karunada geleya

dsfdsf

10 May 2017

ಲಕ್ಕಿ ಸ್ಟಾರ್ ರಮ್ಯಾ ಅಲಿಯಾಸ್ ದಿವ್ಯಸ್ಪಂದನ

ನಾನು ಎಂದು ಅಹಂಕರಿಸಲ ನಾನು ಯಾರು ?

ಹುಟ್ಟಿದಾಗ ನೀ ಅಳುತ್ತಿದ್ದೆ,
ಮಡಿದಾಗ ನಿನ್ನವರು ಅಳುತ್ತಿದ್ದರು.

ಹುಟ್ಟಿದಾಗ ನಿನಗೆ ವಸ್ತ್ರ ತೊಡಿಸುವರು,
ಮಡಿದಾಗ ನಿನ್ನ ವಸ್ತ್ರವ ಬಿಚ್ಚುವರು.
ಹುಟ್ಟಿದಾಗ  ಹುಡುಕುವರು ನಿನಗೆ
ನೂರೆಂಟು ನಾಮ,
ಮಡಿದಮೇಲೆ ಶವ ಎಂದೇ
                         ನಿನ್ನ ನಾಮ.

ನೀನೇನನ್ನೂ ಗಳಿಸದೇ ಬಂದೆ,
                           ಮಡಿದಾಗ
ನೀನು ಗಳಸಿದ್ದನ್ನು ಕಳದುಕೊಂಡೆ.

ಓ ಮಾನವಾ..
              ಮಡಿದಾಗ ಮಣ್ಣಲ್ಲಿ ಮರಳಾಗಿ
                              ಹೊಗುವ ನೀನು
               ನಿನ್ನದು ಎನ್ನಲು ನಿನಗೇನಿದೆ,

     ನಿನಗೆ ಜನ್ಮ ಕೊಟ್ಟವರು ಮತ್ತೊಬ್ಬರು,

     ನಿನಗೆ ಹೆಸರು ಕೊಟ್ಟದ್ದು ಮತ್ತೊಬ್ಬರು,

 ನಿನಗೆ ಜ್ಙಾನ ಹೇಳಿ ಕೊಟ್ಟದ್ದು ಮತ್ತೊಬ್ಬರು,

ಕಡೆಗೆ ನಿನ್ನ ಅಂತ್ಯ ಸಂಸ್ಕಾರ
       ನಿರ್ವಹಿಸುವುದು ಕೂಡಾ ಮತ್ತೊಬ್ಬರೇ.

ನಾನು ಎಂದು ಅಹಂಕರಿಸಲ
ನಾನು ಯಾರು ?


                              ಏನಿದೇ ನನ್ನಲ್ಲಿ ?

9 May 2017

ಅವರು ಮುಟ್ಟಿದ ಚಪ್ಪಲಿಗೆ ಗಂಜಳ

                        ಮಟಮಟ ಮಧ್ಯಾಹ್ನ. ಶೂಧ್ರನೊಬ್ಬ ಬಸವಣ್ಣನವರ ಮನೆಯ ಎದುರು ಬಂದು ನಿಲ್ಲುತ್ತಾನೆ. ಸೂರ್ಯನ ಬಿಸಿಲು ನೆತ್ತಿಯನ್ನು ಸುಡುತ್ತಿರುತ್ತದೆ. ಆತನ ನೆರಳು ಆತನ ಮೇಲಷ್ಟೇ ಬೀಳುತ್ತಿದೆ.
"ಅಮ್ಮಾವ್ರೆ" ಎಂದು ಕೂಗಿ ಕರೆಯುತ್ತಾನೆ.
"ಯಾರೂ?" ಮನೆಯೊಳಗೇ ನಿಂತು ಆ ತಾಯಿ ಕೇಳುತ್ತಾಳೆ.
"ನಾನು ಅಮ್ಮೊರೆ, ಚಪ್ಪಲಿ ಹೊಲೆದು ತಂದಿದ್ದೀನಿ."
"ಅಲ್ಲೇ ಇಟ್ಟು ಹೋಗು."
ಶೂಧ್ರ ಚಪ್ಪಲಿ ಅಲ್ಲೇ ಇಟ್ಟು ಹೊರಟುಹೋಗುತ್ತಾನೆ. ಹತ್ತು ನಿಮಿಷದ ನಂತರ ಆ ತಾಯಿ ಮನೆಯಿಂದ ಹೊರಬಂದು, ಚಪ್ಪಲಿಗಳ ಮೇಲೆ ಹಸುವಿನ ಗಂಜಳ ಚಿಮುಕಿಸಿ ತೆಗೆದುಕೊಂಡು ಹೋಗುತ್ತಾಳೆ. ಇದೆಲ್ಲವನ್ನು ನೋಡುತ್ತಿದ್ದ ಬಾಲಕ ಬಸವಣ್ಣ,
"ಯಾಕಮ್ಮ ಗಂಜಳ ಚಿಮುಕಿಸಿದೆ.? ಎಂದು ತನ್ನ ತಾಯಿಯನ್ನು ಕೇಳುತ್ತಾನೆ.
"ಅವರು ಶೂಧ್ರರು. ಮೈಲಿಗೆಯ ಜನ. ಅದಕ್ಕೆ ಅವರು ಮುಟ್ಟಿದ ಚಪ್ಪಲಿಗೆ ಗಂಜಳ ಚಿಮುಕಿಸುವ ಮೂಲಕ  ಶುದ್ಧೀಕರಿಸಿದ್ದೇನೆ ಮಗನೆ."
"ಗಂಜಳ ಚಿಮುಕಿಸಿದರೆ ಚಪ್ಪಲಿಯ ಮೈಲಿಗೆ ಹೋಗಿ ಶುದ್ಧವಾಗಬಹುದಾದರೆ, ಆ ಶೂಧ್ರರ ಮೈಮೇಲೂ ಗಂಜಳ ಚಿಮುಕಿಸುವ ಮೂಲಕ ಮೈಲಿಗೆ ತೆಗೆದು, ನಮ್ಮ ಮನೆಯೊಳಗೂ ಕರೆಯಬಹುದಿತ್ತು ಅಲ್ಲವೇನಮ್ಮ."

ಜಗತ್ತನ್ನೆ ಗೆದ್ದ ಅಲೆಕ್ಸಾಂಡರ್

ಜಗತ್ತನ್ನೆ ಗೆದ್ದ ಅಲೆಕ್ಸಾಂಡರ್ ತನ್ನ ಮರಣ ಕಾಲದ ಒಂದು ದಿನ ತನ್ನ ಸೇನಾಧಿಪತಿಯನ್ನು ಕರೆದು "ಮೂರು" ಅಪ್ಪಣೆ ಮಾಡಿದ.

೧. ನನ್ನ ಮರಣದ ನಂತರ, ನನ್ನ ಶವ ಪೆಟ್ಟಿಗೆಯನ್ನು ಇಡೀ ದೇಶಗಳಲ್ಲಿನ ಪ್ರಸಿದ್ದ ವೈದ್ಯರಾದವರು ಹೊರಬೇಕು.

೨. ನನ್ನ ಅಧಿಕಾರದ ಅವಧಿಯಲ್ಲಿ ಸಂಪಾದನೆ ಮಾಡಿದ ಎಲ್ಲ ಹೊನ್ನು, ವಜ್ರ, ಬೆಲೆ ಬಾಳುವ ಮಣಿ ಗಳನ್ನು, ನನ್ನನ್ನು ಸ್ಮಶಾನಕ್ಕೆ ಕೊಂಡೊಯ್ಯುವ ದಾರಿಯುದ್ದಕ್ಕೂ ಎಸೆದು ಚಲ್ಲಬೇಕು.

೩. ನನ್ನ ಎರಡೂ ಕೈಗಳು ಶವಪೆಟ್ಟಿಯ ಹೊರಗೆ ಎಲ್ಲರಿಗೂ ಕಾಣಿಸುವಂತೆ ಇರಿಸಬೇಕು.

ಅರ್ಥವಾಗದ ಸೇನಾಧಿಪತಿ , ಈ ತಮ್ಮ ಕೋರಿಕೆ ಏಕೆಂದು ಕೇಳಬಹುದೇ ಎಂದು ಅರಿಕೆ ಮಾಡಿಕೊಂಡ.

ಅಲೆಕ್ಸಾಂಡರ್ ನ ಉತ್ತರ ಹೀಗಿತ್ತು!

