karunada geleya

dsfdsf

9 May 2017

ಅವರು ಮುಟ್ಟಿದ ಚಪ್ಪಲಿಗೆ ಗಂಜಳ

                        ಮಟಮಟ ಮಧ್ಯಾಹ್ನ. ಶೂಧ್ರನೊಬ್ಬ ಬಸವಣ್ಣನವರ ಮನೆಯ ಎದುರು ಬಂದು ನಿಲ್ಲುತ್ತಾನೆ. ಸೂರ್ಯನ ಬಿಸಿಲು ನೆತ್ತಿಯನ್ನು ಸುಡುತ್ತಿರುತ್ತದೆ. ಆತನ ನೆರಳು ಆತನ ಮೇಲಷ್ಟೇ ಬೀಳುತ್ತಿದೆ.
"ಅಮ್ಮಾವ್ರೆ" ಎಂದು ಕೂಗಿ ಕರೆಯುತ್ತಾನೆ.
"ಯಾರೂ?" ಮನೆಯೊಳಗೇ ನಿಂತು ಆ ತಾಯಿ ಕೇಳುತ್ತಾಳೆ.
"ನಾನು ಅಮ್ಮೊರೆ, ಚಪ್ಪಲಿ ಹೊಲೆದು ತಂದಿದ್ದೀನಿ."
"ಅಲ್ಲೇ ಇಟ್ಟು ಹೋಗು."
ಶೂಧ್ರ ಚಪ್ಪಲಿ ಅಲ್ಲೇ ಇಟ್ಟು ಹೊರಟುಹೋಗುತ್ತಾನೆ. ಹತ್ತು ನಿಮಿಷದ ನಂತರ ಆ ತಾಯಿ ಮನೆಯಿಂದ ಹೊರಬಂದು, ಚಪ್ಪಲಿಗಳ ಮೇಲೆ ಹಸುವಿನ ಗಂಜಳ ಚಿಮುಕಿಸಿ ತೆಗೆದುಕೊಂಡು ಹೋಗುತ್ತಾಳೆ. ಇದೆಲ್ಲವನ್ನು ನೋಡುತ್ತಿದ್ದ ಬಾಲಕ ಬಸವಣ್ಣ,
"ಯಾಕಮ್ಮ ಗಂಜಳ ಚಿಮುಕಿಸಿದೆ.? ಎಂದು ತನ್ನ ತಾಯಿಯನ್ನು ಕೇಳುತ್ತಾನೆ.
"ಅವರು ಶೂಧ್ರರು. ಮೈಲಿಗೆಯ ಜನ. ಅದಕ್ಕೆ ಅವರು ಮುಟ್ಟಿದ ಚಪ್ಪಲಿಗೆ ಗಂಜಳ ಚಿಮುಕಿಸುವ ಮೂಲಕ  ಶುದ್ಧೀಕರಿಸಿದ್ದೇನೆ ಮಗನೆ."
"ಗಂಜಳ ಚಿಮುಕಿಸಿದರೆ ಚಪ್ಪಲಿಯ ಮೈಲಿಗೆ ಹೋಗಿ ಶುದ್ಧವಾಗಬಹುದಾದರೆ, ಆ ಶೂಧ್ರರ ಮೈಮೇಲೂ ಗಂಜಳ ಚಿಮುಕಿಸುವ ಮೂಲಕ ಮೈಲಿಗೆ ತೆಗೆದು, ನಮ್ಮ ಮನೆಯೊಳಗೂ ಕರೆಯಬಹುದಿತ್ತು ಅಲ್ಲವೇನಮ್ಮ."

No comments: