karunada geleya
dsfdsf
4 Jan 2016
25 Dec 2015
12 Dec 2015
26 Nov 2015
ಶ್ರೀ ಸಿದ್ದಗಂಗಾ ಮಠ
ಅಂದು ಹಳ್ಳಿಯ ಹುಡುಗನಾಗಿ ಆಟವಾಡಿಕೊಂಡು ಶಾಲೆಗೇ ಹೋಗುತ್ತಿದವನಿಗೆ ಒಂದು ದಿನ ಅಜ್ಜಿ ಮತ್ತು ಅಜ್ಜ ನನ್ನ ಭವಿಷದ ಕನಸು ಕಂಡು.ನನ್ನನು ತುಮಕೊರಿನ ಶ್ರೀ ಸಿದ್ದಗಂಗಾ ಮಠಕ್ಕೆ ಓದಲು ಕಳಿಸಲು ತೀರ್ಮಾನಿಸಿದ್ದರು. ಅದು ನನ್ನ ವಿದ್ಯಾಬ್ಯಾಸಕ್ಕಾಗಿ ಅಷ್ಟು ದೂರ ಕಳಿಸುದು ಬೇಡ ಅಂತ ಅಕ್ಕಪಕ್ಕದ ಸಂಬಂದಿಕರು ಬೇಡ ಇಲ್ಲೇ ಹತ್ತಿರದ ಯಾವದಾದರು ಹೈಸ್ಕೂಲ್ ಗೆ ಕಳಿಸಿ ಅಷ್ಟು ದೂರ ಯಾಕ್ಕೆ? ಅಂತ . ಅಜ್ಜಿ ನನ್ನ ಮೇಲೆ ಪ್ರಾಣನೆ ಇಟುಕೊಂಡಿದ್ರು ದೂರ ಕಳಿಸುವುದಕ್ಕೆ ಅವರಿಗೂ ಇಷ್ಟ ಇಲ್ಲ ಆದರು ದೇವರ ಮೇಲೆ ಬಾರ ಹಾಕಿ ನನ್ನ ಭವಿಷಗೊಸ್ಕರ ಅವರು ಹೇಗೂ ಗಟ್ಟಿ ಮನಸು ಮಾಡಿದರು. ಅಜ್ಜನ ಜೊತೆ ಬಸ್ ಹತ್ತಿ ಕುಳಿತುಕೊಂಡೆ ನಾನು ಹೋಗುವ ಸಂತೋಷದಲ್ಲಿ ಅಜ್ಜಿಯ ಮನಸಿನ ನೋವು ನನಗೆ ಕಾಣಸಿಲ್ಲಿಲಾ. ಅವರ ನೋವು ಅರ್ಥ ಮಾಡಿಕೊಳುವ ಶಕ್ತಿಯು ಆಗ ನನ್ನಗಿರಲಿಲ್ಲಾ. ಬಸ್ ಮುಂದೆ ಹೊರಡತ್ತಿದ ಹಾಗೆ ಅಜ್ಜಿಯ ಕಣ್ಣಲಿ ನೀರು ಬಂತು. ಆದ್ರು ಅದನು ತಡೆದು ಹೋಗಿ ಬಾ ಅಂತ ಕೈ ಬಿಸಿದರು. ಸಂಜೆಗತ್ತಲಲ್ಲಿ ಊರು ಬಿಟ್ಟಿತು ಬಸ್ ಒಂದು ರಾತ್ರಿ ಪೂರ್ತಿ ಪ್ರಯಾಣ ಮುಗಿಸಿ ಮುಂಜಾವಿನ ಸೂರ್ಯ ಉದಯಸುತ್ತಿದ ಹಾಗೇ ತುಮಕೂರು ಸೇರಿದೆವು.
