karunada geleya

dsfdsf

27 Sept 2012

ಬೆಳಕು ಕೊಡೋದ್ರಲ್ಲೇನಿದೆ ಮಜಾ?



"ಮುಂಬತ್ತಿ ಹಾಗೆ ಮೈ ಸುಟ್ಕೊಂಡು ಬೆಳಕು ಕೊಡೋದ್ರಲ್ಲೇನಿದೆ ಮಜಾ?
ಬಲ್ಬ್ ಆಗೋದು ಬೆಸ್ಟ್. ನೀನೂ ಇರ್ತೀಯ, ಬೆಳಕೂ ಕೊಡ್ತೀಯ.
ಈ ಉರಿಯೋ ವ್ಯವಹಾರ ಎಲ್ಲ ಯಾಕೆ?"
ಅನ್ನುತ್ತೆ ಒಂದು ಮೊಬೈಲ್ ಮೆಸೇಜು.
ಕಾಲ ಬದಲಾಗಿದೆ.
ಮೌಲ್ಯ ಇರಬೇಕು.
ದಾರಿ ಹೊಸತಿರಬೇಕು.
ಈ ದೀಪಾವಳಿ, ಅಂಥ ದಾರಿ ತೋರಿಸಲಿ....
ದೀಪಾವಳಿ ಶುಭಾಶಯಗಳು, ದಿನ ಮುಂಚಿತವಾಗಿ

9 Aug 2012

ಪ್ರೀತಿಯ ಹುಡುಗಿ

ಹೇ ಮಾನವ
         ಈ ದಿನ ನಾನ್ನು ಒಬ್ಬಂಟ್ಟಿಯಾಗಲು ನೀನೆ ಕಾರಣ.
         ನಿನ್ನ ಅನುಕೂಲಕ್ಕಾಗಿ ನಿನ್ನು ಮೊಬೈಲ್ ಎಂಬ ಮಾಯಾ ಜಾಲದ  ತಾಂತ್ರಿಕತೆಯಗೆ ಮಾರು ಹೋದೆ ಆದರೆ
ಅದು ನನಗೆ ಜೇಡರ ಬಲೆಯಂತೆ ನನ್ನನು ದಿನೇ ದಿನೇ ನನನ್ನು ಕೊಲ್ಲುತಿದೆ. ನನ್ನ ವಂಶಾವಳಿನೆ ಶಾಶ್ವತವಾಗಿ ಕೊಲ್ಲುತಿದೆ. ನನ್ನ ನೋವು ಗೊತ್ತಾಗುವುದು ನಿನ್ನ ಪ್ರೀತಿಯ ಹುಡುಗಿ  ಕೈ ಕೊಟ್ಟು ಹೋದಾಗ.           

8 Aug 2012

ಹುಡುಗಾಟ

ಹುಡುಗಾಟ :
     ನಾವು ಆಡಿ ಬೆಳೆದಿದ್ದು ಇಂತ ಆಟಗಳನಾಡಿ ಆದರೆ ಇಂತಹ ಒಂದು ಅವಕಾಶ ನಿಮಗೂ ಸಿಕ್ಕಿದರೆ ಮಿಸ್ ಮಾಡಕೊಬೇಡಿ.
ಇಂಥ ಒಂದು ಜೀವನ ಸಿಗುವದು ಕೇವಲ ಮಕ್ಕಳಾಗಿದ್ದಾಗ ಮಾತ್ರ. ತಿರುಗಿ ಎಂದಿಗೂ ಬರದಂತಹದು ಜೀವನ.
ಹುಟ್ಟುವುದು ಒಮ್ಮೆ  ಸಾಯುವದು ಒಮ್ಮೆಅದರ ನಡುವೆ ಹೀಗು ಸ್ವಲ್ಪ ಹುಡುಗಾಟ ತುಂಟಾಟ  ಇರಲಿ. ಮಕ್ಕಳನಾ ಮಕ್ಕಳ ಜೊತೆ ಮನಸ್ಸು ಬಿಚ್ಚಿ ಆಡಲು ಬಿಡಿ. ಅವರಿಗೆ ನಿಮ್ಮ ಭಯ  ಒಂದು ಮಿತ್ತಿಯಲ್ಲಿರಲ್ಲಿ. ಮಕ್ಕಳು ಕೇವಲ ಪುಸ್ತಕದ ಹುಳಗಲಾದ್ದರೆ ಸಾಲದು ದ್ಯೆಹಿಕವಾಗಿ ಪ್ರಬಲರಾಗಿರಬೇಕ್ಕು. ಮಕ್ಕಳನ ಚಿಕ್ಕ ವಯಸ್ಸಿನಲ್ಲೆ ಇಜುವುದನ್ನು ಕಲಿಸಿ  ನೀರಿನಲ್ಲಿ ಬಯವಿಲ್ಲದೆ ಎಂಥ ಕಷ್ಟದ  ಪರಿಸ್ತಿತಿಯಲು ಪಾರಗಬಲರು.           








