karunada geleya

dsfdsf

ಜನ 27, 2017

ಕಿರಿಕ್ ಕೀರ್ತಿ kirik keerthi bigg boss

 ಕೀರ್ತಿ ಕುಮಾರ್ ನಿರ್ದೇಶಕ, ಕನ್ನಡ ಸುದ್ದಿ ವಾಹಿನಿಗಳ ವರದಿಗಾರ, ಮತ್ತು ಸಾಮಾಜಿಕ ಮಾಧ್ಯಮಗಳ  ಕಾರ್ಯಕರ್ತ. ಇವರು ಹಲವು ಕನ್ನಡ ಪರ ಚಟುವಟಿಕೆಗಳನ್ನು  ಸಾಮಾಜಿಕ ಮಾಧ್ಯಮದಲ್ಲಿ ದಂಗೆಯೆ ಮೂಲಕ ಹೆಸರು ಮಾಡಿರುವ "ಕಿರಿಕ್ ಕೀರ್ತಿ" ಅಪ್ಪಟ್ಟ ಕನ್ನಡದ ಕಂದ, ಭಾರತಾಂಬೆಯ ಆರಾಧಕ..!

ಡಿಸೆಂ 23, 2016



ಒಬ್ಬಳು ಹುಡುಗಿ ಒಂದು Samsung galaxy ಮೊಬೈಲ್ ಕೊಂಡು ತಂದಳು



ಒಬ್ಬಳು ಹುಡುಗಿ ಒಂದು Samsung galaxy ಮೊಬೈಲ್ ಕೊಂಡು ತಂದಳು

ತಂದೆ ಕೇಳಿದ : ಇದನ್ನು ಕೊಂಡ ಮೇಲೆ ನೀನು ಮಾಡಿದ
ಮೊದಲ ಕೆಲಸ ಏನು ?
 . . . . . . .ಮುಂದುವರಿಯಿರಿ. . . . . 

ಜನ 4, 2016

ಹೊಸ ವರ್ಷ ಸ್ವಾಗತಿಸುವುದು ಅಂದರೆ ಕೈಗೆ- ಬೀಯರ್



ಹೊಸ ವರ್ಷದ ಆರಂಭೋತ್ಸವ ದಿನ ಬಂದರೆ ನವ ಯುವಕರಿಗಂತೂ ಎಗ್ಗಿಲದ ಉಲ್ಲಾಸ ಉತ್ಸಾಹ. ಪ್ರತಿ ವರ್ಷ ಡಿಸೆಂಬರ್ 31 ರಂದು ಯುವಕರು ಹೊಸ ವರ್ಷ ಸ್ವಾಗತಿಸುವುದು ಅಂದರೆ ಕೈಗೆ- ಬೀಯರ್, ಮುಖಕ್ಕೆ -ಕೇಕ್, ಕುಣಿಯೋಕ್ಕೆ- ಡಿಸ್ಕೋ ಸಾಂಗ್, ಇದೆಲ್ಲಾ ಮಾಡೋಕ್ಕೆ ಫ್ರೆಂಡ್ಸ್. ಮುಂಜಾನೆ ಎದ್ದು ಅವರವರ ಮುಖ ಗಳು ನೋಡಿ. ಅವರೇ ಹೆದರುವಷ್ಟು ಬದಲಾಗಿರುತ್ತಾರೆ ವಿನಃ. ಆದರೆ ಅವರು ಮಾಡಿರುವ ಹೊಸ ವರುಷದ ಸ್ವಾಗತಕ್ಕೆ ಯಾವದೇ ಬದಲಾವಣೆ ಆಗಿರುವುದಿಲ್ಲಾ. See More ಕರುನಾಡ ಗೆಳೆಯ