೧.ಇಡೀ ದೇಶಗಳಲ್ಲಿರು ಪ್ರಖ್ಯಾತರಾದ ವೈದ್ಯರಿಂದಲೂ ನನ್ನನ್ನು ಉಳಿಸಲು ಸಾಧ್ಯವಿಲ್ಲ ಎಂಬ ಅರಿವು ಜನರಲ್ಲಿ ಮೂಡಿಸಲು ಪ್ರಖ್ಯಾತ ವೈದ್ಯರು ನನ್ನ ಶವ ಪೆಟ್ಟಿಗೆ ಹೊರಲು ಹೇಳಿದೆ.

೨. ನನ್ನ ಆಡಳಿತ ಕಾಲದಲ್ಲಿ ಸಂಪಾದಿಸಿದ ಎಲ್ಲವೂ ಈ ಮಣ್ಣಿನಿಂದ ಬಂದಿದ್ದು ಅದನ್ನು ನಾನು ಕೊಂಡೊಯ್ಯಲಾಗದು ಹಾಗಾಗಿ ಅದು ಮತ್ತೆ ಮಣ್ಣಿನಲ್ಲೇ ಉಳಿಯಲಿದೆ ಎಂಬುದನ್ನು ಪ್ರಜೆಗಳಿಗೆ ತಿಳಿಸಲೆಂದು ಎಸಯಲಿಕ್ಕೆ ಹೇಳಿದೆ.

೩. ಇನ್ನು ಶವಪೆಟ್ಟಿಯ ಹೊರಗಿಟ್ಟ ನನ್ನ ಎರಡೂ ಕೈಗಳನ್ನೂ ಪ್ರಜೆಗಳು ನೋಡುವ ಉದ್ದೇಶ!

ನಾನು ಹುಟ್ಟದಾಗ ಬರಿಗೈಲಿ ಬಂದೆ ಮತ್ತು ಹೋಗುವಾಗ ಬರಿಗೈಯಲ್ಲಿ ಹೋಗುತ್ತಿದ್ದೇನೆ ಎಂಬುದನ್ನು ಜನರು ನೋಡಲೆಂದು ಹೇಳಿದೆ.

ನೀತಿ:
ಕಾಲವೆಂಬುದು ಎಲ್ಲಕ್ಕೂ ಮೀರಿದ್ದು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬದುಕಿರುವಷ್ಟು ದಿನ, ಸಮಯ ಉತ್ತಮ ಕೆಲಸವನ್ನು ಮಾಡಬೇಕು. ಅವುಗಳು ಮಾತ್ರವೇ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ. ಗಳಿಸಿದ ವಸ್ತುಗಳಾವುವು ನಮ್ಮೊಡನೆ ಬರಲಾರವು.


ಗಂಡ ಮತ್ತು ಹೆಂಡತಿಯ ನಡುವೆ ನಡೆದ ಸಂಭಾಷಣೆ

ಗಂಡ ಮತ್ತು ಹೆಂಡತಿಯ ನಡುವೆ ನಡೆದ ಸಂಭಾಷಣೆ...
ಹೆಂಡತಿ ಐದಾರು ಪ್ರಶ್ನೆಗಳನ್ನ ಕೇಳುತ್ತಾಳೆ. ಅದಕ್ಕೆ ಗಂಡ ಸಮಾಧಾನ ಮತ್ತು ಸರಳವಾಗಿ ಉತ್ತರಿಸುತ್ತಾನೆ...
ಅದರೆ ಆಮೇಲೆ ಗಂಡ ಕೇಳುವ ಒಂದು ಪ್ರಶ್ನೆಗೆ ಹೆಂಡತಿ ಉತ್ತರಿಸಿ ಎರಡನೇ ಪ್ರಶ್ನೆಗೆ ಮುಖಿ ಆಗುತ್ತಾಳೆ...

ಹೆಂಡತಿ:-ನೀವು ಬಿಯರ್ ಕುಡಿತ್ತಿರ?

ಗಂಡ:-ಹೌದು.

ಹೆಂಡತಿ:-ಒಂದು ದಿನಕ್ಕೆ ಎಷ್ಟು ಬಿಯರ್ ಕುಡಿತ್ತಿರ?

ಗಂಡ:-ಮೂರು

ಹೆಂಡತಿ:-ಒಂದು ಬಿಯರ್ ಗೆ ಎಷ್ಟು ದುಡ್ಡು ಕೊಡ್ತೀರ?

ಗಂಡ:-ಐದು ಡಾಲರ್

ಹೆಂಡತಿ:-ಎಷ್ಟು ವರ್ಷದಿಂದ ಬಿಯರ್ ಕುಡಿತ ಇದ್ದೀರಾ.?

ಗಂಡ:- 20 ವರ್ಷ

ಹೆಂಡತಿ:-ಸೊ, ಒಂದು ಬಿಯರ್ ಬೆಲೆ 5 ಡಾಲರ್ ಮತ್ತು ದಿನಕ್ಕೆ 3 ಬಿಯರ್, ಹಾಗಾದರೆ ತಿಂಗಳಿಗೆ 450 ಡಾಲರ್ ಬಿಯರ್ ಗಾಗಿ ಖರ್ಚು ಮಾಡ್ತೀರ.
 ಒಂದು ವರ್ಷಕ್ಕೆ  5400 ಡಾಲರ್, ಸರಿನ...?

ಗಂಡ :- ಸರಿ


ಹೆಂಡತಿ :-ಒಂದು ವರ್ಷಕ್ಕೆ 5400 ಡಾಲರ್ ಅಂದ್ರೆ, 20 ವರ್ಷಕ್ಕೆ 1,08,000 ಡಾಲರ್... ಸರಿನ..?

ಗಂಡ:-ಸರಿ

ಹೆಂಡತಿ:-ನಿಮಗೆ ಗೊತ್ತ ನೀವು ಏನಾದ್ರು 20 ವರ್ಷದಿಂದ ಬಿಯರ್ ಕುಡಿಯದೆ ಇದ್ದಿದ್ರೆ, ಇಷ್ಟೊತ್ತಿಗೆ ನೀವು ಒಂದು ವಿಮಾನ ತಗೋಬಹುದಿತ್ತು.

ಗಂಡ:- ನೀನು ಬಿಯರ್ ಕುಡಿತ್ತಿಯ ?

ಹೆಂಡತಿ :- ಇಲ್ಲ...


ಗಂಡ:- ಎಲ್ಲಿ ನಿನ್ನ ವಿಮಾನ...?😜😜😜

ನಾನು ಅವರು ಊಟ ಮಾಡುವುದನ್ನೇ ನೋಡಿ ನಿಂತೆ.

ಹೋಟೆಲ್ ಮಾಲಿಕ ಎಲೆಯಿಟ್ಟು ಊಟ ಬಡಿಸಲು ಬಗ್ಗುತಿದ್ದಂತೆ ಆ ವ್ಯಕ್ತಿ ಕೇಳಿದರು.....

ಊಟಕ್ಕೆ ಎಷ್ಟಾಗುತ್ತದೆ?

ಮಾಲಿಕ ಉತ್ತರಿಸಿದರು....

ಮೀನು ಬೇಕಿದ್ದರೆ ೫೦ ರೂಪಾಯಿ, ಮೀನು ಬೇಡವಾದರೆ ೩೦ ರೂಪಾಯಿ....

ಆ ವ್ಯಕ್ತಿ ತನ್ನ ಹರಿದ ಅಂಗಿಯ ಕಿಸೆಯಿಂದ ತೆಗೆದ ಹತ್ತು ರೂಪಾಯಿ ಯನ್ನು ಮಾಲಿಕನತ್ತ ಚಾಚುತ್ತಾ...

ನನ್ನ ಕೈಯಲ್ಲಿ ಇದುವೇ ಇರೋದು..
ಇದಕ್ಕೆ ಸಿಕ್ಕುವುದು ಕೊಟ್ಟರೆ ಸಾಕು.... ಬರೀ ಅನ್ನವಾದರೂ ಸಾಕು..

ಹಸಿವು ನೀಗಿದರೆ ಸಾಕು..

ನಿನ್ನೆ ಮಧ್ಯಾಹ್ನದಿಂದ ಏನೂ ತಿಂದಿಲ್ಲ....

ಅದು ಹೇಳಬೇಕಾದರೆ ಅವರ ಮಾತುಗಳು ತಡವರಿಸಿದವು....

ಹೋಟೆಲ್ ಮಾಲಿಕ ಮೀನು ಬಿಟ್ಟು ಬಾಕಿ ಎಲ್ಲಾ ಅವರಿಗೆ ಬಡಿಸಿದರು....

ನಾನು ಅವರು ಊಟ ಮಾಡುವುದನ್ನೇ ನೋಡಿ ನಿಂತೆ... ಅವರ ಕಣ್ಣಿನಿಂದ ಕಣ್ಣೀರು ಸಣ್ಣದಾಗಿ ಕೆಲ ಜಾರುತಿತ್ತು.ಅದನ್ನು ಉಜ್ಜಿಕೊಂಡು ಸಣ್ಣ ಮಗುವಿನಂತೆ ನಿಧಾನವಾಗಿ ಊಟಮಾಡುವುದನ್ನ ಕಂಡ ಪಕ್ಕದಲ್ಲಿ ಕುಳಿತ ವ್ಯಕ್ತಿ ಕೇಳಿದರು...

ನೀವ್ಯಾಕೆ ಅಳುತಿದ್ದೀರಾ?

ಅವರು ಕೇಳಿದ ವ್ಯಕ್ತಿಯ ಮುಖವನ್ನ ನೋಡಿ ಕಣ್ಣನ್ನು ಉಜ್ಜಿಕೊಂಡು ಹೇಳಿದರು....

ನನ್ನ ಕಳೆದು ಹೋದ ಜೀವನವನ್ನು ನೆನೆದು ಕಣ್ಣೀರು ಬಂತು.. ಮೂರು ಮಕ್ಕಳು ನನಗೆ ಎರಡು ಗಂಡು, ಒಂದು ಹೆಣ್ಣು...
ಮೂರು ಜನರಿಗೂ ಒಳ್ಳೆಯ ಕೆಲಸವಿದೆ... ನನಗೆ ಸಿಕ್ಕದ ಎಲ್ಲಾ ಸೌಭಾಗ್ಯ ವನ್ನು ನಾನು ಅವರಿಗೆ ನೀಡಿದೆ.... ಅದಕ್ಕಾಗಿ ನಾನು ಕಳೆದು ಕೊಂಡದ್ದು ನನ್ನ ಯೌವನ ವನ್ನು.... ಇಪ್ಪತ್ತೆಂಟು ವರುಷದ ಪ್ರವಾಸ ಜೀವನ.....

ಎಲ್ಲದಕ್ಕೂ ನನ್ನ ಬೆನ್ನೆಲುಬಾಗಿದ್ದ ಅವಳು ಮೊದಲೇ ನನ್ನನ್ನು ಒಂಟಿಯಾಗಿಸಿ ಹೊರಟು ಹೋದಳು.... ಆಸ್ತಿ ಪಾಲು ಮಾಡುವವರೆಗೆ ನಾನಂದರಾಯಿತು ನನ್ನ ಮಕ್ಕಳು, ಸೊಸೆಯಂದಿರಿಗೆ. ಪಾಲು ಮಾಡುತಿದ್ದಂತೆ ನಾನು ಅವರಿಗೆ ಭಾರವಾಗತೊಡಗಿದೆ.... ಮುಟ್ಟದಕ್ಕೆಲ್ಲಾ ನನ್ನನ್ನು ದೂರಲಾರಂಭಿಸಿದರು... ನಾನು ಒಬ್ಬ ಮುದುಕನಲ್ವಾ? ಆ ಒಂದು ಪರಿಗಣನೆಯಾದರು ಕೊಡಬಹುದಿತ್ತಲ್ಲಾ? ಅದೂ ಇಲ್ಲ... ಅವರ ಅಹಾರ ಸೇವನೆಯ ನಂತರವೇ ನಾನು ಕುಳಿತುಕೊಳ್ಳುತಿದ್ದೆ. ಆದರೂ ಬಯ್ಯುತಿದ್ದರು.. ಆಹಾರವೆಲ್ಲಾ ಕಣ್ಣೀರು ಬಿದ್ದು ಉಪ್ಪುರಸ‌ವಾಗುತಿತ್ತು  ತಿನ್ನುವಾಗ..ಮೊಮ್ಮಕ್ಕಳು ಕೂಡಾ ನನ್ನಲ್ಲಿ ಮಾತಾಡುತಿರಲಿಲ್ಲ... ಕಾರಣ ಮತನಾಡುವುದ ಕಂಡರೆ ಮಕ್ಕಳು ಅವರನ್ನು ಬಯ್ಯುತಿದ್ದರು... ಯಾವಾಗಳು ಅವರದು ಒಂದೇ ಮಾತು ಎಲ್ಲಿಗಾದರು ಹೊರಟು ಹೋಗಬಾರದೇ ಎಂದು... ಮರುಭೂಮಿಯಲ್ಲಿ ಬೆವರು ಸುರಿಸಿ ದುಡಿದು ಉಂಟುಮಾಡಿದ ಹಣದಲ್ಲಿ , ತಿನ್ನದೆಯೂ ಮಲಗದೆಯೂ ನಾನೂ ಅವಳೂ ಕೂಡಿ ಇಟ್ಟ ಹಣದಲ್ಲಿ ಕಟ್ಟಿದ ಮನೆ... ಅವಳ ನೆನಪುಗಳು ಮಲಗಿರೋದು ಆ ಮನೆಯಲ್ಲಿ. ಬಿಟ್ಟು ಹೋಗಲು ಮನಸು ಕೇಳಲಿಲ್ಲ.
ಅದರೇ ನಿನ್ನೆ ಹೊರಟು ಬಿಟ್ಟೆ... ಸೊಸೆಯ ಒಡವೆ ಕದ್ದೆ ಎಂದು ಮಗ ನನ್ನಲ್ಲಿ ಸಿಟ್ಟುಗೊಂಡ. ಹೊಡೆದಿಲ್ಲ ಭಾಗ್ಯಕ್ಕೆ...  ಇನ್ನೂ ಅಲ್ಲಿ ನಿಂತರೆ ಅದೂ ನಡೆಯಬಹುದು.. "ಅಪ್ಪನಿಗೆ ಹೊಡೆದ ಮಗ" ಎಂಬ ಹೆಸರು ಬರಬಾರದಲ್ಲ.,.. ಸಾಯಲು ಭಯವಿಲ್ಲ  ಅಲ್ಲದೆ ಇನ್ಯಾರಿಗೆ ಬೇಕಾಗಿ ಬದುಕಬೇಕು.