     

18 May 2012

ಪ್ರೀತಿಸುವ ಮನಸಿರಲಿ

ಬೀಳಿಸುವ ಗುಣವಿದ್ದರೆ
ಓಡಿಸುವ ಮನಸಿರಲಿ
                       ಗೆಳೆಯ......
ದ್ವೇಷಿಸುವ ಗುಣವಿದ್ದರೆ
ಪ್ರೀತಿಸುವ ಮನಸಿರಲಿ
                      ಗೆಳೆಯ.........
ಅಳಿಸುವ ಗುಣವಿದ್ದರೆ
ನಗಿಸುವ ಮನಸಿರಲಿ
                     ಗೆಳೆಯ.........
ಶಿಕ್ಷಿಸುವ ಗುಣವಿದ್ದರೆ
ಕ್ಷಮಿಸುವ ಮನಸಿರಲಿ
                       ಗೆಳೆಯ.......
                                    ಪರಶುರಾಮ. ಎಂ. ಎಸ್
                                         ತೆಗ್ಗಿಹಳ್ಳಿ

14 May 2012

ಅಮ್ಮ

ಅವಳೊಂದು ಕರುಣೆಯ ಸಾಗರ
ಮಮತೆಯ ಆಗರ
ಸಿಹಿಯಂತ ಮಾತು ಬಲು ಮಧುರ
ಹೋಗೆನು ನಿನ್ನಿಂದ ನಾ ದೂರ
ನೀ ಅಗಲಿದಾಕ್ಷಣವೆ ಈ ಧರಣಿಗೆ ನಾ ಭಾರ
 
ಧರಣಿ ನಾ ಬಂದ ಗಳಿಗೆ
ಅಮ್ಮ ಎಂದಿತು ಈ ನನ್ನ ನಾಲಿಗೆ
ಅಂದೆ ಬೆಳೆಯಿತು ನಮ್ಮ ಸಲಿಗೆ
ನೀ ಇರಲು ನನ್ನೊಂದಿಗೆ ಸಿಹಿಯೂಟದ ಹೋಳಿಗೆ
ನಿನ್ನ ವಾತ್ಸಲ್ಯದಿಂದ ತುಂಬಿದೆ ನನ್ನ ಹೃದಯದ ಮಳಿಗೆ
 
ಹಸಿವೆಂಬ ಈ ನನ್ನ ಆರ್ತನಾದ
ತಟ್ಟಿತು ನಿನ್ನ ಮನಸ್ಸಿನ ಕದ
ಹಾಲು ಮಾಡಿ ಉಣಿಸಿದೆ ನಿನ್ನ ನೆತ್ತರು
ಮರೆಯನಮ್ಮ ಅದನ್ನು ನಾ ಸತ್ತರು
ಬಾಳೆಂಬ ಶಾಲೆಗೆ ನೀನೆ ಮೊದಲ ಗುರು
 
ಈ ನಿನ್ನ ಋಣವ ನಾ ಹೆಂಗ ತಿರಿಸಲಮ್ಮ
ನಿನಗಾಗೆ ಮುಡಿಪು ಈ ನನ್ನ ಜನ್ಮ
ಹಂಚಮ್ಮ ನಿನ್ನ ಒಲಿಮೆಯ ಪ್ರೀತಿ,
ನನ್ನಂತೆ ಇತರರಿಗೆ.
 
                                         
                                                                        ಪರಶುರಾಮ ಎಂ.ಎಸ್
                                                ತೆಗ್ಗಿಹಳ್ಳಿ