karunada geleya

dsfdsf

6 Nov 2017

ಥಾಮಸ್ ಆಲ್ವಾ ಎಡಿಸನ್

ಒಂದು ದಿನ ಮಗು
ಥಾಮಸ್ ಆಲ್ವಾ ಎಡಿಸನ್ ಮನೆಗೆ ಬಂದು
ತನ್ನ ತಾಯಿಯ ಕೈಗೆ
ಒಂದು ಪತ್ರ ಕೊಡುತ್ತಾನೆ, ಅಮ್ಮಾ,
 ನಮ್ಮ ಟೀಚರ್ ಈ ಪತ್ರವನ್ನು ನಿನಗೆ ಮಾತ್ರ ಕೊಡಲು ಹೇಳಿದ್ದಾರೆ ಎನ್ನುತ್ತಾನೆ

ಅದನ್ನು
 ಮಗನಿಗಾಗಿ ಗಟ್ಟಿಯಾಗಿ  ಓದುತ್ತಾ
ಆ ತಾಯಿಯ ಕಣ್ಣು ಒದ್ದೆಯಾಯಿತು :

"ನಿಮ್ಮ ಮಗ ತುಂಬ ಬುದ್ಧಿವಂತನಿದ್ದಾನೆ.
ನಮ್ಮ ಶಾಲೆ
ಅವನ ಬುದ್ಧಿಮತ್ತೆಗೆ
ತುಂಬಾ ಸಣ್ಣದು
ಹಾಗೂ
 ಅವನಿಗೆ ಕಲಿಸಬಲ್ಲ
 ಅರ್ಹತೆ ನಮ್ಮ
ಯಾವ ಉಪಾಧ್ಯಾಯರಿಗೂ ಇಲ್ಲ.
ಆದುದರಿಂದ
 ಅವನ ವಿದ್ಯಾಭ್ಯಾಸವನ್ನು ನೀವೇ
 ಮನೆಯಲ್ಲಿ ಕಲಿಸುವುದು ಒಳಿತು."

ತುಂಬಾ ವರ್ಷಗಳ ನಂತರ ಎಡಿಸನ್ ರ ತಾಯಿ ಮರಣಿಸುತ್ತಾರೆ,
 ಆಗ ಎಡಿಸನ್
ಪ್ರಪಂಚದ ಅಗ್ರಮಾನ್ಯ ವಿಜ್ಞಾನಿಗಳಲ್ಲಿ ಮೊದಲಿಗರಾಗಿರುತ್ತಾರೆ.
ಆ ಸಂದರ್ಭದಲ್ಲಿ
ತನ್ನ ತಾಯಿಯ ಪೆಟ್ಟಿಗೆಯಲ್ಲಿನ ಹಳೆಯ ವಸ್ತು ವಿಚಾರಗಳನ್ನು ಪರಿಶೀಲಿಸುತ್ತಿರುವಾಗ
ಕಣ್ಣಿಗೆ ಬಿದ್ದ ಮಡುಚಿದ ಕಾಗದವೊಂದನ್ನು
ಬಿಡಿಸಿ ನೋಡಿದರೆ
ಅದರಲ್ಲಿ ಹೀಗೆ ಬರೆದಿರುತ್ತದೆ. :

"ನಿನ್ನ ಮಗ
ಒಬ್ಬ ಬುದ್ಧಿಮಾಂದ್ಯ,
ಅವನನ್ನು ನಾವು
ಇನ್ನು ಮುಂದೆ ಶಾಲೆಗೆ ಬರಗೊಡುವುದಿಲ್ಲ,"

ತನ್ನ ಮಗುವಿನ
 ಮೃದು ಮನಸ್ಸನ್ನು ನೋಯಿಸದಿರಲು
 ಅಂದು ವಿರುದ್ಧವಾಗಿ
ಓದಿದ
 ತಾಯಿಯನ್ನು ನೆನೆದು ಎಡಿಸನ್ ರು ಗದ್ಗದಿತರಾಗುತ್ತಾರೆ,

 ಗಂಟೆಗಟ್ಟಲೆ ಬಿಕ್ಕಿ ಬಿಕ್ಕಿ ಅಳುತ್ತಾರೆ
 ಮತ್ತು
ತಮ್ಮ ದಿನಚರಿಯಲ್ಲಿ
ಹೀಗೆ ಬರೆಯುತ್ತಾರೆ:

" ಥಾಮಸ್ ಅಲ್ವಾ ಎಡಿಸನ್ ಒಬ್ಬ ಬುದ್ಧಿಮಾಂದ್ಯ ಮಗು, ಆದರೆ
 ಅವನ ಶ್ರೇಷ್ಠ ಮಾತೆಯ ದೆಸೆಯಿಂದ
 ಅವನು ಶತಮಾನದ ಬುದ್ಧಿವಂತನಾಗುತ್ತಾನೆ."   

"ಸಂಸ್ಕಾರವಂತ ತಾಯಿಯೇ  ದೇವರು"
"ಆಚಾರವಂತ ಮನೆಯೇ ದೇವಾಲಯ":

5 Nov 2017

ಕೊಳವೆ ಬಾವಿಯಲ್ಲಿ ಬಿದ್ದ ಮಕ್ಕಳನ್ನು ರಕ್ಷಿಸಲು ರೂಪುಗೊಂಡ ಸಾಧನ..ಹೀಗೆ ಮಾಡಿದರೆ ಕಾಪಾಡಬಹುದು!

ಕೊಳವೆ ಬಾವಿಯಲ್ಲಿ ಬಿದ್ದ ಮಕ್ಕಳನ್ನು ರಕ್ಷಿಸಲು ರೂಪುಗೊಂಡ ಸಾಧನ..ಹೀಗೆ ಮಾಡಿದರೆ ಕಾಪಾಡಬಹುದು!: ಇಲ್ಲಿ ನಾಲಕ್ಕು ಚಿತ್ರಗಳಿವೆ. ಒಂದೊಂದು ಚಿತ್ರದಲ್ಲೂ ಕಾರ್ಯಾಚರಣೆಯನ್ನು ರೂಪಿಸಲಾಗಿದೆ.

ಮೈಂಡ್ ಆಕ್ಟೀವ್ ಆಗಿ ಇರಬೇಕಾದರೆ... ಈ 4 ಕೆಲಸಗಳನ್ನು ಮಾಡಬೇಕು.!!!

ಮೈಂಡ್ ಆಕ್ಟೀವ್ ಆಗಿ ಇರಬೇಕಾದರೆ... ಈ 4 ಕೆಲಸಗಳನ್ನು ಮಾಡಬೇಕು.!!!: ಮಾನವನ ದೇಹದಲ್ಲಿ ಮಿದುಳು ತುಂಬಾ ಮುಖ್ಯವಾದ ಅಂಗ.

"ನಾನು ಎಂದೂ ಮರೆಯಲಾರೆ." ಎಂದು ಹೇಳಿ ಪಕ್ಷಿ ಹಾರಿ ಹೋಯಿತು

ಒಂದು ಜಾಲಿಯ ಮರ.
ಅದರ ಮೈತುಂಬ ಮುಳ್ಳು. ಯಾರೂ ಅದರ ಬಳಿ ಸುಳಿಯುತ್ತಿರಲಿಲ್ಲ.
ಒಂಟಿ ಜೀವನ ಮರಕ್ಕೆ ಬೇಸರವಾಯಿತು.

ಯಾರಾದರೂ ಅತಿಥಿಗಳು ಬರಬಹುದು ಎಂದು ದಾರಿ ಕಾಯುತ್ತಿತ್ತು.
ಒಂದು ದಿನ ರಾತ್ರಿ ಒಂದು ಪಕ್ಷಿಯು ಆ ಮರದ ಮೇಲೆ ಬಂದು ಕುಳಿತಿತು.
ಮರಕ್ಕೆ ಹಿಡಿಸಲಾರದಷ್ಟು ಸಂತಸವಾಯಿತು 'ಅತಿಥಿ ದೇವೋಭವ' ಎಂದು ಈ ಪಕ್ಷಿಯನ್ನು ಗೌರವಾದರಗಳಿಂದ ಉಪಚರಿಸಿ ಆಶ್ರಯವನ್ನಿತ್ತಿತು. ಪಕ್ಷಿಯು ಸಂತಸದಿಂದ ರಾತ್ರಿಯನ್ನು ಕಳೆದು ಬೆಳಗಾಗುತ್ತಲೇ ಹೊರಟು ನಿಂತಿತು.
ಮಿತ್ರನೇ, ನೀನು ನನ್ನ ಕೂಡ ಇಲ್ಲಿಯೇ ಇದ್ದು ಬಿಡು ಎಂದು ಮರವು ಪಕ್ಷಿಗೆ ವಿನಂತಿಸಿತು.

ಪಕ್ಷಿ ಹೇಳಿತು - "ದೇವರು ನನಗೆ ಹಾರಲು ಪಕ್ಕಗಳನ್ನು ಕೊಟ್ಟಿದ್ದಾನೆ.
ನಿನಗೆ ಸ್ಥಿರವಾಗಿರಲು ಬೇರನ್ನು ಕೊಟ್ಟಿದ್ದಾನೆ.
ನಾನು ಹಾರುತ್ತಿರಲೇಬೇಕು. ನೀನು ಒಂದು ಕಡೆ ಸ್ಥಿರವಾಗಿರಲೇಬೇಕು.
ಅದುವೇ ಜೀವನದ ರೀತಿ. ಮತ್ತೆ ಎಂದಾದರೂ ಸಮಯ ಸಿಕ್ಕಾಗ ನಾನು ಬರುತ್ತೇನೆ.
ನಿನ್ನ ಉಪಕಾರವನ್ನು ನಾನು ಎಂದೂ ಮರೆಯಲಾರೆ." ಎಂದು ಹೇಳಿ ಪಕ್ಷಿ ಹಾರಿ ಹೋಯಿತು.

ಮರವು ಇನ್ನೂ ಮಿತ್ರನ ದಾರಿ ಕಾಯುತ್ತಲಿದೆ.
ನಾವು ಕೂಡಿದಾಗ ಸುಖಿಸಬೇಕು.
ಅಗಲಿದಾಗ ಕೂಡಿದ ಸುಖವನ್ನು ಸ್ಮರಿಸುತ್ತ ಸಂತಸದಿಂದಿರಬೇಕು.

ಶ್ರೀ ಸಿದ್ಧೇಶ್ವರ ಸ್ವಾಮೀಜಿ

ಕೊಂಚ ಆಲೋಚಿಸಿ ನೋಡಿ

💚ಕೊಂಚ ಆಲೋಚಿಸಿ ನೋಡಿ💚

"ಕೆಲವರು ಜಗಳವಾದ ತಕ್ಷಣ ಕ್ಷಮೆಯನ್ನು ಕೇಳುತ್ತಾರೆ
ಇದರರ್ಥ
ಅವರಿಗೆ ಬೇರೆಯಾರೂ ಸಿಗಲ್ಲ, ಅಥವಾ ತಪ್ಪು ಅವರದ್ದೇ
ಅಂತರ್ಥವಲ್ಲ ಬದಲಾಗಿ ಅವರು ಸಂಭಂದಕ್ಕೆ ಹೆಚ್ಚು ಬೆಲೆ
ಕೊಡುತ್ತಾರೆ ಅಂತರ್ಥ"

💚ಕೊಂಚ ಆಲೋಚಿಸಿ ನೋಡಿ💚

"ಕೆಲವರು ನಿಮಗೆ ಸಹಾಯಮಾಡಲು ಕರೆಯದೆ ಓಡಿಬಂದು
ಸಹಾಯ ಮಾಡುತ್ತಾರೆಂದರೆ ಇದರರ್ಥ ಅವರಿಗೆ ಬೇರೆ
ಕೆಲಸವಿಲ್ಲ ಅಂತರ್ಥವಲ್ಲ.
ಅವರಿಗೆ ನೋವಿನ ಬೆಲೆ, ಮಾನವೀಯತೆಯ ಬೆಲೆ ತಿಳಿದಿರುತ್ತೆ
ಅಂತರ್ಥ"

 💚 ಕೊಂಚ ಆಲೋಚಿಸಿ ನೋಡಿ💚

"ನಿಮ್ಮಲ್ಲಿ ಕೆಲವರು ಪಾರ್ಟಿ ಕೊಟ್ಟು ಬಿಲ್ ಅನ್ನು ಅವರೇ
ಯಾವಾಗಲೂ ಕೊಡುತ್ತಾರೆ ಅಂದರೆ ಅವರಲ್ಲಿ
ಬೇಕಾದಷ್ಟು ಹಣ ಇದೆ ಅಂತ ಅರ್ಥವಲ್ಲ ಬದಲಾಗಿ
ಸ್ನೇಹಕಿಂತ / ಸಂಭಂಧಕ್ಕಿಂತ
ಹಣ ದೊಡ್ಡದಲ್ಲ ಅಂತ ಅವರ ಮನಸಲ್ಲಿರುತ್ತೆ"

💚ಕೊಂಚ ಆಲೋಚಿಸಿ ನೋಡಿ💚

"ಕೆಲವರು ಯಾವಾಗಲು ನಿಮಗೆ ಮೆಸೇಜ್
ಮಾಡುತ್ತಾರೆಂದರೆ
ಕಾಲ್ ಮಾಡುತ್ತಿರುತ್ತಾರೆ ಅಂದರೆ ಅವರು
ಯಾವಾಗಲು ಫ್ರೀ ಇರುತ್ತಾರೆ ಅಂತರ್ಥವಲ್ಲ ಬದಲಾಗಿ
ಅವರು ಎಷ್ಟೇ ಬ್ಯುಸಿ ಇದ್ದರು ತಮ್ಮ ಹೃದಯದಲ್ಲಿದ್ದವರಿ
ಗೆ ಸಮಯವನ್ನು ನೀಡಲು ಬಯಸುತ್ತಾರೆ ಅಂತರ್ಥ"

💚 ಕೊಂಚ ಆಲೋಚಿಸಿ ನೋಡಿ💚

"*ಯಾರೋ ನಿಮಗಾಗಿ ಎಷ್ಟು ಹೊತ್ತಾದರೂ ಕಾಯಲು
ಸಿದ್ದರಿದ್ದಾರೆ ಎಂತಾದರೆ
ಅವರಿಗೆ ಮಾಡಲು ಬೇರೆ ಏನೂ ಕೆಲಸವಿಲ್ಲ ಎಂದರ್ಥವಲ್ಲ.
ಅವರ ದೃಷ್ಟಿಯಲ್ಲಿ ನಿಮಗಿಂತ
ಮಹತ್ವದ್ದು ಬೇರೇನೂ ಇಲ್ಲ ಎಂದರ್ಥ"

ಕರುನಾಡ ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ರಜಾದಿನವೆಂದು ಪಟ್ಟಿ ಮಾಡಲಾಗಿದೆ ಮತ್ತು ವಿಶ್ವದಾದ್ಯಂತ ಕನ್ನಡಿಗರು ಇದನ್ನು ಆಚರಿಸುತ್ತಾರೆ. ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.

✍ ಇತಿಹಾಸ
ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾವ್, ಕರ್ನಾಟಕ ಏಕೀಕರಣ ಚಳುವಳಿಯನ್ನು ೧೯೦೫ ರಲ್ಲಿ ಪ್ರಾರಂಭಿಸಿದರು. ೧೯೫೦ರಲ್ಲಿ, ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪು ಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು.೧೯೫೬ ರ ನವೆಂಬರ್ ೧ ರಂದು, ಮದ್ರಾಸ, ಮುಂಬಯಿ, ಹೈದರಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು ಹಾಗೂ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರುಎಂಬುದಾಗಿ ಹೊಸದಾಗಿ ರೂಪು ಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.ಹೊಸದಾಗಿ ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ ಹೊಸ ಘಟಕದ ಕೋರ್ ರೂಪುಗೊಂಡು ಮುಂಚಿನ ರಾಜ್ಯದ ಹೆಸರು ಇರಲೆಂದು "ಮೈಸೂರು" ಹೆಸರನ್ನು ಉಳಿಸಿಕೊಂಡರು. ಆದರೆ ಉತ್ತರ ಕರ್ನಾಟಕದ ಜನರ ತರ್ಕ ಮಾನ್ಯತೆಗಾಗಿ, ರಾಜ್ಯದ ಹೆಸರು ನವೆಂಬರ್ ೧, ೧೯೭೩ ರಂದು "ಕರ್ನಾಟಕ" ಎಂದು ಬದಲಾಯಿತು.ಈ ಸಂದರ್ಭದಲ್ಲಿ ದೇವರಾಜ ಅರಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕ ಏಕೀಕರಣದ ಮನ್ನಣೆ ಇತರ ವ್ಯಕ್ತಿಗಳಿಗೂ ಸೇರುತ್ತದೆ. ಅವರೆಂದರೆ ಅನಕೃ, ಕೆ. ಶಿವರಾಮ್ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಎ.ಎನ್. ಕೃಷ್ಣರಾವ್ ಮತ್ತು ಬಿ.ಎಂ. ಶ್ರೀಕಂಟಯ್ಯ

✍ ಕರ್ನಾಟಕ ಒಂದುಗೂಡಿದರ ಸವಿ ನೆನಪಿಗಾಗಿ ಪ್ರತಿ ವರುಷ ನವೆಂಬರ್-೧ ರಂದು ಆಚರಿಸುವ ಹಬ್ಬವೇ ರಾಜ್ಯೋತ್ಸವ. ೧೯೫೬ ರಲ್ಲಿ ಕನ್ನಡ ಪ್ರದೇಶಗಳು, "ಮೈಸೂರ ರಾಜ್ಯ" ಎನ್ನುವ ಹೆಸರಿನಲ್ಲಿ ಒಂದುಗೂಡಿದವು. ೧೯೭೩ ರಲ್ಲಿ "ಕರ್ನಾಟಕ ರಾಜ್ಯ" ಅಂತಾ ಮರು ಹೆಸರಿಸಲಾಯಿತು.ಹಾಗಾಗಿ ಭಾಷಾ ಆಧಾರದ ಮೇಲೆ ನವೆಂಬರ್ ೧,೧೯೭೩ ರಂದು ಕನ್ನಡ ನಾಡಿನ ಸವಿ ನೆನಪಿಗಾಗಿ ನಾಡ ಹಬ್ಬವಾಗಿ ಆಚರಿಸುತ್ತಾ ಬರುತಿದ್ದಾರೆ.

🌹 ಆಚರಣೆಗಳು

ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯಾದ್ಯ೦ತ ಮಹದಾನ೦ದ ಮತ್ತು ಚಟುವಟಿಕೆಯಿಂದ ಆಚರಿಸಲಾಗುತ್ತದೆ. ಕೆಂಪು ಮತ್ತು ಹಳದಿ ಕನ್ನಡ ಧ್ವಜಗಳು ರಾಜ್ಯದ ಎಲ್ಲೆಡೆ ಹಾರಿಸಲ್ಪಡುತ್ತವೆ. ಕನ್ನಡ ನಾಡಗೀತೆ ("ಜಯ ಭಾರತ ಜನನಿಯ ತನುಜಾತೆ")ಯನ್ನು ಹಾಡಲಾಗು ತ್ತದೆ. ಸರ್ಕಾರಿ ಕಚೇರಿ ಮತ್ತು ಹಲವಾರು ಪ್ರಮುಖ ಪ್ರದೇಶಗಳಲ್ಲಿ ವಾಹನಗಳ ಮೇಲೆ ಭುವನೇಶ್ವರಿ ಚಿತ್ರವನ್ನಿಟ್ಟು ಮೆರವಣಿಗೆ ನಡೆಸಲಾಗುತ್ತದೆ.ರಾಜ್ಯೋತ್ಸವವನ್ನು ಕರ್ನಾಟಕದಲ್ಲಿರುವ ಬಹುತೇಕ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಧರ್ಮಬೇಧವಿಲ್ಲದೆ ಆಚರಿಸುತ್ತಾರೆ ಹಾಗೂ ಸರ್ಕಾರ ಮೆರವಣಿಗೆ ಆಟೋ ರಿಕ್ಷಾಗಳು ಮತ್ತು ಇತರೆ ವಾಹನಗಳು ಕನ್ನಡ ಧ್ವಜದ ಬಣ್ಣಗಳಾದ ಕೆಂಪು ಮತ್ತು ಹಳದಿ ವರ್ಣಗಳ ಬಾವುಟ ದೊಂದಿಗೆ ಅಲಂಕರಿಸಲಾಗಿರುತ್ತವೆ. ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವದ ದಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ಪ್ರಕಟ ಪಡಿಸಲಾಗುತ್ತದೆ.ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಸರ್ಕಾರದವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ ಹಮ್ಮಿಕೊಳ್ಳಲಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಸಾಧಕರಿಗೆ ಈ ಪ್ರಶಸ್ತಿಯನ್ನು ವಿತರಿಸುತ್ತಾರೆ.ಕರ್ನಾಟಕದಲ್ಲಿನ ಇನ್ನಿತರ ಪ್ರದೇಶಗಳಾದ ಮುಂಬಯಿ, ದೆಹಲಿ ಮುಂತಾದ ಕಡೆಯು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತದೆ. ಇದಲ್ಲದೆ ಗುರಗಾಂವ್ ಮತ್ತು ಚೆನೈ, ಸಾಗರೋತ್ತರದಲ್ಲಿ ಕನ್ನಡ ಸಂಸ್ಥೆ, ಅಮೇರಿಕಾದ, ಸಿಂಗಾಪುರ್, ದುಬೈ , ಮಸ್ಕಟ್, ದಕ್ಷಿಣ ಕೊರಿಯಾ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಮೊದಲಾದ ಕಡೆಗಳಲ್ಲಿ ನೆಲೆಸಿರುವ ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಾರೆ.

✍🙏 ಆಚರಣೆಯ ತಿಂಗಳು

ನವೆಂಬರ್ ೧ ರಂದು ಅಧಿಕೃತವಾಗಿ ಕನ್ನಡ ರಾಜ್ಯೋತ್ಸವವು ಆಚರಣೆಯಾದರೂ, ನವೆಂಬರ್ ತಿಂಗಳ ಮೊದಲ ದಿನ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ನವೆಂಬರ್ ೧ ಸಾರ್ವಜನಿಕ ರಜೆ ಇರುತ್ತದೆ. ಈ ದಿನಗಳಲ್ಲಿ ಕನ್ನಡ ಬಾವುಟಸರ್ಕಾರದ ಪ್ರಮುಖ ಕಛೇರಿಯ ಮೇಲೆ ಎಲ್ಲೆಲ್ಲಿಯೂ ಹಾರಾಡುತ್ತಿರುತ್ತದೆ.