ತುಮಕೂರಿನಿಂದ ಆರು ಕಿಲೋಮೀಟರ್ ದೊರದಲಿದ ಶ್ರೀ ಸಿದ್ದಗಂಗಾ ಮಠದ ಬೆಟ್ಟ ಕೈ ಬಿಸಿ ಕರೆಯುತ್ತಿದ ಹಾಗೆ
ಗೋಚರಿಸುತ್ತಿತ್ತು. ಐದು ರುಪಾಯಿ ಕೊಟ್ಟು ಅಲಿಂದ ರಿಕ್ಷಾದಲ್ಲಿ ಮಠಕ್ಕೆ ಬಂದು ತಲುಪಿದೆವು. ಆಗ ತಾನೇ ಮಳೆಗಾಲ ಸುರುವಾಗಿತ್ತು. ಹನಿ ಹನಿ ತುಂತುರು ಮಳೆಯ ಜೊತೆಗೆ ಬೆಟ್ಟದಿಂದ ಸೂಸಿ ಬರುವ ತಂಗಾಳಿ ಮನಸ್ಸಿಗು ದೇಹಕು ಏನೋ ಒಂತರಾ ತಂಪು ಅನಿಸಿತ್ತು. ಕೆಂಡದಂತ ಬಿಸಿಲು ಬೇಗೆಯಲಿ ಬೆಳೆದವನು ನಾನು ಆ ಅನುಬವ ಹೊಸದಾಗಿತ್ತು.
ಮಠದ ಆವರಣದ ಬಲಗಡೆ ಸ್ವಾಮಿಜಿಯವರು ಭಕ್ತರಿಗೆ ಸಂದರ್ಶನ ಕೊಡುವದರ ಜೊತೆಗೆ ಮಂತ್ರಸಿದ ದಾರ ಕಟ್ಟುತಿದರು. ತಾತ ನನಗೊಂದು ಕಟ್ಟಿಸಿದರು ಸ್ವಾಮಿಜಿಯವರ ಆಶೀರ್ವಾದ ಪಡೆದು ಪಕ್ಕದಲೆ ಇರುವ ಪ್ರಸಾದ ನಿಲಯದೊಳಗೆ ಹೋದರೆ ಅಲ್ಲೊಂದು ಖಜಾನೆ ಒಳಗೆ ಹಳೆಯ ಕಾಲದಲ್ಲಿ ದವಸ ದಾನ್ಯಗಳು ಕೆಡದಂತೆ ಹಾಗು ಇಲಿಯಂತ ಪ್ರಾಣಿಗಳ ಹಾವಳಿ ತಪ್ಪಿಸಲು ಉಪಯೋಗಿಸುತ್ತಿದ ತಾಮ್ರದ ಪಾತ್ರೆಗಳು ಹಾಗೆ ಮುಂದೆ ಹೋದರೆ ವಿವಿದ ತರಕಾರಿಗಳ ರಾಶಿ ವಿದ ವಿದವಾಗಿ ಜೋಡಿಸಿಟಿದನ್ನು ನೋಡುತ್ತಾ ಅಡುಗೆ ಮನೆ ಸೇರಿದೆವು
ಅಲ್ಲಿ ಯಾವದು ಒಂದು ಗೊರ ದ್ವನಿ ಒಂದು ಕಿವಿಗೆ ಬಿತ್ತು ಹತ್ತಿರ ಹೋಗಿ ನೋಡಿದರೆ ಸಾಂಬಾರ ಮಾಡುವ ಮುದುಕ ಹುಡುಗರನ ಬೈಯುತ್ತಿದ. ಕಾರಣ ಉಪ್ಪಿಟ್ಟು ಮಾಡಿದಾಗ ತಳದಲ್ಲಿ ಉಳಿದಿದ ಸಿಕ್ ತಿನ್ನಲು ಕಾಯುತ್ತಿದರಂತೆ. ಪಕ್ಕದಲ್ಲಿ ಇದ ಊಟದ ಕೊಟಡಿ
೨೦೦೦ ನೆ ಇಸ್ವಿ ನಲ್ಲಿ ಶ್ರೀ ಸಿದ್ದಗಂಗಾ ಮಠದ ಅದ್ಯಕ್ಷರಾದ "ಪರಮ ಪೂಜ್ಯ ಡಾ|| ಶ್ರೀ ಶಿವಕುಮಾರ ಮಾಹಾ ಸ್ವಾಮಿಗಳ" ಆಶ್ರೀವಾದದೊಂದಿಗೆ ಎಂಟನೆ ತರಗತಿಗೆ ಹೆಸರು ನೊಂದಣೆ ಮಾಡಿ. ಅಜ್ಜ ಒಂದು ವಾರ ನನ್ನ ಜೊತೆ ಉಳಿದು. ನಂತರ ಊರಿಗೆ ಹೊರಡಲು ಸಿದ್ದರಾದರು. ಆಗ "ಕೋಗಿಲೆ ಮರಿಯೊಂದು ಕಾಗೆ ಗುಡಲ್ಲಿ ಬೆಳೆಯುತ್ತಿದ" ಹಾಗೆ ಅನಿಸಿಬಿಟ್ಟಿತು ನನ್ನ ಬದುಕು. ನನ್ನ ಕಣ್ಣಲಿ ಕಣ್ಣಿರ ಭಾಸ್ಪ ತುಂಬಿ ಬಂತು ಅಜ್ಜಾ ಎಸ್ಟೆ ಸಮಾದಾನ ಮಾಡಿದ್ರು ಅಳುವುದನು ನಿಲಿಸಕ್ಕೆ ಆಗಲಿಲ್ಲ. ಅಜ್ಜಾ ನನ್ನ ಭವಿಷದ ದಾರಿ ಹೇಗಿರಬೇಕು ಎಂದು ಸಮಾದಾನದಿಂದ ವಿವರಿಸಿ ದೈರ್ಯ ತುಂಬಿದರು. ಆಗ ಹೇಗೂ ಅವರ ವತ್ತಾಯಕೆ ಮಣಿದು ಮಠದಲೇ ಉಳಿದೆ.
13 Nov 2015
3 Nov 2015
ಸಪ್ತಪದಿ ಸೂತ್ರಗಳು, 7 Steps in Hindu Marriage in Kannada
ಸಪ್ತಪದಿ ಸೂತ್ರಗಳು
ಏಳನೆಯ ಹೆಜ್ಜೆ....... ಸಖಾ ಸಪ್ತಪದೀ ಭವ
ಸ್ನೇಹಕ್ಕಾಗಿ ಈ ಜೋಡಿಹೆಜ್ಜೆ.
ಆರನೆಯ ಹೆಜ್ಜೆ ...... ಋತುಭ್ಯ: ಷಟ್ಪದೀ ಭವ.
ನಿಯಮಿತ ಜೀವನಕ್ಕಾಗಿ ಈ ಜೋಡಿಹೆಜ್ಜೆ.
ಐದನೆಯ ಹೆಜ್ಜೆ ....... ಪ್ರಜಾಭ್ಯ: ಪಂಚಪದೀ ಭವ.
ಉತ್ತಮ ಸಂತಾನಕ್ಕಾಗಿ ಐದನೆಯ ಜೋಡಿಹೆಜ್ಜೆ
ನಾಲ್ಕನೆಯ ಹೆಜ್ಜೆ ....... ಮಯೋಭವ್ಯಾಯ ಚತುಪ್ಪದೀ ಭವ.
ಸುಖ, ಆನಂದಕ್ಕಾಗಿ ನಾಲ್ಕನೆಯ ಜೋಡಿಹೆಜ್ಜೆ.
ಮೂರನೆಯ ಹೆಜ್ಜೆ....... ರಾಯಸ್ಪೋಷಾಯ ತ್ರಿಪದೀ ಭವ.
ಸಾಧನ ಸಂಪತ್ತಿಗಾಗಿ, ಇಂತಹ ಸಾಧನಗಳ ಸಂಗ್ರಹಣೆ,
ರಕ್ಷಣೆ, ಸದುಪಯೋಗಗಳಿಗಾಗಿ ಈ ಜೋಡಿಹೆಜ್ಜೆ.
ಎರಡನೆಯ ಹೆಜ್ಜೆ ...... ಊರ್ಜೀ ದ್ವಿಪದೀ ಭವ.
ಬಲ, ಆರೋಗ್ಯಗಳಿಗಾಗಿ ಈ ಜೋಡಿಹೆಜ್ಜೆ
ಮೊದಲನೆಯ ಹೆಜ್ಜೆ ......... ಇಷ ಏಕಪದೀ ಭವ.
ಅನ್ನಹಾರಗಳ ಸಲುವಾಗಿ, ಇಚ್ಚಾಶಕ್ತಿಗಳ ಸಲುವಾಗಿ ಈ ಜೋಡಿಹೆಜ್ಜೆ.
ನಿಮ್ಮ ಕರುನಾಡ ಗೆಳೆಯಾ .....
12 Jun 2013
"ಐ ಲವ್ ಯು ಅಂತ ಹೇಳಿದ್ರೆ"
"ಬೆಂಗಳೂರನಲ್ಲಿ ಸೈಟ ಸಿಗೋದು
ಬಿ.ಎಮ್. ಟಿ ಸಿ ಬಸ್ನಲ್ಲಿ ಸಿಟ್ ಸಿಗೋದು
ಕಾಲೇಜ್ ಹುಡಿಗಿಯರ ಖಾಲಿ ಹಾರ್ಟ್ ಸಿಗೋದು"
ತುಂಬಾ ಕಮ್ಮಿರಿ ಅಂತದ್ರಲ್ಲಿ
ಜೀನ್ಸ್ ಪ್ಯಾಂಟು ಟಿ ಶರ್ಟ್
ಬಾಟಾ ಷೋ ಹಾಕೊಂಡು
ಎಡಬಿಡಯಂಗೆ ಓಡಾಡಿಕೊಂಡು
ಎಂಟು ಜೊತೆ ಎಕ್ಕಡ ಸವಿಸಿಕೊಂಡು
ಕಾಲು ನೋವು ಅಂತ ಡಾಕ್ಟರ್ ಹತ್ರ ಹೋದ್ರೆ
ಡಾಕ್ಟರ್ ಮೊಳಕಾಲು ಮೂಳೆ ಸವಿದಿದ್ದೆ
ಕಾಲೇ ತಗಿಬೇಕು ಅಂತಾರೆ ರೀ
ಅಂತದ್ರಲ್ಲಿ ನಿಮ್ಮನೆ ನೆನಸಿ
ನಿಮ್ಮ ಹತ್ರ ನೇರವಾಗಿ ಬಂದು ಐ ಲವ್ ಯು ಅಂತ ಹೇಳಿದ್ರೆ
ಅವನ/ಅವಳ ಪ್ರೀತಿ ಅರ್ಥ ಮಾಡಿಕೊಳಕ್ಕಾಗದಿದ್ರು.
ಅವನ/ಅವಳ ನೋವನಾದ್ರು ಅರ್ಥ ಮಾಡಿಕೊಡು
ಶ್ವಾಂತನ ಹೇಳಿ ಸಾಕು.
ನಿಮ್ಮನು ಹರಿಸಿ ಬಂದ ಜೀವ ಬದುಕಬಹುದು.
ಇಂತಿ ನಿನ್ನ
ಕರುನಾಡ ಗೆಳೆಯ.
ಬಿ.ಎಮ್. ಟಿ ಸಿ ಬಸ್ನಲ್ಲಿ ಸಿಟ್ ಸಿಗೋದು
ಕಾಲೇಜ್ ಹುಡಿಗಿಯರ ಖಾಲಿ ಹಾರ್ಟ್ ಸಿಗೋದು"
ತುಂಬಾ ಕಮ್ಮಿರಿ ಅಂತದ್ರಲ್ಲಿ
ಜೀನ್ಸ್ ಪ್ಯಾಂಟು ಟಿ ಶರ್ಟ್
ಬಾಟಾ ಷೋ ಹಾಕೊಂಡು
ಎಡಬಿಡಯಂಗೆ ಓಡಾಡಿಕೊಂಡು
ಎಂಟು ಜೊತೆ ಎಕ್ಕಡ ಸವಿಸಿಕೊಂಡು
ಕಾಲು ನೋವು ಅಂತ ಡಾಕ್ಟರ್ ಹತ್ರ ಹೋದ್ರೆ
ಡಾಕ್ಟರ್ ಮೊಳಕಾಲು ಮೂಳೆ ಸವಿದಿದ್ದೆ
ಕಾಲೇ ತಗಿಬೇಕು ಅಂತಾರೆ ರೀ
ಅಂತದ್ರಲ್ಲಿ ನಿಮ್ಮನೆ ನೆನಸಿ
ನಿಮ್ಮ ಹತ್ರ ನೇರವಾಗಿ ಬಂದು ಐ ಲವ್ ಯು ಅಂತ ಹೇಳಿದ್ರೆ
ಅವನ/ಅವಳ ಪ್ರೀತಿ ಅರ್ಥ ಮಾಡಿಕೊಳಕ್ಕಾಗದಿದ್ರು.
ಅವನ/ಅವಳ ನೋವನಾದ್ರು ಅರ್ಥ ಮಾಡಿಕೊಡು
ಶ್ವಾಂತನ ಹೇಳಿ ಸಾಕು.
ನಿಮ್ಮನು ಹರಿಸಿ ಬಂದ ಜೀವ ಬದುಕಬಹುದು.
ಇಂತಿ ನಿನ್ನ
ಕರುನಾಡ ಗೆಳೆಯ.
2 Feb 2013
Subscribe to:
Posts (Atom)