆ ಕೇಳಿದ)
ಈ ಸಂದೇಶ ಇನ್ನೂ ಉಳಿದ ಪೂಜಾರಿಯ ಬುದ್ದಿ ಉಳ್ಳವರಿಗೆ ಮುಟ್ಟಿಸುವ ಮೂಲಕ ಜಾತೀಯತೆನಾ ಶಮನ ಮಾಡೋಣ

ನನ್ನ ಈ ಒಂದು ಪ್ರಯತ್ನ SHARE ಮಾಡುವ ಮೂಲಕ ಇನ್ನೂ ಜನರ ಕೊಳೆತು ನಾರುತ್ತಿರುವವರ ಮನಸಿಗೆ ಮುಟ್ಟಿಸುವ ಪ್ರಯತ್ನ ಮಾಡಿ..

10 May 2017

ನಾನು ಎಂದು ಅಹಂಕರಿಸಲ ನಾನು ಯಾರು ?

ಹುಟ್ಟಿದಾಗ ನೀ ಅಳುತ್ತಿದ್ದೆ,
ಮಡಿದಾಗ ನಿನ್ನವರು ಅಳುತ್ತಿದ್ದರು.

ಹುಟ್ಟಿದಾಗ ನಿನಗೆ ವಸ್ತ್ರ ತೊಡಿಸುವರು,
ಮಡಿದಾಗ ನಿನ್ನ ವಸ್ತ್ರವ ಬಿಚ್ಚುವರು.
ಹುಟ್ಟಿದಾಗ  ಹುಡುಕುವರು ನಿನಗೆ
ನೂರೆಂಟು ನಾಮ,
ಮಡಿದಮೇಲೆ ಶವ ಎಂದೇ
                         ನಿನ್ನ ನಾಮ.

ನೀನೇನನ್ನೂ ಗಳಿಸದೇ ಬಂದೆ,
                           ಮಡಿದಾಗ
ನೀನು ಗಳಸಿದ್ದನ್ನು ಕಳದುಕೊಂಡೆ.

ಓ ಮಾನವಾ..
              ಮಡಿದಾಗ ಮಣ್ಣಲ್ಲಿ ಮರಳಾಗಿ
                              ಹೊಗುವ ನೀನು
               ನಿನ್ನದು ಎನ್ನಲು ನಿನಗೇನಿದೆ,

     ನಿನಗೆ ಜನ್ಮ ಕೊಟ್ಟವರು ಮತ್ತೊಬ್ಬರು,

     ನಿನಗೆ ಹೆಸರು ಕೊಟ್ಟದ್ದು ಮತ್ತೊಬ್ಬರು,

 ನಿನಗೆ ಜ್ಙಾನ ಹೇಳಿ ಕೊಟ್ಟದ್ದು ಮತ್ತೊಬ್ಬರು,

ಕಡೆಗೆ ನಿನ್ನ ಅಂತ್ಯ ಸಂಸ್ಕಾರ
       ನಿರ್ವಹಿಸುವುದು ಕೂಡಾ ಮತ್ತೊಬ್ಬರೇ.

ನಾನು ಎಂದು ಅಹಂಕರಿಸಲ
ನಾನು ಯಾರು ?


                              ಏನಿದೇ ನನ್ನಲ್ಲಿ ?

9 May 2017

ಅವರು ಮುಟ್ಟಿದ ಚಪ್ಪಲಿಗೆ ಗಂಜಳ

                        ಮಟಮಟ ಮಧ್ಯಾಹ್ನ. ಶೂಧ್ರನೊಬ್ಬ ಬಸವಣ್ಣನವರ ಮನೆಯ ಎದುರು ಬಂದು ನಿಲ್ಲುತ್ತಾನೆ. ಸೂರ್ಯನ ಬಿಸಿಲು ನೆತ್ತಿಯನ್ನು ಸುಡುತ್ತಿರುತ್ತದೆ. ಆತನ ನೆರಳು ಆತನ ಮೇಲಷ್ಟೇ ಬೀಳುತ್ತಿದೆ.
"ಅಮ್ಮಾವ್ರೆ" ಎಂದು ಕೂಗಿ ಕರೆಯುತ್ತಾನೆ.
"ಯಾರೂ?" ಮನೆಯೊಳಗೇ ನಿಂತು ಆ ತಾಯಿ ಕೇಳುತ್ತಾಳೆ.
"ನಾನು ಅಮ್ಮೊರೆ, ಚಪ್ಪಲಿ ಹೊಲೆದು ತಂದಿದ್ದೀನಿ."
"ಅಲ್ಲೇ ಇಟ್ಟು ಹೋಗು."
ಶೂಧ್ರ ಚಪ್ಪಲಿ ಅಲ್ಲೇ ಇಟ್ಟು ಹೊರಟುಹೋಗುತ್ತಾನೆ. ಹತ್ತು ನಿಮಿಷದ ನಂತರ ಆ ತಾಯಿ ಮನೆಯಿಂದ ಹೊರಬಂದು, ಚಪ್ಪಲಿಗಳ ಮೇಲೆ ಹಸುವಿನ ಗಂಜಳ ಚಿಮುಕಿಸಿ ತೆಗೆದುಕೊಂಡು ಹೋಗುತ್ತಾಳೆ. ಇದೆಲ್ಲವನ್ನು ನೋಡುತ್ತಿದ್ದ ಬಾಲಕ ಬಸವಣ್ಣ,
"ಯಾಕಮ್ಮ ಗಂಜಳ ಚಿಮುಕಿಸಿದೆ.? ಎಂದು ತನ್ನ ತಾಯಿಯನ್ನು ಕೇಳುತ್ತಾನೆ.
"ಅವರು ಶೂಧ್ರರು. ಮೈಲಿಗೆಯ ಜನ. ಅದಕ್ಕೆ ಅವರು ಮುಟ್ಟಿದ ಚಪ್ಪಲಿಗೆ ಗಂಜಳ ಚಿಮುಕಿಸುವ ಮೂಲಕ  ಶುದ್ಧೀಕರಿಸಿದ್ದೇನೆ ಮಗನೆ."
"ಗಂಜಳ ಚಿಮುಕಿಸಿದರೆ ಚಪ್ಪಲಿಯ ಮೈಲಿಗೆ ಹೋಗಿ ಶುದ್ಧವಾಗಬಹುದಾದರೆ, ಆ ಶೂಧ್ರರ ಮೈಮೇಲೂ ಗಂಜಳ ಚಿಮುಕಿಸುವ ಮೂಲಕ ಮೈಲಿಗೆ ತೆಗೆದು, ನಮ್ಮ ಮನೆಯೊಳಗೂ ಕರೆಯಬಹುದಿತ್ತು ಅಲ್ಲವೇನಮ್ಮ."

ಜಗತ್ತನ್ನೆ ಗೆದ್ದ ಅಲೆಕ್ಸಾಂಡರ್

ಜಗತ್ತನ್ನೆ ಗೆದ್ದ ಅಲೆಕ್ಸಾಂಡರ್ ತನ್ನ ಮರಣ ಕಾಲದ ಒಂದು ದಿನ ತನ್ನ ಸೇನಾಧಿಪತಿಯನ್ನು ಕರೆದು "ಮೂರು" ಅಪ್ಪಣೆ ಮಾಡಿದ.

೧. ನನ್ನ ಮರಣದ ನಂತರ, ನನ್ನ ಶವ ಪೆಟ್ಟಿಗೆಯನ್ನು ಇಡೀ ದೇಶಗಳಲ್ಲಿನ ಪ್ರಸಿದ್ದ ವೈದ್ಯರಾದವರು ಹೊರಬೇಕು.

೨. ನನ್ನ ಅಧಿಕಾರದ ಅವಧಿಯಲ್ಲಿ ಸಂಪಾದನೆ ಮಾಡಿದ ಎಲ್ಲ ಹೊನ್ನು, ವಜ್ರ, ಬೆಲೆ ಬಾಳುವ ಮಣಿ ಗಳನ್ನು, ನನ್ನನ್ನು ಸ್ಮಶಾನಕ್ಕೆ ಕೊಂಡೊಯ್ಯುವ ದಾರಿಯುದ್ದಕ್ಕೂ ಎಸೆದು ಚಲ್ಲಬೇಕು.

೩. ನನ್ನ ಎರಡೂ ಕೈಗಳು ಶವಪೆಟ್ಟಿಯ ಹೊರಗೆ ಎಲ್ಲರಿಗೂ ಕಾಣಿಸುವಂತೆ ಇರಿಸಬೇಕು.

ಅರ್ಥವಾಗದ ಸೇನಾಧಿಪತಿ , ಈ ತಮ್ಮ ಕೋರಿಕೆ ಏಕೆಂದು ಕೇಳಬಹುದೇ ಎಂದು ಅರಿಕೆ ಮಾಡಿಕೊಂಡ.

