karunada geleya

dsfdsf

2 Mar 2012

ಈ ನೆನಪುಗಳೇ ಹೀಗೆ

ಕರಗುವ ಮಂಜು
ಈ ನೆನಪುಗಳೇ ಹೀಗೆ
 ಸುಮನಿದ್ದಾಗ ನಕ್ಕು ನಲಿಸಿ
 ನಗುತ್ತಿರುವಾಗಲೇ ಅಳಿಸಿ
 ಆ ಕಣ್ಣಿರಿನಲ್ಲಿ ಮಿಂದು..
 ತಣ್ಣಗಾಗುವವು!

          ಈ ನೆನಪುಗಳೇ ಹೀಗೆ
            ಸುರಿಯುವವು ಒಂದೇ ಸಮನೆ
            ತುಂತುರು ಮಳೆ ಹನಿಗಳಂತೆ....
            ಒಮ್ಮೊಮ್ಮೆ ಸದ್ದಿಲ್ಲದೇ
            ಬಂದಪ್ಪಳಿಸುವವು ಬೆಂಕಿಯ ಮಳೆಯಂತೆ!

ಈ ನೆನಪುಗಳೇ ಹೀಗೆ
   ಹೂವುಗಳಂತೆ ಅರಳಿದರೂ ಮುಂಜಾವನೆಯಲ್ಲಿ
   ಬಾಡಿಹೋಗುವವು ಸಂಜೆಗತ್ತಲಿಗೆ!
   ಅರಿಯದ ಮನಸ್ಸಿನಲ್ಲಿ ಕನಸು ಮೂಡಿಸಿ....
   ಕರಗಿ ಹೋಗುವವು ಮುಂಜಾನೆಯ ಮಂಜಿನಂತೆ.
  ಈ ನೆನಪುಗಳೇ ಹೀಗೆ ಕರಿಯದೆ ಬರುವ ಅಥಿತಿಯಂತೆ! 

                                                               ಪರಶುರಾಮ ಎಂ, ಎಸ್
                                                                          ತೆಗ್ಗಿಹಳ್ಳಿ

   http://www.karunadageleya.blogspot.com/

No comments: