karunada geleya

dsfdsf

21 Jun 2024

ಹಾಲು: ಸರಿಯಾದ ಬಣ್ಣದ ಪ್ಯಾಕೆಟ್ ಆರಿಸಿಕೊಳ್ಳುವುದರ ಹಿಂದಿನ ರಹಸ್ಯ

ನಂದಿನಿ ಹಾಲು: ಸರಿಯಾದ ಬಣ್ಣದ ಪ್ಯಾಕೆಟ್ ಆರಿಸಿಕೊಳ್ಳುವುದರ ಹಿಂದಿನ ರಹಸ್ಯ ಎಲ್ಲಾದಕ್ಕೂ ನೀಲಿ ಪ್ಯಾಕೆಟ್ಟೇ ಸರಿಯಲ್ಲ ಕರ್ನಾಟಕದ ನಂದಿನಿ ಹಾಲು ಸಂಘದವರು ವೆರ್-ವೆರೈಟಿ ಹಾಲಿನ ಪ್ಯಾಕೆಟ್ಗಳನ್ನ ಮಾಡಿ ಜನರಿಗೆಲ್ಲಾ ಸಿಗೋ ಹಾಗೆ ಮಾಡಿದ್ದಾರೆ. ಹಸಿರು, ಹಳದಿ, ಕೆಂಪು, ನೀಲಿ ಅಂತ ಬೇರೆ ಬೇರೆ ಬಣ್ಣದ ಪ್ಯಾಕೆಟ್ಗಳು ಕರ್ನಾಟಕದ ಮೂಲೆ ಮೂಲೆಯಲ್ಲೂ ಸಿಗ್ತವೆ. ಯಾವ ಉಪಯೋಗಕ್ಕೆ ಯಾವ ಬಣ್ಣದ ಪ್ಯಾಕೆಟ್ ತರ್ಬೇಕು ಅನ್ನೋ ಪ್ರಶ್ನೇನ ಎಲ್ಲರೂ ಹಾಕಿಕೊಳ್ಳೋದಿಲ್ಲ. ಎಲ್ಲರೂ ಯಾವುದು ಕೊಂಡ್ಕೋತಾರೋ ಅದನ್ನೇ ತರೋದು ವಾಡಿಕೆ. ಅದು ಸಾಮಾನ್ಯವಾಗಿ ನೀಲಿ ಬಣ್ಣದ ಪ್ಯಾಕೆಟ್ಟೇ ಆಗಿರುತ್ತೆ! ಆದರೆ ನಂದಿನಿ ಹಾಲ್ನ ಸರಿಯಾಗಿ ಬಳಸಬೇಕು, ಅದರಿಂದ ಆದಷ್ಟು ಹೆಚ್ಚು ಉಪಯೋಗ ಪಡ್ಕೋಬೇಕು ಅನ್ನೋದಾದರೆ ಕೆಳಗಿನ ಮಾಹಿತಿ ಗಮನದಲ್ಲಿಡಿ... 1. ಹಂಗೇ (ಕಾಯಿಸದೆ) ಕುಡಿಯಕ್ಕೆ: ಬೆಳಗ್ಗೆ ಎದ್ದು ಹಾಲು ಕಾಯಿಸಿ ಕುಡಿಯಕ್ಕೆ ಟೈಮ್ ಇಲ್ವಾ? ಹಾಗಾದರೆ ನಂದಿನಿ ಗುಡ್ ಲೈಫ್ ಮಿಲ್ಕ್ ಪ್ಯಾಕೆಟ್ ತೊಗೊಂಡು ಹಾಗೆಯೇ ಕುಡಿಬೋದು. ಯಾಕೆ ಗೊತ್ತಾ? ಈ ಹಾಲನ್ನು ಪ್ಯಾಕೆಟಿಗೆ ಹಾಕೋ ಮುಂಚೆನೇ 137 ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲಿ 4 ನಿಮಿಷಗಳ ತನಕ ಕಾಯಿಸಿ ತಕ್ಷಣವೇ ತಣ್ಣಗೆ ಮಾಡಿರುತ್ತಾರೆ. ಅದ್ದರಿಂದ ಈ ಹಾಲಿನಲ್ಲಿ ಬ್ಯಾಕ್ಟೀರಿಯಾ ಬೆಳೆಯಕ್ಕೆ ಅವಕಾಶವಿಲ್ಲ. ಟೆಟ್ರಾ ಪ್ಯಾಕಿನಲ್ಲಿ ಹಾಕುವುದರಿಂದ ಹೊರಗಿನ ಯಾವ ಉಷ್ಣಾಂಶದಿಂದ ಹಾಲು ಒಡೆಯುವುದಿಲ್ಲ. 2. ಕಾಯಿಸಿ ಕುಡಿಯಲು: ಉಕ್ಕು ಬರುವ ತನಕ ಕಾಯಿಸಿಕೊಂಡು ಕುಡಿಯುವುದಕ್ಕೆ ನಂದಿನಿಯ ಯಾವ ಬಣ್ಣದ ಪ್ಯಾಕೆಟ್ ಬೇಕಾದರೂ ತರಬಹುದು. 3. ಕಾಫಿ ಅಥವಾ ಟೀ ಮಾಡಕ್ಕೆ: ನಂದಿನಿಯ ಹಸಿರು ಬಣ್ಣದ ಪ್ಯಾಕೆಟ್- ಹೊಮೊಜಿನೈಸೆಡ್, ಪಾಸ್ಚರೀಕರಿಸಿದ ಹಸುವಿನ ಹಾಲು ತಂದು ಮಾಡಿದರೆ ಹಾಲು ಒದಗುತ್ತದೆ. ಹೆಚ್ಚು ಲೋಟ ಕಾಫಿ/ಟೀ ಮಾಡಬಹುದು. ರುಚಿಯೂ ಚೆನ್ನ. 4. ಗಟ್ಟಿ ಕಾಫಿ ಮಾಡಕ್ಕೆ: ನಂದಿನಿಯ ತುಸು ನೇರಳೆ ಬಣ್ಣದ ಪ್ಯಾಕೆಟ್ ಅಂದರೆ ನಂದಿನಿ ಸಮೃದ್ಧಿ ಪಾಸ್ಚರೀಕರಿಸಿದ ಹಾಲು ತಂದು ಗಟ್ಟಿ ಕಾಫಿ ಮಾಡಿಕೊಳ್ಳಬಹುದು. ಪೂರ್ತಿ ಕೆನೆಯ ಅಂಶ ಈ ಹಾಲಿನಲ್ಲಿ ಇರೋ ಹಾಗೆ ಮಾಡಿರುತ್ತಾರೆ. ಆದ್ರೇನೂ ಕೆನೆ-ಕೆನೆ ಕಟ್ಟಿಕೊಳ್ಳುವುದಿಲ್ಲ. ಯಾಕಂದ್ರೆ ಹೊಮೊಜಿನೈಸ್ಡ್ ಹದಕ್ಕೆ ಮಾಡಿರುತ್ತಾರೆ. 5. ಗಟ್ಟಿ ಮೊಸರು ಮಾಡಕ್ಕೆ: ನಂದಿನಿಯ ಸ್ಪೆಶಲ್ ಹಸಿರು ಬಣ್ಣದ ಪ್ಯಾಕೆಟ್ ಅಂದರೆ ಸ್ಪೆಶಲ್ ಟೋನ್ಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳಿ. 6. ಪಾಯಸ ಅಥವಾ ಹಾಲಿನಿಂದ ಮಾಡುವ ಸಿಹಿ ಪದಾರ್ಥಗಳಿಗೆ: ನಂದಿನಿಯ ತುಸು ನೇರಳೆ ಬಣ್ಣದ ಪ್ಯಾಕೆಟ್ ಅಂದರೆ ನಂದಿನಿ ಸಮೃದ್ಧಿ ಪಾಸ್ಚರೀಕರಿಸಿದ ಹಾಲು ತಂದರೆ ತುಂಬಾ ಚೆನ್ನಾಗಿ ಆಗತ್ತೆ. "ಮಿಲ್ಕ್ ಮೈಡ್" ತರುವ ಬದಲು. 7. ಪುಟ್ಟ ಮಕ್ಕಳಿಗೆ: ನಂದಿನಿಯ ಹಸಿರು ಬಣ್ಣದ ಪ್ಯಾಕೆಟ್- ಹೊಮೊಜಿನೈಸೆಡ್, ಪಾಸ್ಚರೀಕರಿಸಿದ ಹಸುವಿನ ಹಾಲು ತಂದರೆ ಒಳ್ಳೆಯದು. ಯಾಕಂದ್ರೆ ಬೇರೆ ಪ್ಯಾಕೆಟ್ನಲ್ಲಿ ಹಸು ಹಾಲಿನ ಜೊತೆ ಎಮ್ಮೆ ಹಾಲು ಸೇರಿಕೊಂಡಿರತ್ತೆ. 8. ಹಿರಿಯರಿಗೆ: ನಂದಿನಿಯ ಗುಡ್ ಲೈಫ್ ಸ್ಲಿಮ್ಡ್ ಸ್ಕಿಮ್ ಮಿಲ್ಕ್ ಪ್ಯಾಕೆಟ್ ಕೂಡ ತೊಗೊಬಹುದು. ಇದರಲ್ಲಿ ಹೆಸರೇ ಹೇಳುವಂತೆ ಕೊಬ್ಬಿನಂಶ ಕಡಿಮೆ ಇರುವುದರಿಂದ ವಯಸ್ಸಾದವರಿಗೆ ಜೀರ್ಣಿಸಿಕೊಳ್ಳಲು ಸುಲಭ. ಇದಲ್ಲದೆ ಹಳದಿ/ಕಿತ್ತಳೆ ಬಣ್ಣದ ಪ್ಯಾಕೆಟ್ - ಪಾಸ್ಚರೀಕರಿಸಿದ ಡಬಲ್ ಟೋನ್ಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳಿ. ಯಾಕಂದ್ರೆ ಇದರಲ್ಲೂ ಕಡಿಮೆ ಕೊಬ್ಬಿನಂಶ ಇರತ್ತೆ. 9. ಕೊಬ್ಬು ಇಳಿಸಕ್ಕೆ: ಕೊಬ್ಬು ಕರಗಬೇಕು ಅಂತ ಹಾಲು ಕುಡಿಯೋದನ್ನ ನಿಲ್ಲಿಸಬಿಟ್ಟರೆ ಬೇರೆ ಪೌಷ್ಟಿಕಾಂಶಗಳ ಕೊರತೆ ಉಂಟಾಗತ್ತೆ. ಇದಕ್ಕೆ ಸುಲಭವಾಗಿ ಸಿಗುವ ನಂದಿನಿಯ ಹಳದಿ/ಕಿತ್ತಳೆ ಬಣ್ಣದ ಪ್ಯಾಕೆಟ್ - ಪಾಸ್ಚರೀಕರಿಸಿದ ಡಬಲ್ ಟೋನ್ಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳಿ. ಯಾಕಂದ್ರೆ ಇದರಲ್ಲಿ ಕಡಿಮೆ ಕೊಬ್ಬಿನಂಶ ಇರತ್ತೆ. 10. ಬೆಳೆಯುವ ಮಕ್ಕಳಿಗೆ: ಕಿತ್ತಳೆ ಬಣ್ಣದ ನಂದಿನಿಯ ಶುಭಂ ಪ್ಯಾಕೆಟ್... ಅಥವಾ ಸಂಪೂರ್ಣ ಸ್ಟ್ಯಾಂಡರ್ಡೈಸ್ಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳಿ. ಯಾಕಂದ್ರೆ ಇದರಲ್ಲಿ ಬೆಳೆಯುವ ಮಕ್ಕಳಿಗೆ ಬೇಕಾಗುವ ಕೊಬ್ಬಿನಂಶ ಇರತ್ತೆ. ಅವರ ದಿನ ನಿತ್ಯದ ಚಟುವಟುಕೆಗಳಿಗೆ ಸಾಕಷ್ಟು ಶಕ್ತಿ ಕೊಡತ್ತೆ. 11. ಬರೀ ಹಸುವಿನ ಹಾಲು ಬೇಕು ಅನ್ನುವವರಿಗೆ: ನಂದಿನಿಯ ಹಸಿರು ಬಣ್ಣದ ಪ್ಯಾಕೆಟ್- ಹೊಮೊಜಿನೈಸೆಡ್, ಪಾಸ್ಚರೀಕರಿಸಿದ ಹಸುವಿನ ಹಾಲು ತಂದರೆ ಒಳ್ಳೆಯದು. ಯಾಕಂದ್ರೆ ಬೇರೆ ಪ್ಯಾಕೆಟ್ನಲ್ಲಿ ಹಸು ಹಾಲಿನ ಜೊತೆ ಎಮ್ಮೆ ಹಾಲು ಸೇರಿಕೊಂಡಿರತ್ತೆ. 12. ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ಇರುವವರಿಗೆ: ನ್ಂದಿನಿ ಸ್ಮಾರ್ಟ್ ಡಬಲ್ ಟೋನ್ಡ್ ಹೊಮೊಜಿನೈಸೆಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳಿ. 13. ತುಂಬಾ ದಿನ ಇಟ್ಟುಕೊಳ್ಳಬೇಕಾದರೆ: ಪ್ರವಾಸಕ್ಕೆ ಹೋಗ್ಬೇಕು, ಮಕ್ಕಳಿಗೆ ಹಾಲು ಸಿಗಲ್ವಲ್ಲಾ ಅಂತ ಚಿಂತೆ ಬಂದರೆ ನಂದಿನಿಯ ಗುಡ್ ಲೈಫ್ ಟೆಟ್ರಾ ಪ್ಯಾಕ್ ತೊಗೊಳ್ಳಿ. 10 ದಿನದ ತನಕ ಹಾಲನ್ನು ಹಾಗೆ ಕುಡಿಯಬಹುದು. ಕಾಯಿಸುವುದೂ ಬೇಡ. ಟೆಟ್ರಾ ಪ್ಯಾಕಿನಲ್ಲಿ ಇರುವುದರಿಂದ ಹಾಲು ಒಡೆಯುವುದಿಲ್ಲ.

2 Jul 2022

ಪೂಜಾ ಸಾಮಗ್ರಿಗಳು, ಅಡುಗೆ ಸಾಮಗ್ರಿಗಳು, ಮತ್ತು ತರಕಾರಿಗಳ ಪಟ್ಟಿ.

ಕ್ರ.ಸಂವಿವರಕಿಲೋಗ್ರಾಂಕ್ರ.ಸಂವಿವರಕಿಲೋಗ್ರಾಂ
ಪೂಜಾ ಸಾಮಗ್ರಿಗಳುಅಡುಗೆ ಸಾಮಗ್ರಿಗಳು
1ಕುಂಕುಮ1ಸಾಸಿವೆ
2ಅರಿಸಿನ2ಜೀರಗಿ
3ವಿಭೂತಿ3ಯಾಲಕ್ಕಿ
4ಹೂವಿನ ಹಾರ4ಲವಂಗ
5ಹತ್ತಿ ಹಾರ5ಮೆಣಸು
6ತೆಂಗಿನಕಾಯಿ6ದಾಲಚಿನ್ನಿ
7ಉದಿನ ಕಡ್ಡಿ7ಶಾಜೀರಗಿ
8ಕರ್ಪುರ8ಹವೀಜ
9ಬತ್ತಿ9ಚಕ್ರಮಗ್ಗಿ
10ದೀಪದ ಎಣ್ಣೆ10ಪತ್ರರಾಜ
11ಬೆಂಕಿ ಕಡ್ಡಿ ಬುರ್ಜ11ಕಸ್ತೂರಿ ಮೋತಿ
1212ಜಾಪತ್ರಿ
1313ಜಾಜಿಕಾಯಿ
ತರಕಾರಿಗಳು14ಗಸಗಸಿ
1ಹಸಿಮೆಣಸಿನಕಾಯಿ15ಕೊತಂಬರಿ ಬೀಜ (ಧನಿಯಾ )
2ಬಳ್ಳೊಳ್ಳಿ16ಅಡುಗೆ ಸೋಡಾ
3ಉಳ್ಳಾಗಡ್ಡಿ17ಅಜಿವಾನ
4ತಪ್ಪಲ ಉಳ್ಳಾಗಡ್ಡಿ18ಕಲ್ಲುಸಕ್ಕರೆ
5ಟೊಮ್ಯಾಟೊ19ಇಂಗು
6ಬದನೆಕಾಯಿ20ಸೋಂಪು
7ಬೆಂಡೇಕಾಯಿ21ಬದಾಮಿ
8ಬಟಾಟಿ ( ಆಲುಗಡ್ಡೆ )22ಪಿಸ್ತಾ
9ದೋಡ್ಡ ಮೆಣಸಿನಕಾಯಿ23ಗೋಡಂಬಿ
10ಬೀನ್ಸ್24ಒಣ ದ್ರಾಕ್ಷಿ
11ಹಸಿರು ಬಠಾಣಿ25ಹಳದಿ ಕಲರ್ ಬುಷ್
12ಎಲೆ ಕೋಸು26ಕೇಸರಿ ಕಲರ ಬುಷ್
13ಹೂ ಕೋಸು27ಹಸಿರು ಕಲರ ಬುಷ್
14ಗಡ್ಡೆ ಕೋಸು28ಅರಸಿಣ ಪುಡಿ
15ಕೆಂಪು ಗಡ್ಡೆ ಕೋಸು (ಬೀಟ್ ರೊಟ್ )29ಸಕ್ಕರೆ
16ಸುವರ್ಣ ಗಡ್ಡೆ30ಬೆಲ್ಲ
17ಗೆಣಸು31ಚಹಾ ಪುಡಿ
18ಮರ ಗೆಣಸು32ಕಾಫೀ ಪುಡಿ
19ನಿಂಬೆಹಣ್ಣು33ಹೀರಾಬೇಸನ್
20ಗಜ್ಜರಿ34ದಾಲಡಾ
21ಸವತೆಕಾಯಿ35ತುಪ್ಪ
22ಪಾಲಕ ಪಲ್ಯೇ36ಅಡುಗೆ ಎಣ್ಣೆ
23ಹುಣಸಿ ಪಲ್ಯೇ37ಕೊಬ್ಬರಿ ಎಣ್ಣೆ
24ಮೇಂತ್ಯೆ ಪಲ್ಯೇ38ಜವಿ ಗೋಧಿ
25ಕೊತಂಬರಿ39ಗೋಧಿ
26ಪುದಿನಾ40ಗೋಧಿ ಹಿಟ್ಟು
27ಕರಿಬೇವು41ಮೈದಾ ಹಿಟ್ಟು
28ನುಗ್ಗಿಕಾಯಿ42ಜೋಳದ ಹಿಟ್ಟು
29ಕುಂಬಳ ಕಾಯಿ43ರಾಗಿ ಹಿಟ್ಟು
30ಹಿರೇಕಾಯಿ44ಸಜ್ಜೆ ಹಿಟ್ಟು
31ಚವಳಿಕಾಯಿ45ಅಕ್ಕಿ
32ಹಾಗಲಕಾಯಿ46ಕೇಸರಿ
33ತೊಂಡೆಕಾಯಿ47ರವಾ
34ಸೋರೆಕಾಯಿ48ಇಡ್ಲಿ ರವಾ
35ಮೂಲಂಗಿ49ಉಪ್ಪಿಟ್ಟು ರವಾ
3550ತೊಗರಿ ಬೇಳೆ
ಹಣ್ಣುಗಳು51ಕಡಲೆ ಬೇಳೆ
1ಬಾಳೆ ಹಣ್ಣು52ಉದ್ದಿನ ಬೇಳೆ
2ಸೇಬು53ಹೆಸರು ಬೇಳೆ
3ಬೆಣ್ಣೆ ಹಣ್ಣು54ಮೆಂತೆ ಕಾಳು
4ಅನಾನಸ್55ಹಲಸಂದಿ ಕಾಳು
5ಸಪೋಟ56ಹೆಸರು ಕಾಳು
6ಸೀತಾಫಲ57ಹುರುಳಿ ಕಾಳು
7ರಾಮಫಲ58ಅವರೇ ಕಾಳು
8ದ್ರಾಕ್ಷಿ59ನವಣೆ
9ಸೀಬೆಹಣ್ಣು60ಬಠಾಣಿ ಕಾಳು
10ಖರ್ಬೂಜ ಹಣ್ಣು61ಶೇಂಗಾ
11ಮಾವಿನ ಹಣ್ಣು62ಬ್ಯಾಡಗಿ ಮೆಣಸಿನಕಾಯಿ
12ಮೂಸಂಬಿ63ಬಿಳಿ ಎಳ್ಳು
13ಕಿತ್ತಳೆ64ಕರಿ ಎಳ್ಳು
14ದಾಳಿಂಬೆ65ಕೊಬ್ಬರಿ
15ಪರಂಗಿ66ಶಾವಿಗೆ
16ಅಂಜಿರ67ಕಲ್ಲು ಉಪ್ಪು
17ಕಲ್ಲಂಗಡಿ ಹಣ್ಣು68ಪುಡಿ ಉಪ್ಪು
18ಹಲಸಿನ ಹಣ್ಣು69ಹುಣಸೆ ಹಣ್ಣು
19ಮಾವಿನ ಕಾಯಿ70ಕೊಬ್ಬರಿ
20ತಾಳೆ ಹಣ್ಣು71ಬಳ್ಳೊಳ್ಳಿ ಪೇಸ್ಟ
2172ಪುಟಾಣಿ (ಕಡಲೆ ಪಪೂ)
2273ಹಪ್ಪಳ
ಅಡುಗೆ ತಯಾರಿಸಲು ಮತ್ತು ಬಡಿಸಲು ಬೇಕಾಗುವ ಸಾಮಗ್ರಿಗಳು74ಚುರಮರಿ
1ಗ್ಯಾಸ್ ಸಿಲಿಂಡರ್75ಅವಲಕ್ಕಿ
2ಒಲೆ76ಉಪ್ಪಿನಕಾಯಿ
3ಹಳೆ ದಿನ ಪತ್ರಿಕೆ77ಪುಳ್ಳಿವೋಗರೆ ಪುಡಿ
4ಮಿಕ್ಸರ್78ಪಲಾವು ಪುಡಿ
5ಚಹಾ ಕಪ್ಪ79ಬಿಸಿ ಬೇಳೆ ಬಾತ್ ಪುಡಿ
6ನೀರಿನ ಗ್ಲಾಸ್80ಗರಂ ಮಸಾಲಾ ಪುಡಿ
7ಬಾಳೆ ಎಲೆ81ಚಟ್ನಿ ಪುಡಿ
8ಪ್ಲಾಸ್ಟಿಕ್ ಚಮಚ82ಮಸಲಿ ಖಾರದ ಪುಡಿ
9ನ್ಯಾಪಕಿನ್83ಹಾಲು
10ಟೇಬಲ್ ಹಾಳೆ84ಮೊಸರು
11ಸಾಬೂನ್ ಪುಡಿ85ಖೋವಾ
86ಪನ್ನೀರ