ಅಲೆಕ್ಸಾಂಡರ್ ನ ಉತ್ತರ ಹೀಗಿತ್ತು!

೧.ಇಡೀ ದೇಶಗಳಲ್ಲಿರು ಪ್ರಖ್ಯಾತರಾದ ವೈದ್ಯರಿಂದಲೂ ನನ್ನನ್ನು ಉಳಿಸಲು ಸಾಧ್ಯವಿಲ್ಲ ಎಂಬ ಅರಿವು ಜನರಲ್ಲಿ ಮೂಡಿಸಲು ಪ್ರಖ್ಯಾತ ವೈದ್ಯರು ನನ್ನ ಶವ ಪೆಟ್ಟಿಗೆ ಹೊರಲು ಹೇಳಿದೆ.

೨. ನನ್ನ ಆಡಳಿತ ಕಾಲದಲ್ಲಿ ಸಂಪಾದಿಸಿದ ಎಲ್ಲವೂ ಈ ಮಣ್ಣಿನಿಂದ ಬಂದಿದ್ದು ಅದನ್ನು ನಾನು ಕೊಂಡೊಯ್ಯಲಾಗದು ಹಾಗಾಗಿ ಅದು ಮತ್ತೆ ಮಣ್ಣಿನಲ್ಲೇ ಉಳಿಯಲಿದೆ ಎಂಬುದನ್ನು ಪ್ರಜೆಗಳಿಗೆ ತಿಳಿಸಲೆಂದು ಎಸಯಲಿಕ್ಕೆ ಹೇಳಿದೆ.

೩. ಇನ್ನು ಶವಪೆಟ್ಟಿಯ ಹೊರಗಿಟ್ಟ ನನ್ನ ಎರಡೂ ಕೈಗಳನ್ನೂ ಪ್ರಜೆಗಳು ನೋಡುವ ಉದ್ದೇಶ!

ನಾನು ಹುಟ್ಟದಾಗ ಬರಿಗೈಲಿ ಬಂದೆ ಮತ್ತು ಹೋಗುವಾಗ ಬರಿಗೈಯಲ್ಲಿ ಹೋಗುತ್ತಿದ್ದೇನೆ ಎಂಬುದನ್ನು ಜನರು ನೋಡಲೆಂದು ಹೇಳಿದೆ.

ನೀತಿ:
ಕಾಲವೆಂಬುದು ಎಲ್ಲಕ್ಕೂ ಮೀರಿದ್ದು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬದುಕಿರುವಷ್ಟು ದಿನ, ಸಮಯ ಉತ್ತಮ ಕೆಲಸವನ್ನು ಮಾಡಬೇಕು. ಅವುಗಳು ಮಾತ್ರವೇ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ. ಗಳಿಸಿದ ವಸ್ತುಗಳಾವುವು ನಮ್ಮೊಡನೆ ಬರಲಾರವು.


ಗಂಡ ಮತ್ತು ಹೆಂಡತಿಯ ನಡುವೆ ನಡೆದ ಸಂಭಾಷಣೆ

ಗಂಡ ಮತ್ತು ಹೆಂಡತಿಯ ನಡುವೆ ನಡೆದ ಸಂಭಾಷಣೆ...
ಹೆಂಡತಿ ಐದಾರು ಪ್ರಶ್ನೆಗಳನ್ನ ಕೇಳುತ್ತಾಳೆ. ಅದಕ್ಕೆ ಗಂಡ ಸಮಾಧಾನ ಮತ್ತು ಸರಳವಾಗಿ ಉತ್ತರಿಸುತ್ತಾನೆ...
ಅದರೆ ಆಮೇಲೆ ಗಂಡ ಕೇಳುವ ಒಂದು ಪ್ರಶ್ನೆಗೆ ಹೆಂಡತಿ ಉತ್ತರಿಸಿ ಎರಡನೇ ಪ್ರಶ್ನೆಗೆ ಮುಖಿ ಆಗುತ್ತಾಳೆ...

ಹೆಂಡತಿ:-ನೀವು ಬಿಯರ್ ಕುಡಿತ್ತಿರ?

ಗಂಡ:-ಹೌದು.

ಹೆಂಡತಿ:-ಒಂದು ದಿನಕ್ಕೆ ಎಷ್ಟು ಬಿಯರ್ ಕುಡಿತ್ತಿರ?

ಗಂಡ:-ಮೂರು

ಹೆಂಡತಿ:-ಒಂದು ಬಿಯರ್ ಗೆ ಎಷ್ಟು ದುಡ್ಡು ಕೊಡ್ತೀರ?

ಗಂಡ:-ಐದು ಡಾಲರ್

ಹೆಂಡತಿ:-ಎಷ್ಟು ವರ್ಷದಿಂದ ಬಿಯರ್ ಕುಡಿತ ಇದ್ದೀರಾ.?

ಗಂಡ:- 20 ವರ್ಷ

ಹೆಂಡತಿ:-ಸೊ, ಒಂದು ಬಿಯರ್ ಬೆಲೆ 5 ಡಾಲರ್ ಮತ್ತು ದಿನಕ್ಕೆ 3 ಬಿಯರ್, ಹಾಗಾದರೆ ತಿಂಗಳಿಗೆ 450 ಡಾಲರ್ ಬಿಯರ್ ಗಾಗಿ ಖರ್ಚು ಮಾಡ್ತೀರ.
 ಒಂದು ವರ್ಷಕ್ಕೆ  5400 ಡಾಲರ್, ಸರಿನ...?

ಗಂಡ :- ಸರಿ


ಹೆಂಡತಿ :-ಒಂದು ವರ್ಷಕ್ಕೆ 5400 ಡಾಲರ್ ಅಂದ್ರೆ, 20 ವರ್ಷಕ್ಕೆ 1,08,000 ಡಾಲರ್... ಸರಿನ..?

ಗಂಡ:-ಸರಿ

ಹೆಂಡತಿ:-ನಿಮಗೆ ಗೊತ್ತ ನೀವು ಏನಾದ್ರು 20 ವರ್ಷದಿಂದ ಬಿಯರ್ ಕುಡಿಯದೆ ಇದ್ದಿದ್ರೆ, ಇಷ್ಟೊತ್ತಿಗೆ ನೀವು ಒಂದು ವಿಮಾನ ತಗೋಬಹುದಿತ್ತು.

ಗಂಡ:- ನೀನು ಬಿಯರ್ ಕುಡಿತ್ತಿಯ ?

ಹೆಂಡತಿ :- ಇಲ್ಲ...


ಗಂಡ:- ಎಲ್ಲಿ ನಿನ್ನ ವಿಮಾನ...?😜😜😜

ನಾನು ಅವರು ಊಟ ಮಾಡುವುದನ್ನೇ ನೋಡಿ ನಿಂತೆ.

ಹೋಟೆಲ್ ಮಾಲಿಕ ಎಲೆಯಿಟ್ಟು ಊಟ ಬಡಿಸಲು ಬಗ್ಗುತಿದ್ದಂತೆ ಆ ವ್ಯಕ್ತಿ ಕೇಳಿದರು.....

ಊಟಕ್ಕೆ ಎಷ್ಟಾಗುತ್ತದೆ?

ಮಾಲಿಕ ಉತ್ತರಿಸಿದರು....

ಮೀನು ಬೇಕಿದ್ದರೆ ೫೦ ರೂಪಾಯಿ, ಮೀನು ಬೇಡವಾದರೆ ೩೦ ರೂಪಾಯಿ....

ಆ ವ್ಯಕ್ತಿ ತನ್ನ ಹರಿದ ಅಂಗಿಯ ಕಿಸೆಯಿಂದ ತೆಗೆದ ಹತ್ತು ರೂಪಾಯಿ ಯನ್ನು ಮಾಲಿಕನತ್ತ ಚಾಚುತ್ತಾ...

ನನ್ನ ಕೈಯಲ್ಲಿ ಇದುವೇ ಇರೋದು..
ಇದಕ್ಕೆ ಸಿಕ್ಕುವುದು ಕೊಟ್ಟರೆ ಸಾಕು.... ಬರೀ ಅನ್ನವಾದರೂ ಸಾಕು..

ಹಸಿವು ನೀಗಿದರೆ ಸಾಕು..

ನಿನ್ನೆ ಮಧ್ಯಾಹ್ನದಿಂದ ಏನೂ ತಿಂದಿಲ್ಲ....

ಅದು ಹೇಳಬೇಕಾದರೆ ಅವರ ಮಾತುಗಳು ತಡವರಿಸಿದವು....

ಹೋಟೆಲ್ ಮಾಲಿಕ ಮೀನು ಬಿಟ್ಟು ಬಾಕಿ ಎಲ್ಲಾ ಅವರಿಗೆ ಬಡಿಸಿದರು....