ಬರುವಿಯಾ ? ನೀ ನನ್ನೊಂದಿಗೆ


ನವೆಂ 26, 2015

ಶ್ರೀ ಸಿದ್ದಗಂಗಾ ಮಠ


      ಅಂದು ಹಳ್ಳಿಯ ಹುಡುಗನಾಗಿ ಆಟವಾಡಿಕೊಂಡು ಶಾಲೆಗೇ ಹೋಗುತ್ತಿದವನಿಗೆ ಒಂದು ದಿನ ಅಜ್ಜಿ ಮತ್ತು ಅಜ್ಜ ನನ್ನ ಭವಿಷದ ಕನಸು ಕಂಡು.ನನ್ನನು ತುಮಕೊರಿನ ಶ್ರೀ ಸಿದ್ದಗಂಗಾ ಮಠಕ್ಕೆ ಓದಲು ಕಳಿಸಲು ತೀರ್ಮಾನಿಸಿದ್ದರು. ಅದು ನನ್ನ ವಿದ್ಯಾಬ್ಯಾಸಕ್ಕಾಗಿ ಅಷ್ಟು ದೂರ ಕಳಿಸುದು ಬೇಡ ಅಂತ ಅಕ್ಕಪಕ್ಕದ ಸಂಬಂದಿಕರು ಬೇಡ ಇಲ್ಲೇ ಹತ್ತಿರದ ಯಾವದಾದರು ಹೈಸ್ಕೂಲ್ ಗೆ ಕಳಿಸಿ ಅಷ್ಟು ದೂರ ಯಾಕ್ಕೆ? ಅಂತ . ಅಜ್ಜಿ ನನ್ನ ಮೇಲೆ ಪ್ರಾಣನೆ ಇಟುಕೊಂಡಿದ್ರು ದೂರ ಕಳಿಸುವುದಕ್ಕೆ ಅವರಿಗೂ ಇಷ್ಟ ಇಲ್ಲ ಆದರು ದೇವರ ಮೇಲೆ ಬಾರ ಹಾಕಿ ನನ್ನ ಭವಿಷಗೊಸ್ಕರ ಅವರು ಹೇಗೂ ಗಟ್ಟಿ ಮನಸು ಮಾಡಿದರು.  ಅಜ್ಜನ ಜೊತೆ ಬಸ್ ಹತ್ತಿ ಕುಳಿತುಕೊಂಡೆ ನಾನು ಹೋಗುವ ಸಂತೋಷದಲ್ಲಿ ಅಜ್ಜಿಯ ಮನಸಿನ ನೋವು ನನಗೆ ಕಾಣಸಿಲ್ಲಿಲಾ. ಅವರ ನೋವು ಅರ್ಥ ಮಾಡಿಕೊಳುವ ಶಕ್ತಿಯು ಆಗ ನನ್ನಗಿರಲಿಲ್ಲಾ. ಬಸ್ ಮುಂದೆ ಹೊರಡತ್ತಿದ ಹಾಗೆ ಅಜ್ಜಿಯ ಕಣ್ಣಲಿ ನೀರು ಬಂತು. ಆದ್ರು ಅದನು ತಡೆದು ಹೋಗಿ ಬಾ ಅಂತ ಕೈ ಬಿಸಿದರು. ಸಂಜೆಗತ್ತಲಲ್ಲಿ ಊರು ಬಿಟ್ಟಿತು ಬಸ್  ಒಂದು ರಾತ್ರಿ ಪೂರ್ತಿ ಪ್ರಯಾಣ ಮುಗಿಸಿ ಮುಂಜಾವಿನ ಸೂರ್ಯ  ಉದಯಸುತ್ತಿದ ಹಾಗೇ ತುಮಕೂರು ಸೇರಿದೆವು.

             ತುಮಕೂರಿನಿಂದ ಆರು ಕಿಲೋಮೀಟರ್ ದೊರದಲಿದ ಶ್ರೀ ಸಿದ್ದಗಂಗಾ ಮಠದ ಬೆಟ್ಟ ಕೈ ಬಿಸಿ ಕರೆಯುತ್ತಿದ ಹಾಗೆ
ಗೋಚರಿಸುತ್ತಿತ್ತು. ಐದು ರುಪಾಯಿ ಕೊಟ್ಟು ಅಲಿಂದ  ರಿಕ್ಷಾದಲ್ಲಿ ಮಠಕ್ಕೆ ಬಂದು ತಲುಪಿದೆವು. ಆಗ ತಾನೇ ಮಳೆಗಾಲ ಸುರುವಾಗಿತ್ತು. ಹನಿ ಹನಿ ತುಂತುರು ಮಳೆಯ ಜೊತೆಗೆ ಬೆಟ್ಟದಿಂದ ಸೂಸಿ ಬರುವ ತಂಗಾಳಿ ಮನಸ್ಸಿಗು ದೇಹಕು  ಏನೋ ಒಂತರಾ ತಂಪು ಅನಿಸಿತ್ತು. ಕೆಂಡದಂತ ಬಿಸಿಲು ಬೇಗೆಯಲಿ ಬೆಳೆದವನು ನಾನು ಆ ಅನುಬವ ಹೊಸದಾಗಿತ್ತು.



ಮಠದ ಆವರಣದ ಬಲಗಡೆ ಸ್ವಾಮಿಜಿಯವರು ಭಕ್ತರಿಗೆ ಸಂದರ್ಶನ ಕೊಡುವದರ ಜೊತೆಗೆ ಮಂತ್ರಸಿದ ದಾರ ಕಟ್ಟುತಿದರು. ತಾತ ನನಗೊಂದು ಕಟ್ಟಿಸಿದರು ಸ್ವಾಮಿಜಿಯವರ ಆಶೀರ್ವಾದ ಪಡೆದು ಪಕ್ಕದಲೆ ಇರುವ ಪ್ರಸಾದ ನಿಲಯದೊಳಗೆ ಹೋದರೆ ಅಲ್ಲೊಂದು ಖಜಾನೆ ಒಳಗೆ ಹಳೆಯ ಕಾಲದಲ್ಲಿ ದವಸ ದಾನ್ಯಗಳು ಕೆಡದಂತೆ ಹಾಗು ಇಲಿಯಂತ ಪ್ರಾಣಿಗಳ ಹಾವಳಿ ತಪ್ಪಿಸಲು ಉಪಯೋಗಿಸುತ್ತಿದ ತಾಮ್ರದ ಪಾತ್ರೆಗಳು ಹಾಗೆ ಮುಂದೆ ಹೋದರೆ ವಿವಿದ ತರಕಾರಿಗಳ ರಾಶಿ ವಿದ ವಿದವಾಗಿ ಜೋಡಿಸಿಟಿದನ್ನು ನೋಡುತ್ತಾ ಅಡುಗೆ ಮನೆ ಸೇರಿದೆವು

ಅಲ್ಲಿ ಯಾವದು ಒಂದು ಗೊರ ದ್ವನಿ ಒಂದು ಕಿವಿಗೆ ಬಿತ್ತು ಹತ್ತಿರ ಹೋಗಿ ನೋಡಿದರೆ ಸಾಂಬಾರ ಮಾಡುವ ಮುದುಕ ಹುಡುಗರನ ಬೈಯುತ್ತಿದ. ಕಾರಣ ಉಪ್ಪಿಟ್ಟು ಮಾಡಿದಾಗ ತಳದಲ್ಲಿ ಉಳಿದಿದ ಸಿಕ್ ತಿನ್ನಲು ಕಾಯುತ್ತಿದರಂತೆ. ಪಕ್ಕದಲ್ಲಿ ಇದ ಊಟದ ಕೊಟಡಿ

  ೨೦೦೦ ನೆ ಇಸ್ವಿ ನಲ್ಲಿ ಶ್ರೀ ಸಿದ್ದಗಂಗಾ ಮಠದ ಅದ್ಯಕ್ಷರಾದ "ಪರಮ ಪೂಜ್ಯ ಡಾ|| ಶ್ರೀ ಶಿವಕುಮಾರ ಮಾಹಾ ಸ್ವಾಮಿಗಳ" ಆಶ್ರೀವಾದದೊಂದಿಗೆ ಎಂಟನೆ ತರಗತಿಗೆ ಹೆಸರು ನೊಂದಣೆ ಮಾಡಿ. ಅಜ್ಜ ಒಂದು ವಾರ ನನ್ನ ಜೊತೆ ಉಳಿದು. ನಂತರ ಊರಿಗೆ ಹೊರಡಲು ಸಿದ್ದರಾದರು. ಆಗ "ಕೋಗಿಲೆ ಮರಿಯೊಂದು ಕಾಗೆ ಗುಡಲ್ಲಿ ಬೆಳೆಯುತ್ತಿದ"  ಹಾಗೆ ಅನಿಸಿಬಿಟ್ಟಿತು ನನ್ನ ಬದುಕು. ನನ್ನ ಕಣ್ಣಲಿ ಕಣ್ಣಿರ ಭಾಸ್ಪ ತುಂಬಿ ಬಂತು ಅಜ್ಜಾ ಎಸ್ಟೆ ಸಮಾದಾನ ಮಾಡಿದ್ರು ಅಳುವುದನು ನಿಲಿಸಕ್ಕೆ ಆಗಲಿಲ್ಲ. ಅಜ್ಜಾ ನನ್ನ ಭವಿಷದ ದಾರಿ ಹೇಗಿರಬೇಕು ಎಂದು ಸಮಾದಾನದಿಂದ ವಿವರಿಸಿ ದೈರ್ಯ ತುಂಬಿದರು. ಆಗ ಹೇಗೂ ಅವರ ವತ್ತಾಯಕೆ ಮಣಿದು ಮಠದಲೇ ಉಳಿದೆ.

ನವೆಂ 13, 2015

ಹೂವಿನಂತ ಹಾದಿ ಇದ್ದರು, ಬಿರುಗಾಳಿ ಬಿಸೋತೆ.






ಜೀವನ ಎನ್ನುವದು ಸವೆತ್ತಿರುವ ಹಾದಿ.
ಕೆಲೋಮ್ಮೆ  ಮೇಲೆ, ಕೆಲೋಮ್ಮೆ ಕೆಳಗೆ. 
ಹೂವಿನಂತ ಹಾದಿ ಇದ್ದರು, ಬಿರುಗಾಳಿ ಬಿಸೋತೆ.
ಕೆಂಡದಂಥ ಬದುಕು ಇದ್ದರು, ಹೂ ಮಳೆ ಬಿಳುತೆ. 
ಜೀವನ ಎನ್ನುವದು ಎಸ್ಟೊಂದು ನಿಗೂಡ ಅಲ್ವಾ...... 

                                           ಕರುನಾಡ ಗೆಳೆಯಾ