ಅಂದಿನಿಂದ ಇಂದಿನವರೆಗೂ ಕನ್ನಡಿಗರು ಕನ್ನಡನಾಡಿನ ಸಂಸ್ಕೃತಿ ಸಂಪ್ರದಾಯಗಳ ಉಳಿವಿಗಾಗಿ ಶ್ರಮಿಸುತ್ತಾ ಬರುತಿದ್ದಾರೆ ಹಾಗೆಯೆ ನಾವು ಕನ್ನಡ ನಾಡುನುಡಿಗಾಗಿ ತ್ಯಾಗ,ತಾಳ್ಮೆ ,ಪ್ರೀತಿ ,ಸಹನೆಯ ಮನೋಭಾವಗಳನ್ನೂ ಬೆಳೆಸಿ ಉಳಿಸಿಕೊಂಡೂ ಮುಂದಿನ ಪ್ರಜೆಗಳಿಗೆ ಮಾದರಿಯಾಗಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ. ಬ್ರಿಟೀಷ ಆಡಳಿತದಲ್ಲಿ ೧೯ ಜಿಲ್ಲೆಗಳನ್ನು ಹೊಂದಿದ್ದ ಕರ್ನಾಟಕ,ನಂತರ ಸುಲಭ ಆಡಳಿತಕ್ಕಾಗಿ ಕರ್ನಾಟಕ ಹೊಸ ಜಿಲ್ಲೆಗಳನ್ನು ರಚಿಸಿಕೊಂಡಿತು. ಬೆಂಗಳೂರು ನಗರ ಬೆಳೆದಂತೆ ೧೯೮೩ ರಲ್ಲಿ ನಗರ ಮತ್ತು ಗ್ರಾಮಾಂತರ ಜಿಲ್ಲೆ ಎಂದು ಪ್ರತ್ಯೆಕಿಸಲಾಯಿತು ಕರ್ನಾಟಕದ ಜನತೆಯ ಬೇಡಿಕೆಯಿಂದಾಗಿ ೧೯೯೭ ರಲ್ಲಿ ಜೆ.ಎಚ್ .ಪಟೇಲರು ೭ ಹೊಸ ಜಿಲ್ಲೆಗಳನ್ನೂ ರಚಿಸಿದರು ದಾವಣಗೆರೆ,ಚಾಮರಾಜನಗರ ,ಬಾಗಲಕೋಟೆ ,ಹಾವೇರಿ ಉಡುಪಿ ,ಕೊಪ್ಪಳ ,ಗದಗ ಇವು ಆಗ ಅಸ್ತಿತ್ವಕ್ಕೆ ಬಂದ ಜಿಲ್ಲೆಗಳು ೨೦೦೭ರಲ್ಲಿ ಎಚ್ .ಡಿ.ಕುಮಾರಸ್ವಾಮಿಯವರು ರಾಮನಗರವನ್ನು ಬೆಂಗಳುರ ಗ್ರಾಮಾಂತರ ಜಿಲ್ಲೆಯಿಂದ ,ಚಿಕ್ಕ ಬಳ್ಳಾಪುರವನ್ನು ಕೋಲಾರದಿಂದ ಬೇರ್ಪಡಿಸಿ ಎರಡು ಹೊಸ ಜಿಲ್ಲೆಗಳನ್ನು ರಚಿಸಿದರು ಈಗ ಕರ್ನಾಟಕದಲ್ಲಿ ೩೦ ಜಿಲ್ಲೆಗಳು .ಅಷ್ಟೇ ಅಲ್ಲ ಕನ್ನಡ ನಾಡಿನ ಕಲೆ,ಸಂಸ್ಕೃತಿ ಉಡುಗೆ ತೊಡುಗೆಗೆ ವಿದೇಶಿಗರು ಮಾರು ಹೋಗಿದ್ದಾರೆ ಇಂತಹ ನಾಡಿನಲ್ಲಿ ಬಾಳುತ್ತಿರುವ ನಾವುಗಳೇ ದನ್ಯರು ಅಲ್ಲದೇ ಕರ್ನಾಟಕದಲ್ಲಿ ಅಪಾರವಾದ ಬೆಲೆಬಾಳುವ ಖನಿಜ ಸಂಪತ್ತು ಇದ್ದು ರಾಜಕೀಯದ ಪ್ರಭಾವಿ ಜನ ಹಾಳು ಮಾಡದಂತೆ ಕಾಪಾಡಬೇಕಿದೆ ಉಳಿಸಲು ಕರ್ನಾಟಕದ ಜನತೆ ಕೈ ಕಟ್ಟಿ ನಿಲ್ಲಬೇಕಿದೆ .ಹಾಗೆಯೆ ನಾವೆಲ್ಲ ಕನ್ನಡ ಮಾತೆಯ ಮಡಿಲಲ್ಲಿ ಕನ್ನಡಿಗರಾಗಿ ಬಾಳೋಣ.

*ಉಸಿರಾಗಲಿ ಕನ್ನಡ, ಹಸಿರಾಗಲಿ ಕನ್ನಡ.*

ಸತ್ಯವೇ ಭಗವಂತನೆಂಬ ಪುಟ್ಟಗೌರಿಯ ಕ

ಸತ್ಯವೇ ಭಗವಂತನೆಂಬ ಪುಟ್ಟಗೌರಿಯ ಕಥೆಯಿದು-

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊಳಿರುವ
ಸೀರ್ಯಲ್ ನೋಡೋ ಮಹಿಳೆಯ
ಪರಿಯನೆಂತು ಪೇಳ್ವೆನು

ಮಳೆಯ ಊರಿನ ಮನೆಯ ಒಳಗೆ
ಕೆಲಸ ಮುಗಿಸಿ ಕುಳಿತ ಮಹಿಳೆಯು
ಧಾರಾವಾಹಿಗಳೆಲ್ಲವನ್ನೂ
ಬಳಿಗೆ ಕರೆದಳು ಹರುಷದಿ

ಲಕ್ಷ್ಮಿ ಬಾರೆ ರಾಧ ಬಾರೆ
ಅಶ್ವಿನೀ ನಕ್ಷತ್ರ ಬಾರೆ
ಪುಟ್ಟ ಗೌರೀ ನೀನು ಬಾರೆ
ಎಂದು ಮಹಿಳೆಯು ಕರೆದಳು

ಆಂಟಿ ಕರೆದಾ ದನಿಯ ಕೇಳಿ
ಎಲ್ಲರೂ ಅಲ್ ಬಂದು ನಿಂತು
ಚೆಲ್ಲಿ ಸೂಸಿ ಕಣ್ಣೀರ್ಗರೆಯಲು
ಅಲ್ಲಿ ತುಂಬಿತು ಬಿಂದಿಗೆ