ನಾನು ಅವರು ಊಟ ಮಾಡುವುದನ್ನೇ ನೋಡಿ ನಿಂತೆ... ಅವರ ಕಣ್ಣಿನಿಂದ ಕಣ್ಣೀರು ಸಣ್ಣದಾಗಿ ಕೆಲ ಜಾರುತಿತ್ತು.ಅದನ್ನು ಉಜ್ಜಿಕೊಂಡು ಸಣ್ಣ ಮಗುವಿನಂತೆ ನಿಧಾನವಾಗಿ ಊಟಮಾಡುವುದನ್ನ ಕಂಡ ಪಕ್ಕದಲ್ಲಿ ಕುಳಿತ ವ್ಯಕ್ತಿ ಕೇಳಿದರು...

ನೀವ್ಯಾಕೆ ಅಳುತಿದ್ದೀರಾ?

ಅವರು ಕೇಳಿದ ವ್ಯಕ್ತಿಯ ಮುಖವನ್ನ ನೋಡಿ ಕಣ್ಣನ್ನು ಉಜ್ಜಿಕೊಂಡು ಹೇಳಿದರು....

ನನ್ನ ಕಳೆದು ಹೋದ ಜೀವನವನ್ನು ನೆನೆದು ಕಣ್ಣೀರು ಬಂತು.. ಮೂರು ಮಕ್ಕಳು ನನಗೆ ಎರಡು ಗಂಡು, ಒಂದು ಹೆಣ್ಣು...
ಮೂರು ಜನರಿಗೂ ಒಳ್ಳೆಯ ಕೆಲಸವಿದೆ... ನನಗೆ ಸಿಕ್ಕದ ಎಲ್ಲಾ ಸೌಭಾಗ್ಯ ವನ್ನು ನಾನು ಅವರಿಗೆ ನೀಡಿದೆ.... ಅದಕ್ಕಾಗಿ ನಾನು ಕಳೆದು ಕೊಂಡದ್ದು ನನ್ನ ಯೌವನ ವನ್ನು.... ಇಪ್ಪತ್ತೆಂಟು ವರುಷದ ಪ್ರವಾಸ ಜೀವನ.....

ಎಲ್ಲದಕ್ಕೂ ನನ್ನ ಬೆನ್ನೆಲುಬಾಗಿದ್ದ ಅವಳು ಮೊದಲೇ ನನ್ನನ್ನು ಒಂಟಿಯಾಗಿಸಿ ಹೊರಟು ಹೋದಳು.... ಆಸ್ತಿ ಪಾಲು ಮಾಡುವವರೆಗೆ ನಾನಂದರಾಯಿತು ನನ್ನ ಮಕ್ಕಳು, ಸೊಸೆಯಂದಿರಿಗೆ. ಪಾಲು ಮಾಡುತಿದ್ದಂತೆ ನಾನು ಅವರಿಗೆ ಭಾರವಾಗತೊಡಗಿದೆ.... ಮುಟ್ಟದಕ್ಕೆಲ್ಲಾ ನನ್ನನ್ನು ದೂರಲಾರಂಭಿಸಿದರು... ನಾನು ಒಬ್ಬ ಮುದುಕನಲ್ವಾ? ಆ ಒಂದು ಪರಿಗಣನೆಯಾದರು ಕೊಡಬಹುದಿತ್ತಲ್ಲಾ? ಅದೂ ಇಲ್ಲ... ಅವರ ಅಹಾರ ಸೇವನೆಯ ನಂತರವೇ ನಾನು ಕುಳಿತುಕೊಳ್ಳುತಿದ್ದೆ. ಆದರೂ ಬಯ್ಯುತಿದ್ದರು.. ಆಹಾರವೆಲ್ಲಾ ಕಣ್ಣೀರು ಬಿದ್ದು ಉಪ್ಪುರಸ‌ವಾಗುತಿತ್ತು  ತಿನ್ನುವಾಗ..ಮೊಮ್ಮಕ್ಕಳು ಕೂಡಾ ನನ್ನಲ್ಲಿ ಮಾತಾಡುತಿರಲಿಲ್ಲ... ಕಾರಣ ಮತನಾಡುವುದ ಕಂಡರೆ ಮಕ್ಕಳು ಅವರನ್ನು ಬಯ್ಯುತಿದ್ದರು... ಯಾವಾಗಳು ಅವರದು ಒಂದೇ ಮಾತು ಎಲ್ಲಿಗಾದರು ಹೊರಟು ಹೋಗಬಾರದೇ ಎಂದು... ಮರುಭೂಮಿಯಲ್ಲಿ ಬೆವರು ಸುರಿಸಿ ದುಡಿದು ಉಂಟುಮಾಡಿದ ಹಣದಲ್ಲಿ , ತಿನ್ನದೆಯೂ ಮಲಗದೆಯೂ ನಾನೂ ಅವಳೂ ಕೂಡಿ ಇಟ್ಟ ಹಣದಲ್ಲಿ ಕಟ್ಟಿದ ಮನೆ... ಅವಳ ನೆನಪುಗಳು ಮಲಗಿರೋದು ಆ ಮನೆಯಲ್ಲಿ. ಬಿಟ್ಟು ಹೋಗಲು ಮನಸು ಕೇಳಲಿಲ್ಲ.
ಅದರೇ ನಿನ್ನೆ ಹೊರಟು ಬಿಟ್ಟೆ... ಸೊಸೆಯ ಒಡವೆ ಕದ್ದೆ ಎಂದು ಮಗ ನನ್ನಲ್ಲಿ ಸಿಟ್ಟುಗೊಂಡ. ಹೊಡೆದಿಲ್ಲ ಭಾಗ್ಯಕ್ಕೆ...  ಇನ್ನೂ ಅಲ್ಲಿ ನಿಂತರೆ ಅದೂ ನಡೆಯಬಹುದು.. "ಅಪ್ಪನಿಗೆ ಹೊಡೆದ ಮಗ" ಎಂಬ ಹೆಸರು ಬರಬಾರದಲ್ಲ.,.. ಸಾಯಲು ಭಯವಿಲ್ಲ  ಅಲ್ಲದೆ ಇನ್ಯಾರಿಗೆ ಬೇಕಾಗಿ ಬದುಕಬೇಕು.

ಅವರು ಪೂರ್ತಿ ಊಟ ಮಾಡದೆ ಎದ್ದರು.. ತನ್ನಲ್ಲಿರುವ ಹತ್ತು ರೂಪಾಯಿ ಮಾಲಿಕರೆಡೆಗೆ ಚಾಚಿದರು.. ಮಾಲಕರಂದರು ಬೇಡ ಕೈಯಲ್ಲಿ ಇರಲಿ....

ಯಾವಾಗ ಬೇಕಿದ್ದರು ಇಲ್ಲಿಗೆ ಬರಬಹುದು...

ನಿಮಗಿರುವ ಊಟ ಇಲ್ಲಿ ಇರಬಹುದು..

ಆದರೆ ಆ ವ್ಯಕ್ತಿ ಆ ಹತ್ತು ರೂಪಾಯಿ ಅಲ್ಲಿ ಇಟ್ಟು ಹೇಳಿದರು

ತುಂಬಾ ಸಂತೋಷವಾಯಿತು ನಿಮ್ಮ ಉಪಕಾರಕ್ಕೆ.. ಧರ್ಮಕೆ ತಿಂದು ಅಭ್ಯಾಸವಿಲ್ಲ. ಏನೂ ತಿಳಿಯದಿರಿ.. ಬರ್ತೀನಿ ಇನ್ನೊಮ್ಮೆ ಕಾಣುವಾ ಎಂದು ಅವರ ಗಂಟನ್ನು ಎತ್ತಿಕೊಂಡು ಎಲ್ಲಿಗೆಂದಿಲ್ಲದೆ ಅವರಷ್ಟಕೆ ನಡೆದು ಹೋದರು...
ಆ ವ್ಯಕ್ತಿ ನನ್ನ ಮನಸಿಗೆ ಉಂಟು ಮಾಡಿದ ಆ ಗಾಯ ಈಗಲೂ ಒಣಗಲಿಲ್ಲ.

ಅದ್ಯಾಕೆ ಎಲ್ಲಾ ಹಸುರು ಎಲೆಗಳೂ ಒಂದು ದಿನ ಹಣ್ಣೆಲೆಯಾಗುತದೆಯೆಂದು  ಚಿಂತಿಸುತಿಲ್ಲ.???


( ಮೂಲ ಮಲಯಾಳ ,ಅನುವಾದ ನಾ.ಪಿ. ಪೆರಡಾಲ)
ನನ್ನ ವಾಟ್ಸಾಪ್ ಗೆ ಬಂದ ಕಥೆಗಳು