ಅವಳೊಂದು ಕರುಣೆಯ ಸಾಗರ
ಮಮತೆಯ ಆಗರ
ಸಿಹಿಯಂತ ಮಾತು ಬಲು ಮಧುರ
ಹೋಗೆನು ನಿನ್ನಿಂದ ನಾ ದೂರ
ನೀ ಅಗಲಿದಾಕ್ಷಣವೆ ಈ ಧರಣಿಗೆ ನಾ ಭಾರ
ಧರಣಿ ನಾ ಬಂದ ಗಳಿಗೆ
ಅಮ್ಮ ಎಂದಿತು ಈ ನನ್ನ ನಾಲಿಗೆ
ಅಂದೆ ಬೆಳೆಯಿತು ನಮ್ಮ ಸಲಿಗೆ
ನೀ ಇರಲು ನನ್ನೊಂದಿಗೆ ಸಿಹಿಯೂಟದ ಹೋಳಿಗೆ
ನಿನ್ನ ವಾತ್ಸಲ್ಯದಿಂದ ತುಂಬಿದೆ ನನ್ನ ಹೃದಯದ ಮಳಿಗೆ
ಹಸಿವೆಂಬ ಈ ನನ್ನ ಆರ್ತನಾದ
ತಟ್ಟಿತು ನಿನ್ನ ಮನಸ್ಸಿನ ಕದ
ಹಾಲು ಮಾಡಿ ಉಣಿಸಿದೆ ನಿನ್ನ ನೆತ್ತರು
ಮರೆಯನಮ್ಮ ಅದನ್ನು ನಾ ಸತ್ತರು
ಬಾಳೆಂಬ ಶಾಲೆಗೆ ನೀನೆ ಮೊದಲ ಗುರು
ಈ ನಿನ್ನ ಋಣವ ನಾ ಹೆಂಗ ತಿರಿಸಲಮ್ಮ
ನಿನಗಾಗೆ ಮುಡಿಪು ಈ ನನ್ನ ಜನ್ಮ
ಹಂಚಮ್ಮ ನಿನ್ನ ಒಲಿಮೆಯ ಪ್ರೀತಿ,
ನನ್ನಂತೆ ಇತರರಿಗೆ.
ಪರಶುರಾಮ ಎಂ.ಎಸ್
ತೆಗ್ಗಿಹಳ್ಳಿ
No comments:
Post a Comment