karunada geleya
dsfdsf
27 Jul 2012
6 Jul 2012
4 Jul 2012
18 May 2012
ಪ್ರೀತಿಸುವ ಮನಸಿರಲಿ
ಬೀಳಿಸುವ ಗುಣವಿದ್ದರೆ
ಓಡಿಸುವ ಮನಸಿರಲಿ
ಗೆಳೆಯ......
ದ್ವೇಷಿಸುವ ಗುಣವಿದ್ದರೆ
ಪ್ರೀತಿಸುವ ಮನಸಿರಲಿ
ಗೆಳೆಯ.........
ಅಳಿಸುವ ಗುಣವಿದ್ದರೆ
ನಗಿಸುವ ಮನಸಿರಲಿ
ಗೆಳೆಯ.........
ಶಿಕ್ಷಿಸುವ ಗುಣವಿದ್ದರೆ
ಕ್ಷಮಿಸುವ ಮನಸಿರಲಿ
ಗೆಳೆಯ.......
ಪರಶುರಾಮ. ಎಂ. ಎಸ್
ತೆಗ್ಗಿಹಳ್ಳಿ
14 May 2012
ಅಮ್ಮ
ಅವಳೊಂದು ಕರುಣೆಯ ಸಾಗರ
ಮಮತೆಯ ಆಗರ
ಸಿಹಿಯಂತ ಮಾತು ಬಲು ಮಧುರ
ಹೋಗೆನು ನಿನ್ನಿಂದ ನಾ ದೂರ
ನೀ ಅಗಲಿದಾಕ್ಷಣವೆ ಈ ಧರಣಿಗೆ ನಾ ಭಾರ
ಧರಣಿ ನಾ ಬಂದ ಗಳಿಗೆ
ಅಮ್ಮ ಎಂದಿತು ಈ ನನ್ನ ನಾಲಿಗೆ
ಅಂದೆ ಬೆಳೆಯಿತು ನಮ್ಮ ಸಲಿಗೆ
ನೀ ಇರಲು ನನ್ನೊಂದಿಗೆ ಸಿಹಿಯೂಟದ ಹೋಳಿಗೆ
ನಿನ್ನ ವಾತ್ಸಲ್ಯದಿಂದ ತುಂಬಿದೆ ನನ್ನ ಹೃದಯದ ಮಳಿಗೆ
ಹಸಿವೆಂಬ ಈ ನನ್ನ ಆರ್ತನಾದ
ತಟ್ಟಿತು ನಿನ್ನ ಮನಸ್ಸಿನ ಕದ
ಹಾಲು ಮಾಡಿ ಉಣಿಸಿದೆ ನಿನ್ನ ನೆತ್ತರು
ಮರೆಯನಮ್ಮ ಅದನ್ನು ನಾ ಸತ್ತರು
ಬಾಳೆಂಬ ಶಾಲೆಗೆ ನೀನೆ ಮೊದಲ ಗುರು
ಈ ನಿನ್ನ ಋಣವ ನಾ ಹೆಂಗ ತಿರಿಸಲಮ್ಮ
ನಿನಗಾಗೆ ಮುಡಿಪು ಈ ನನ್ನ ಜನ್ಮ
ಹಂಚಮ್ಮ ನಿನ್ನ ಒಲಿಮೆಯ ಪ್ರೀತಿ,
ನನ್ನಂತೆ ಇತರರಿಗೆ.
ಪರಶುರಾಮ ಎಂ.ಎಸ್
ತೆಗ್ಗಿಹಳ್ಳಿ
12 May 2012
Subscribe to:
Posts (Atom)