ಅವರು ಪೂರ್ತಿ ಊಟ ಮಾಡದೆ ಎದ್ದರು.. ತನ್ನಲ್ಲಿರುವ ಹತ್ತು ರೂಪಾಯಿ ಮಾಲಿಕರೆಡೆಗೆ ಚಾಚಿದರು.. ಮಾಲಕರಂದರು ಬೇಡ ಕೈಯಲ್ಲಿ ಇರಲಿ....

ಯಾವಾಗ ಬೇಕಿದ್ದರು ಇಲ್ಲಿಗೆ ಬರಬಹುದು...

ನಿಮಗಿರುವ ಊಟ ಇಲ್ಲಿ ಇರಬಹುದು..

ಆದರೆ ಆ ವ್ಯಕ್ತಿ ಆ ಹತ್ತು ರೂಪಾಯಿ ಅಲ್ಲಿ ಇಟ್ಟು ಹೇಳಿದರು

ತುಂಬಾ ಸಂತೋಷವಾಯಿತು ನಿಮ್ಮ ಉಪಕಾರಕ್ಕೆ.. ಧರ್ಮಕೆ ತಿಂದು ಅಭ್ಯಾಸವಿಲ್ಲ. ಏನೂ ತಿಳಿಯದಿರಿ.. ಬರ್ತೀನಿ ಇನ್ನೊಮ್ಮೆ ಕಾಣುವಾ ಎಂದು ಅವರ ಗಂಟನ್ನು ಎತ್ತಿಕೊಂಡು ಎಲ್ಲಿಗೆಂದಿಲ್ಲದೆ ಅವರಷ್ಟಕೆ ನಡೆದು ಹೋದರು...
ಆ ವ್ಯಕ್ತಿ ನನ್ನ ಮನಸಿಗೆ ಉಂಟು ಮಾಡಿದ ಆ ಗಾಯ ಈಗಲೂ ಒಣಗಲಿಲ್ಲ.

ಅದ್ಯಾಕೆ ಎಲ್ಲಾ ಹಸುರು ಎಲೆಗಳೂ ಒಂದು ದಿನ ಹಣ್ಣೆಲೆಯಾಗುತದೆಯೆಂದು  ಚಿಂತಿಸುತಿಲ್ಲ.???


( ಮೂಲ ಮಲಯಾಳ ,ಅನುವಾದ ನಾ.ಪಿ. ಪೆರಡಾಲ)
ನನ್ನ ವಾಟ್ಸಾಪ್ ಗೆ ಬಂದ ಕಥೆಗಳು