IIಸತ್ಯವೇ ಭಗವಂತನೆಂಬ ಪುಟ್ಟಗೌರಿಯ ಕಥೆಯಿದುII

ಹಬ್ಬಿದಾ ಮಲೆ ಮಧ್ಯದೊಳಗೆ
ಗ್ರಾಫಿಕ್ಸೈತಾನೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು

ಸಿಡಿದು ರೋಷದಿ ಮೊರೆಯುತಾ ಹುಲಿ
ಗುಡುಗುಡಿಸಿ ಭೋರಿಡುತ ಚಂಗನೆ
ದುಡುಕಲೆಗರಿದ ರಭಸಕಂಜಿ
ಓಡಿ ಹೋದವು ಉಳಿದವು

ಪುಟ್ಟಗೌರಿ ಎಂಬ ಹುಡುಗಿ
ತನ್ನ ಗಂಡನ ನೆನೆದುಕೊಂಡು
ಮತ್ತೆ ಸುಖವಾಗಿರುವೆನೆನುತಾ
ಚೆಂದದಿ ತಾ ಬರುತಿರೆ

ಇಂದು ಎನಗಾಹಾರ ಸಿಕ್ಕಿತು
ಎಂದು ಬೇಗನೆ ಗ್ರಾಫಿಕ್ಸ್ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು

ಮೇಲೆ ಬಿದ್ದು ನಿನ್ನನೀಗಲೇ
ಬಿಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಗ್ರಾಫಿಕ್ಸ್ ವ್ಯಾಘ್ರನು ಕೂಗಲು

ಒಂದು ಬಿನ್ನಹ ಹುಲಿಯೇ ಕೇಳು
ಮಹೆಶನಿರುವನು ಮನೆಯ ಒಳಗೆ
ಒಂದು ನಿಮಿಷದಿ ಮುಖವ ತೋರಿಸಿ
ಬಂದು ಸೇರುವೆನಿಲ್ಲಿಗೆ

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೇ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯ ನುಡಿಯುವೆಯೆಂದಿತು

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚಳಾ ಅಜ್ಯಮ್ಮನು

IIಸತ್ಯವೇ ಭಗವಂತನೆಂಬ ಪುಟ್ಟಗೌರಿಯ ಕತೆಯಿದುII

ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆ ಕೊಟ್ಟು
ಮಹೆಶ ನಿನ್ನನು ನೋಡಿ ಪೋಗುವೆನೆಂದು
ಬಂದೆನು ದೊಡ್ಡಿಗೆ

ಗೌರಿ ನೀನು ಸಾಯಲೇಕೆ
ನನ್ನ ತಬ್ಬಲಿ ಮಾಡಲೇಕೆ
ಸುಮ್ಮನಿಲ್ಲಿಯೆ ನಿಲ್ಲೆನುತ್ತ
ಮಹೆಶ ಗೌರಿಗೆ ಹೇಳಲು

ಕೊಟ್ಟ ಭಾಷೆಗೆ ತಪ್ಪಲಾರೆನು
ಕೆಟ್ಟ ಯೋಚನೆ ಮಾಡಲಾರೆನು
ನಿಷ್ಠೆಯಿಂದಲಿ ಪೋಪೆನಲ್ಲಿಗೆ
ಕಟ್ಟಕಡೆಗಿದು ಖಂಡಿತ

ಅಮ್ಮಗಳಿರ ಅಕ್ಕಗಳಿರ
ಎನ್ನ ತಾಯೊಡಹುಟ್ಟಗಳಿರ
ಮಹೆಶ ನಿಮ್ಮವನೆಂದು ಕಾಣಿರಿ
ಮುಂದೆ ಹಿಮನಿಗೆ ಗಂಡನು

ಕುಡಿದು ಬಂದರೆ ಬಯ್ಯಬೇಡಿ.
ಹೊರಗೆ ಹೋದರೆ ಹೊಡೆಯಬೇಡಿ.
ಮಹೆಶ ನಿಮ್ಮವನೆಂದು ಕಾಣಿರಿ
ಮುಂದೆ ಹಿಮನಿಗೆ ಗಂಡನು

ತಬ್ಬಲಿಯು ನೀನಾದೆ ಮಹೆಶಾ
ಹೆಬ್ಬುಲಿಯ ಬಾಯನ್ನು ಹೋಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಳು ಗಂಡನಾ

IIಸತ್ಯವೇ ಭಗವಂತನೆಂಬ ಪುಟ್ಟಗೌರಿಯ ಕತೆಯಿದುII

ಗೌರಿ ಗಂಡನ ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿನಿಂತು
ತವಕದಲಿ ಹುಲಿಗೆಂದಳು

ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಬಿಸಿರಕ್ತವಿದೆಕೋ
ಗ್ರಾಫಿಕ್ಸ್ ವ್ಯಾಗ್ರನೆ ನಿನಿದೆಲ್ಲವನುಂಡು
ಸಂತಸದಿಂದಿರು

ಪುಟ್ಟ ಗೌರಿಯ ಮಾತ ಕೇಳಿ
ಕಣ್ಣ ನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಧಾರವಾಹಿಯೆ ಮುಗಿವುದು.

ನಿರ್ಮಾಪಕನಿಗೆ ದೇವ್ರು ನೀನು 
ನಿನ್ನ ಕೊಂದರೆ ಅವ ಏನ ಪಡೆವನು
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು

ಯಾವಾಗಲೂ ಕೆಳಗಿನ ಬ್ರಾಂಡ್ ವಸ್ತುಗಳನ್ನೇ ಬಳಸಿ

ಯಾರೋ ಚಾಣಕ್ಯನನ್ನು ಕೇಳಿದರಂತೆ.

1. ವಿಷ ಎಂದರೇನು?
ಆತ ಬಹು ಸುಂದರ ಉತ್ತರ ನೀಡಿದ - ನಮ್ಮ ಅವಶ್ಯಕತೆಗಿಂತ ಏನು ಹೆಚ್ಚಾದರೂ ಅದು ವಿಷ. ಅದು ಅಧಿಕಾರವಿರಬಹುದು, ಐಶ್ವರ್ಯ, ಹಸಿವು, ದುರಾಸೆ, ಸೋಮಾರಿತನವಿರಬಹುದು, ಪ್ರೇಮ, ಆಕಾಂಕ್ಷೆ, ದ್ವೇಷ ಅಥವಾ ಯಾವುದಾದರೂ ಇರಬಹುದು
 2. ಭಯ ಎಂದರೇನು?
ಅನಿಶ್ಚಿತತೆಯನ್ನು ಒಪ್ಪದಿರುವುದು. ಆ ಅನಿಶ್ಚಿತತೆಯನ್ನು ನಾವು ಒಪ್ಪಿಕೊಂಡರೆ ಅದು ಸಾಹಸ ಆಗುತ್ತದೆ..!

3. ಅಸೂಯೆ ಎಂದರೇನು?
ಇನ್ನೊಬ್ಬರಲ್ಲಿನ ಒಳ್ಳೆಯತನವನ್ನು ಒಪ್ಪದಿರುವುದು. ಆ ಒಳ್ಳೆಯತನವನ್ನು ಒಪ್ಪಿಕೊಂಡರೆ ಅದು ಪ್ರೇರಣೆ ಆಗುತ್ತದೆ.

4. ಕೋಪ ಎಂದರೇನು?
ನಮ್ಮ ನಿಯಂತ್ರಣದಾಚೆಯ ವಿಷಯಗಳನ್ನು ಒಪ್ಪದಿರುವುದು. ಅವನ್ನು ಒಪ್ಪಿಕೊಂಡರೆ ಅದು ಸಹಿಷ್ಣುತೆ ಆಗುತ್ತದೆ.

5. ದ್ವೇಷ ಎಂದರೇನು?
ಒಬ್ಬ ಮನುಷ್ಯನನ್ನು ಅವನಿರುವಂತೆಯೇ ಒಪ್ಪದಿರುವುದು . ಆ ಮನುಷ್ಯನನ್ನು ಬೇಷರತ್ತಾಗಿ ಒಪ್ಪಿಕೊಂಡರೆ ಅದು ಪ್ರೀತಿ ಆಗುತ್ತದೆ.

ಎಲ್ಲವೂ ಒಪ್ಪಿಕೊಳ್ಳುವಿಕೆಗೆ ಸಂಬಂಧಿಸಿದ್ದು. ವಿರೋಧಿಸುವಿಕೆಯು ಒತ್ತಡವನ್ನು ಸೃಷ್ಟಿಸುತ್ತದೆ. ಒಪ್ಪಿಕೊಳ್ಳುವಿಕೆಯು ಒತ್ತಡವನ್ನು ದೂರ ಮಾಡುತ್ತದೆ.
ಶಾಂತವಾಗಿ ಆಲೋಚಿಸಿ ನೋಡಿ.

*ಯಾವಾಗಲೂ  ಕೆಳಗಿನ  ಬ್ರಾಂಡ್ ವಸ್ತುಗಳನ್ನೇ ಬಳಸಿ *

1. ತುಟಿಗಳಿಗೆ "ಸತ್ಯ "
2. ಶಬ್ದಗಳಿಗೆ "ಪ್ರಾರ್ಥನೆ "
3. ಕಣ್ಣಿಗಳಿಗೆ "ದಯೆ"
4. ಕೈಗಳಿಗೆ "ದಾನ"
5. ಹೃದಯಕ್ಕಾಗಿ "ಪ್ರೇಮ"
6. ಮುಖಕ್ಕೆ "ನಗೆ"
7. ದೊಡ್ಡವನಾಗಲು "ಕ್ಷಮೆ"