karunada geleya

dsfdsf

5 Nov 2017

ಸತ್ಯವೇ ಭಗವಂತನೆಂಬ ಪುಟ್ಟಗೌರಿಯ ಕ

ಸತ್ಯವೇ ಭಗವಂತನೆಂಬ ಪುಟ್ಟಗೌರಿಯ ಕಥೆಯಿದು-

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊಳಿರುವ
ಸೀರ್ಯಲ್ ನೋಡೋ ಮಹಿಳೆಯ
ಪರಿಯನೆಂತು ಪೇಳ್ವೆನು

ಮಳೆಯ ಊರಿನ ಮನೆಯ ಒಳಗೆ
ಕೆಲಸ ಮುಗಿಸಿ ಕುಳಿತ ಮಹಿಳೆಯು
ಧಾರಾವಾಹಿಗಳೆಲ್ಲವನ್ನೂ
ಬಳಿಗೆ ಕರೆದಳು ಹರುಷದಿ

ಲಕ್ಷ್ಮಿ ಬಾರೆ ರಾಧ ಬಾರೆ
ಅಶ್ವಿನೀ ನಕ್ಷತ್ರ ಬಾರೆ
ಪುಟ್ಟ ಗೌರೀ ನೀನು ಬಾರೆ
ಎಂದು ಮಹಿಳೆಯು ಕರೆದಳು

ಆಂಟಿ ಕರೆದಾ ದನಿಯ ಕೇಳಿ
ಎಲ್ಲರೂ ಅಲ್ ಬಂದು ನಿಂತು
ಚೆಲ್ಲಿ ಸೂಸಿ ಕಣ್ಣೀರ್ಗರೆಯಲು
ಅಲ್ಲಿ ತುಂಬಿತು ಬಿಂದಿಗೆ

IIಸತ್ಯವೇ ಭಗವಂತನೆಂಬ ಪುಟ್ಟಗೌರಿಯ ಕಥೆಯಿದುII

ಹಬ್ಬಿದಾ ಮಲೆ ಮಧ್ಯದೊಳಗೆ
ಗ್ರಾಫಿಕ್ಸೈತಾನೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು

ಸಿಡಿದು ರೋಷದಿ ಮೊರೆಯುತಾ ಹುಲಿ
ಗುಡುಗುಡಿಸಿ ಭೋರಿಡುತ ಚಂಗನೆ
ದುಡುಕಲೆಗರಿದ ರಭಸಕಂಜಿ
ಓಡಿ ಹೋದವು ಉಳಿದವು

ಪುಟ್ಟಗೌರಿ ಎಂಬ ಹುಡುಗಿ
ತನ್ನ ಗಂಡನ ನೆನೆದುಕೊಂಡು
ಮತ್ತೆ ಸುಖವಾಗಿರುವೆನೆನುತಾ
ಚೆಂದದಿ ತಾ ಬರುತಿರೆ

ಇಂದು ಎನಗಾಹಾರ ಸಿಕ್ಕಿತು
ಎಂದು ಬೇಗನೆ ಗ್ರಾಫಿಕ್ಸ್ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು

ಮೇಲೆ ಬಿದ್ದು ನಿನ್ನನೀಗಲೇ
ಬಿಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಗ್ರಾಫಿಕ್ಸ್ ವ್ಯಾಘ್ರನು ಕೂಗಲು

ಒಂದು ಬಿನ್ನಹ ಹುಲಿಯೇ ಕೇಳು
ಮಹೆಶನಿರುವನು ಮನೆಯ ಒಳಗೆ
ಒಂದು ನಿಮಿಷದಿ ಮುಖವ ತೋರಿಸಿ
ಬಂದು ಸೇರುವೆನಿಲ್ಲಿಗೆ

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೇ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯ ನುಡಿಯುವೆಯೆಂದಿತು

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚಳಾ ಅಜ್ಯಮ್ಮನು

IIಸತ್ಯವೇ ಭಗವಂತನೆಂಬ ಪುಟ್ಟಗೌರಿಯ ಕತೆಯಿದುII

ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆ ಕೊಟ್ಟು
ಮಹೆಶ ನಿನ್ನನು ನೋಡಿ ಪೋಗುವೆನೆಂದು
ಬಂದೆನು ದೊಡ್ಡಿಗೆ

ಗೌರಿ ನೀನು ಸಾಯಲೇಕೆ
ನನ್ನ ತಬ್ಬಲಿ ಮಾಡಲೇಕೆ
ಸುಮ್ಮನಿಲ್ಲಿಯೆ ನಿಲ್ಲೆನುತ್ತ
ಮಹೆಶ ಗೌರಿಗೆ ಹೇಳಲು

ಕೊಟ್ಟ ಭಾಷೆಗೆ ತಪ್ಪಲಾರೆನು
ಕೆಟ್ಟ ಯೋಚನೆ ಮಾಡಲಾರೆನು
ನಿಷ್ಠೆಯಿಂದಲಿ ಪೋಪೆನಲ್ಲಿಗೆ
ಕಟ್ಟಕಡೆಗಿದು ಖಂಡಿತ

ಅಮ್ಮಗಳಿರ ಅಕ್ಕಗಳಿರ
ಎನ್ನ ತಾಯೊಡಹುಟ್ಟಗಳಿರ
ಮಹೆಶ ನಿಮ್ಮವನೆಂದು ಕಾಣಿರಿ
ಮುಂದೆ ಹಿಮನಿಗೆ ಗಂಡನು

ಕುಡಿದು ಬಂದರೆ ಬಯ್ಯಬೇಡಿ.
ಹೊರಗೆ ಹೋದರೆ ಹೊಡೆಯಬೇಡಿ.
ಮಹೆಶ ನಿಮ್ಮವನೆಂದು ಕಾಣಿರಿ
ಮುಂದೆ ಹಿಮನಿಗೆ ಗಂಡನು

ತಬ್ಬಲಿಯು ನೀನಾದೆ ಮಹೆಶಾ
ಹೆಬ್ಬುಲಿಯ ಬಾಯನ್ನು ಹೋಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಳು ಗಂಡನಾ

IIಸತ್ಯವೇ ಭಗವಂತನೆಂಬ ಪುಟ್ಟಗೌರಿಯ ಕತೆಯಿದುII

ಗೌರಿ ಗಂಡನ ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿನಿಂತು
ತವಕದಲಿ ಹುಲಿಗೆಂದಳು

ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಬಿಸಿರಕ್ತವಿದೆಕೋ
ಗ್ರಾಫಿಕ್ಸ್ ವ್ಯಾಗ್ರನೆ ನಿನಿದೆಲ್ಲವನುಂಡು
ಸಂತಸದಿಂದಿರು

ಪುಟ್ಟ ಗೌರಿಯ ಮಾತ ಕೇಳಿ
ಕಣ್ಣ ನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಧಾರವಾಹಿಯೆ ಮುಗಿವುದು.

ನಿರ್ಮಾಪಕನಿಗೆ ದೇವ್ರು ನೀನು 
ನಿನ್ನ ಕೊಂದರೆ ಅವ ಏನ ಪಡೆವನು
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು

No comments: