karunada geleya
dsfdsf
4 Jul 2012
18 May 2012
ಪ್ರೀತಿಸುವ ಮನಸಿರಲಿ
ಬೀಳಿಸುವ ಗುಣವಿದ್ದರೆ
ಓಡಿಸುವ ಮನಸಿರಲಿ
ಗೆಳೆಯ......
ದ್ವೇಷಿಸುವ ಗುಣವಿದ್ದರೆ
ಪ್ರೀತಿಸುವ ಮನಸಿರಲಿ
ಗೆಳೆಯ.........
ಅಳಿಸುವ ಗುಣವಿದ್ದರೆ
ನಗಿಸುವ ಮನಸಿರಲಿ
ಗೆಳೆಯ.........
ಶಿಕ್ಷಿಸುವ ಗುಣವಿದ್ದರೆ
ಕ್ಷಮಿಸುವ ಮನಸಿರಲಿ
ಗೆಳೆಯ.......
ಪರಶುರಾಮ. ಎಂ. ಎಸ್
ತೆಗ್ಗಿಹಳ್ಳಿ
14 May 2012
ಅಮ್ಮ
ಅವಳೊಂದು ಕರುಣೆಯ ಸಾಗರ
ಮಮತೆಯ ಆಗರ
ಸಿಹಿಯಂತ ಮಾತು ಬಲು ಮಧುರ
ಹೋಗೆನು ನಿನ್ನಿಂದ ನಾ ದೂರ
ನೀ ಅಗಲಿದಾಕ್ಷಣವೆ ಈ ಧರಣಿಗೆ ನಾ ಭಾರ
ಧರಣಿ ನಾ ಬಂದ ಗಳಿಗೆ
ಅಮ್ಮ ಎಂದಿತು ಈ ನನ್ನ ನಾಲಿಗೆ
ಅಂದೆ ಬೆಳೆಯಿತು ನಮ್ಮ ಸಲಿಗೆ
ನೀ ಇರಲು ನನ್ನೊಂದಿಗೆ ಸಿಹಿಯೂಟದ ಹೋಳಿಗೆ
ನಿನ್ನ ವಾತ್ಸಲ್ಯದಿಂದ ತುಂಬಿದೆ ನನ್ನ ಹೃದಯದ ಮಳಿಗೆ
ಹಸಿವೆಂಬ ಈ ನನ್ನ ಆರ್ತನಾದ
ತಟ್ಟಿತು ನಿನ್ನ ಮನಸ್ಸಿನ ಕದ
ಹಾಲು ಮಾಡಿ ಉಣಿಸಿದೆ ನಿನ್ನ ನೆತ್ತರು
ಮರೆಯನಮ್ಮ ಅದನ್ನು ನಾ ಸತ್ತರು
ಬಾಳೆಂಬ ಶಾಲೆಗೆ ನೀನೆ ಮೊದಲ ಗುರು
ಈ ನಿನ್ನ ಋಣವ ನಾ ಹೆಂಗ ತಿರಿಸಲಮ್ಮ
ನಿನಗಾಗೆ ಮುಡಿಪು ಈ ನನ್ನ ಜನ್ಮ
ಹಂಚಮ್ಮ ನಿನ್ನ ಒಲಿಮೆಯ ಪ್ರೀತಿ,
ನನ್ನಂತೆ ಇತರರಿಗೆ.
ಪರಶುರಾಮ ಎಂ.ಎಸ್
ತೆಗ್ಗಿಹಳ್ಳಿ
12 May 2012
12 Mar 2012
ಹಾರುವ ಹಕ್ಕಿನ ಹಿಡಿಯಲು ಪ್ರಯತ್ನಿಸಬೇಡಿ
* ಹಾರುವ ಹಕ್ಕಿನ ಹಿಡಿಯಲು ಪ್ರಯತ್ನಿಸಬೇಡಿ
ಪ್ರೀತ್ಸೋ ಹೃದಯವನ್ನು ದ್ವೇಷಿಸಬೇಡಿ.
* ಮುಖ ತೊಳೆದಾಗ
ಹಣೆ ತೊಳೆಯಬಹುದು
ಆದರೆ ಹಣೆ ಬರಹ
ತೊಳೆಯುದಕ್ಕೆ ಆಗುದಿಲ್ಲ.
* ಅರಳಿದ ಹೂ ಒಮ್ಮೆಯಾದರು ಬಾಡಲೇಬೇಕು
ಹುಟ್ಟಿದ ಮೇಲೆ ಮನುಷ, ಮಾನವನಾಗಿ ಬಾಳಬೇಕು.
* ಆಕಾಶಕ್ಕೆ ಏಣಿ ಹಾಕೋಕೆ ಆಗಲ್ಲ
ನಿಜ ನಿಂತಲೇ ನೋಡಬಹುದಲ್ಲಾ.
* ಸಾಯುವುದಕ್ಕೆ ಸಾವಿರ ದಾರಿ
ದೇಹಕ್ಕೆ ಜೀವ ಒಂದೇ ಬಾರಿ.
* ಮರಕ್ಕೆ ಕಲ್ಲು ಹೊಡೆದರೆ ಹಣ್ಣು ಬಿಳುತ್ತೆ
ಹುಡುಗಿಗೆ ಕಣ್ಣು ಹೊಡೆದರೆ ಹಲ್ಲು ಬಿಳುತ್ತೆ
* ಹಳ್ಳಿ ಮಂದಿ ಪ್ಯಾಟೆಗೆ
ಬಂದ್ರು
ಪ್ಯಾಟೆ ಮಂದಿ ಕಾಡಿಗೆ
ಬಂದ್ರು
ಒಟ್ಟಾರೆ ಬದುಕು
ಒಂದು ಜಟಕಾ
ಬಂಡಿ.
* ಮೀನು ಗಾಳಕ್ಕೆ
ಬಿದ್ರೆ
ಹುಡಿಗಿ ಜಗಳಕ್ಕೆ
ನಿಂತ್ರೆ
ಹೋಗುವುದು ಒಂದೇ
ಜೀವ!
ಪರಶುರಾಮ ಎಂ. ಎಸ್.
ತೆಗ್ಗಿಹಳ್ಳಿ
2 Mar 2012
ಈ ನೆನಪುಗಳೇ ಹೀಗೆ
ಕರಗುವ ಮಂಜು |
ಈ ನೆನಪುಗಳೇ ಹೀಗೆ
ಸುಮನಿದ್ದಾಗ ನಕ್ಕು ನಲಿಸಿ
ನಗುತ್ತಿರುವಾಗಲೇ ಅಳಿಸಿ
ಆ ಕಣ್ಣಿರಿನಲ್ಲಿ ಮಿಂದು..
ತಣ್ಣಗಾಗುವವು!
ಈ ನೆನಪುಗಳೇ ಹೀಗೆ
ಸುರಿಯುವವು ಒಂದೇ ಸಮನೆ
ತುಂತುರು ಮಳೆ ಹನಿಗಳಂತೆ....ಒಮ್ಮೊಮ್ಮೆ ಸದ್ದಿಲ್ಲದೇ
ಬಂದಪ್ಪಳಿಸುವವು ಬೆಂಕಿಯ ಮಳೆಯಂತೆ!
ಈ ನೆನಪುಗಳೇ ಹೀಗೆ
ಹೂವುಗಳಂತೆ ಅರಳಿದರೂ ಮುಂಜಾವನೆಯಲ್ಲಿ
ಬಾಡಿಹೋಗುವವು ಸಂಜೆಗತ್ತಲಿಗೆ!
ಅರಿಯದ ಮನಸ್ಸಿನಲ್ಲಿ ಕನಸು ಮೂಡಿಸಿ....
ಕರಗಿ ಹೋಗುವವು ಮುಂಜಾನೆಯ ಮಂಜಿನಂತೆ.
ಈ ನೆನಪುಗಳೇ ಹೀಗೆ ಕರಿಯದೆ ಬರುವ ಅಥಿತಿಯಂತೆ!
ಪರಶುರಾಮ ಎಂ, ಎಸ್
ತೆಗ್ಗಿಹಳ್ಳಿ
Subscribe to:
Posts (Atom)